ಸುರಪುರ: ಮಾದಿಗ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಅಧ್ಯಕ್ಷರನ್ನಾಗಿ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದ ದೇವಿಂದ್ರಪ್ಪ ಜೆ.ದೊಡ್ಮನಿಯವರನ್ನು ನೇಮಕಗೊಳಿಸಲಾಗಿದೆ.
ಸಮಿತಿಯ ರಾಜ್ಯಾಧ್ಯಕ್ಷ ಎಂ.ಎನ್.ಬಿಲ್ಲಾರ್ ಯಾದಗಿರಿ ಪ್ರವಾಸ ಮಂದಿರದಲ್ಲಿ ನಡೆದ ಸಭೆಯಲ್ಲಿ ಆದೇಶ ಹೊರಡಿಸಿದ್ದು,ದೇವಿಂದ್ರಪ್ಪ ದೊಡ್ಮನಿಯವರು ನಮ್ಮ ಮಾದಿಗ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಇಂದಿನಿಂದಲೆ ಕಾರ್ಯೋನ್ಮುಖರಾಗುವಂತೆ ಕರೆ ನೀಡಿದರು.ಯಾದಗಿರಿ ಜಿಲ್ಲೆಯಾದ್ಯಂತ ಮಾದಿಗ ಸಮುದಾಯದ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂಧಿಸುವ ಜೊತೆಗೆ ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಧಕ್ಕೆ ಬಾರದಂತೆ ಜಿಲ್ಲೆಯಲ್ಲಿ ಸಂಘಟನೆಯನ್ನು ಕಟ್ಟುವಂತೆ ತಿಳಿಸಿ ಆದೇಶ ಪತ್ರ ನೀಡಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮಾದಿಗ ಸಂಘರ್ಷ ಸಮಿತಿಯ ರಾಜ್ಯ ಕಾರ್ಯದರ್ಶಿಯನ್ನಾಗಿ ಲಕ್ಷ್ಮಣ ಗುಡಿಮನಿಯವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಯಿತು.