ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಗಣನಿಯವಾಗಿ ಏರಿಕೆ ಕಾಣುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಫೋನ್ ಮೂಲಕ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವ ಮೂಲಕ ನಾಪತ್ತೆಯಾಗಿದ್ದಾರೆ. ಕೋವಿಡ್-19 ನಿರ್ವಹಣೆಗಾಗಿ ಬೆಂಗಳೂರು ಮಾದರಿಯಲ್ಲಿ ಮತ್ತೊಬ್ಬ ಸಚಿವರನ್ನು ನೇಮಿಸಬೇಕೆಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಮಹಮ್ಮದ್ ಅಜಗರ್ ಚುಲಬುಲ್ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಮಹಾಮಾರಿ ವಿರುದ್ಧ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ಅವರು ಏಕಾಂಗಿಯಾಗಿ ಹಗಳಿರುಳು ಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬೆಡ್ ಗಳ ಕೊರತೆ ಹೆಚ್ಚಾಗುತ್ತಿದೆ. ಸಣ್ಣ ಪ್ರಮಾಣದ ಲಕ್ಷಣ ಹೊಂದಿರುವ ರೋಗಿಗಳಿಗೆ ದೆಹಲಿ ಮಾದರಿಯ ರೀತಿಯಲ್ಲಿ ಮನೆಯಲ್ಲಿಯೇ ಪ್ರತ್ಯಕ ಕೊಣೆಯಲ್ಲಿ ಹೋಂ ಐಸೂಲೇಷನ್ ಮಾಡಿ, ಆಕ್ಸಿ ಮೀಟರ್ ನೀಡಿ ಉತ್ತಮ ಚಿಕಿತ್ಸೆ ನೀಡಬಹುದಾಗಿದೆ ಎಂದು ತಿಳಿಸಿದರು.
ವೈದ್ಯರ ಕೊರತೆ ನಿವಾರಿಸಲು ವೈದ್ಯಕೀಯ ಪದವಿ ಪಡೆಯುತ್ತಿರುವ ಫೈನಲ್ ಇಯರ್ ಓದುತಿರುವ ವೈದ್ಯರ, ನರ್ಸಗಳು ಅಥವಾ ಗುತ್ತಿಗೆ ಆಧಾರದ ಮೇಲೆ ವೈದ್ಯರು ಹಾಗೂ ನರ್ಸಗಳನ್ನು ನೇಮಕ ಮಾಡಿಕೊಂಡು ಸೇವೆ ಪಡೆದು ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳಬಹುದೆಂದು ತಿಳಿಸಿದ್ದಾರೆ.
ಬೆಡ್ ಗಳ ಮಾಹಿತಿ ಇಲ್ಲದೇ ರೋಗಿಗಳು ತೊಂದರೆ ಅನುಭವಿಸುತ್ತಿದ್ದು, ಮುಬೈಲ್ ಆಪ್ ಮೂಲಕ ಖಾಲಿ ಬೆಡ್ ಗಳ ಮಾಹಿತಿ ಜನರಿಗೆ ತಲುಪಿಸುವ ಕೆಲಸ ನಡೆಸಬೇಕೆಂದು ಅವರು ಮನವಿ ಮಾಡಿದ್ದಾರೆ.