ಬಂಡಾಯ ಸಾಹಿತಿ ಸಂಗಣ್ಣ ಹೂಸಮನಿ ಇನ್ನಿಲ್ಲ

0
95

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಎ ಸಿ ಸಿ ಸಿಮೆಂಟ್ ಕಂಪನಿಯ ನಿವೃತ್ತ ಕಾರ್ಮಿಕ, ಕಮೂನಿಷ್ಟ ಚಿಂತಕ, ಬಂಡಾಯ ಸಾಹಿತಿ, ಕಾಮ್ರೇಡ್ ಸಂಗಣ್ಣ ಹೂಸಮನಿ(75) ಅವರು ಸೋಮವಾರ ಕಲಬುರಗಿಯ ಸರ್ಕಾರಿ ಆಸ್ಪತ್ರೆಯಲ್ಲಿ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ ಅವರ ಸ್ವತಃ ಊರಾದ ಜೇವರ್ಗಿ ತಾಲೂಕಿನ ಕುಕನೂರು ಗ್ರಾಮದಲ್ಲಿ ಸೋಮವಾರ ಅಂತ್ಯಕ್ರಿಯೆ ನೆರವೇರಲಿದೆ‌‌ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇತ್ತೀಚಿಗೆ ಫೆಬ್ರುವರಿಯಲ್ಲಿ ಕಲಬುರಗಿ ನಗರದಲ್ಲಿ ನಡೆದ 85ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಬಂಡಾಯ ಕಾವ್ಯವಾಚಿಸುವ ಮೂಲಕ ಜನರ ಧ್ವನಿಯನ್ನು ಮೋಳಗಿಸಿದರು. ಇವರ ಸಾಹಿತ್ಯ ಕೃಷಿಯಿಂದ ಒಂದು ನಾಟಕ, ಮೂರು ಕವನ ಸಂಕಲನ, ಸಾಹಿತ್ಯ ಲೋಕಕ್ಕೆ ಅರ್ಪಣೆಯಾಗಿವೆ. ಇವರ ಕಾವ್ಯಗಳು ಕಲಬುರಗಿ ಆಕಾಶವಾಣಿ ಕಲಾವಿದರ ಕಂಠ ಸಿರಿಯಲ್ಲಿ ಮೂಡಿಬರುವ ಮೂಲಕ ನಾಡಿನ ಜನಮನ ತಲುಪಿವೆ‌.

Contact Your\'s Advertisement; 9902492681

ಹಿರಿಯ ಕಮೂನಿಷ್ಟ ನಾಯಕ ದಿ. ಕಾಮ್ರೇಡ್ ಶ್ರೀನಿವಾಸ ಗುಡಿ ಅವರ ಗರಡಿಯಲ್ಲಿ ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಕಾಲ್೯ಮಾಕ್ಸ್ ಅವರ ಕನಸಿಗೆ ಪೂರಕವಾಗಿ ಸಾಹಿತ್ಯದಲ್ಲಿ ಕೃಷಿಯಲ್ಲಿ ತೊಡಗಿಕೊಂಡ ಇವರು ಸಿಪಿಐ ಪಕ್ಷದಿಂದ ಪ್ರಕಟವಾಗುವ ಕೆಂಬಾವುಟ ಪತ್ರಿಕೆಯಲ್ಲಿ ಹಲವು ಕವಿತೆ ಮತ್ತು ಲೇಖನಗಳನ್ನು ಅಚ್ಚಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಮಿಕರ ಬದುಕು ಬವಣೆಯ ಕುರಿತು ಸದಾ ಮರುಗಿತ್ತಿದ್ದರು. ಮಾಲೀಕರ ಶೋಷಣೆಯ ವಿರುದ್ಧ ಕವಿತೆ ಕಟ್ಟಿ ಗುಡುಗುತ್ತಿದ್ದರು. ಅವರು ವಾಚಿಸುವ ಕಾವ್ಯ ಶೈಲಿ ಗುಡುಗು ಸಿಡಿಲಿನಂತಿರುತ್ತಿತ್ತು. ಇಂತಹ ಒಬ್ಬ ಕಮೂನಿಷ್ಟ ನಾಯಕರು ಅಗಲಿದ್ದು ಬಂಡಾಯ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ ಕಳಚಿದಂತಾಗಿದೆ.

ಸಾಹಿತ್ಯ ಬಳಗದಿಂದ ಸಂತಾಪ: ಸಂಚಲನ ಸಾಹಿತ್ಯ ವೇದಿಕೆ ವಾಡಿಯ ಅಧ್ಯಕ್ಷರಾದ ವಿಕ್ರಂ ನಿಂಬರ್ಗಾ, ಪ್ರಧಾನ ಕಾರ್ಯದರ್ಶಿ ಶ್ರಾವಣಕುಮಾರ್ ಮೋಸಲಗಿ, ಕನ್ನಡ ಸಾಹಿತ್ಯ ಪರಿಷತ್ತು ವಲಯ ಘಟಕದ ಅಧ್ಯಕ್ಷ ಖೇಮಾಲಿಂಗ ಬೆಳಮಗ್ಗಿ, ಕಸಾಪ ಗೌರವ ಕಾರ್ಯದರ್ಶಿಗಳಾದ ಸಿದ್ದಯ್ಯಾ ಶಾಸ್ತ್ರೀ ನಂದೂರಮಠ, ಹರಿಶ್ಚಂದ್ರ ಕರ್ಣಿಕ, ದೇವಿಂದ್ರ ಕರದಳ್ಳಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಮಲ್ಲೇಶ್ ನಾಟೇಕರ್ ಹಾಗೂ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮಡಿವಾಳಪ್ಪ ಹೇರೂರ್, ಎಸ್ ಯೂ ಸಿ ಐ ಕಾರ್ಯದರ್ಶಿ ವೀರಭದ್ರಪ್ಪ‌ ಆರ್ ಕೆ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣಾ ಕಲಶೆಟ್ಟಿ ಸೇರಿದಂತೆ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here