’ಬಿಜೆಪಿ ಮತ್ತು ಕಾರ್ಪೊರೇಟ್ ಓಡಿಸಿ ದೇಶ ಉಳಿಸಿ’ ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ

0
33

ಕಲಬುರಗಿ: ಬಿಜೆಪಿ ಮತ್ತು ಕಾರ್ಪೊರೇಟ್ ಓಡಿಸಿ ದೇಶ ಉಳಿಸಿ ಘೋಷಣೆಯೊಂದಿಗೆ ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

’ದೇಶವನ್ನು ಬಡತನಕ್ಕೆ ತಳ್ಳಿ ದೇಶದ ಸಂಪತ್ತನ್ನು ಕಾರ್ಪೋರೇಟಿಗರ ಪಾಲು ಮಾಡಲೆಂದೇ ಪ್ರದಾನಿ ನರೇಂದ್ರ ಮೋದಿ ಪಣ ತೊಟ್ಟಂತಿದೆ. ಆದ್ದರಿಂದಲೇ ಎಲ್ ಐ ಸಿ, ರೇಲ್ವೆ, ಏರ್ ಇಂಡಿಯಾ ಹೀಗೆ ಎಲ್ಲವನ್ನೂ ಖಾಸಗಿಕರಣ ಮಾಡಲಾಗಿದೆ. ಜನತೆಯ ಚಳುವಳಿಗಳನ್ನು  ಹತ್ತಿಕ್ಕಲು ಕೋವಿಡ್ ಬಳಸಿಕೊಳ್ಳಲಾಗುತಿದೆ. ಜನರನ್ನು ಭಯಗ್ರಸ್ಥಗೊಳಿಸಿ ಕರಾಳ ಕಾಯ್ದೆಗಳನ್ನು ತರಲಾಗಿದೆ, ಕಾರ್ಮಿಕ ರೈತ ವಿರೋಧಿ ಕಾಯ್ದೆಗಳು ಬಂದಿವೆ. ನಿರುದ್ಯೋಗ ಮುಗಿಲು ಮುಟ್ಟಿದೆ. ಆದರೆ ಇವರಿಗೆ ದೇಶ ಒಡೆದು ಮಂದಿರ ಕಟ್ಟುವ ಚಿಂತೆ ಇದೆ. ಕ್ವಿಟ್ ಇಂಡಿಯಾ ಚಳುವಳಿಯ ಬೆಳಕನ್ನು ಬೆನ್ನಿಗಿಟ್ಟುಕೊಂಡು ಎಡಪಕ್ಷಗಳು ದೇಶ ಉಳಿಸಿ ಎಂಬ ದೇಶಪ್ರೇಮಿ ಆಂದೋಲನಕ್ಕೆ ಕರೆ ಕೊಟ್ಟಿವೆ. ಈಗ ಆರಂಭವಾಗಿದೆ ಹೋರಾಟ. ಕಾರ್ಪೊರೇಟ್ ಪರವಾದ ಸರಕಾರ ತೊಲಗಿಸಿ ದೇಶ ಉಳಿಸಿಯೇ ವಿಶ್ರಾಂತಿ. ಅಲ್ಲಿವರೆಗೂ ನಿಲ್ಲದು ಹೋರಾಟ ಎಂದು ಜನವಾದಿ ಮಹಿಳಾ ಸಂಘಟನೆಯ ಕೆ ನೀಲಾ ಹೇಳಿದರು.

Contact Your\'s Advertisement; 9902492681

ದೇಶದ ಸಂವಿಧಾನವನ್ನು ಬುಡಮೇಲು ಮಾಡಿ ದೇಶವನ್ನು ಲೂಟಿ ಮಾಡುತ್ತಿದೆ ಬಿಜೆಪಿ ಸರಕಾರ. ಕೊವಿಡ್ ನೆಪದಲ್ಲಿ ಜನರನ್ನು ಕತ್ತಲಲ್ಲಿಟ್ಟು ಕರಾಳ ಕಾಯ್ದೆ ತರುತಿದೆ.  ನಿರುದ್ಯೋಗ ನಿವಾರಣೆಗೆ ಒಂದೇ ಒಂದು ಯೋಜನೆ ರೂಪಿಸಲಿಲ್ಲ. ಕರ್ನಾಟಕದಲ್ಲಿ ಯಂತೂ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರ ಭೂಮಿಯನ್ನು  ಕಸಿಯಲು ಹೊರಟಿದೆ. ವಿದೇಶಾಂಗ ನೀತಿಯು ಸಾಮ್ರಾಜ್ಯ ಶಾಹಿ ಪರವಾದ ಧೋರಣೆಯಿಂದ ಕೂಡಿದೆ. ಕೋವಿಡ್ ನಲ್ಲಿ ಜನತೆಯ ಆರೋಗ್ಯ ರಕ್ಷಣೆಯ ಹೊಣೆಯಿಂದ ನುಣುಚಿಕೊಂಡಿದೆ. ಪ್ರಜಾಪ್ರಭುತ್ವ ದ ಎಲ್ಲ ಅಂಗಗಳನ್ನು ದುರ್ಬಲಗೊಳಿಸಿ ದೇಶವನ್ನೇ ಮಾರಾಟ ಮಾಡಲಾಗುತಿದೆ. ಕಾಂಗ್ರೆಸ ಸಹ ಈಗ ಬಿಜೆಪಿಯ ಅಂಗ ಪಕ್ಷದಂತೇ ಎಂಬುದು ರಾಮಮಂದಿರ ಶಿಲಾನ್ಯಾಸದ ಸಮಯದಲ್ಲಿ ಸಾಬೀತುಗೊಳಿಸಿದೆ. ಈ ಹೊತ್ತಿನಲ್ಲಿ ಎಡಪಕ್ಷಗಳು ದೇಶ ಸ್ವಾತಂತ್ರ್ಯ ಉಳಿಸುವ ದೇಶ ರಕ್ಷಿಸುವ ಹೊಣೆ ನಿರ್ವಹಿಸುತ್ತಿವೆ. ಇಂದು ದೇಶದಾದ್ಯಂತ ದೇಶ ಉಳಿಸಿ ಆಂದೋಲನ ಕರೆ ಕೊಡಲಾಗಿದೆ ಎಂದು ಕಾರ್ಮಿಕ ಮುಖಂಡರಾದ ಕಾ.ಎಂ.ಬಿ.ಸಜ್ಜನ್ ಹೇಳಿದರು.

‘ದೇಶದ ಭಾವೈಕ್ಯ ಪರಂಪರೆಗೆ ಧಕ್ಕೆ ತಂದಿರುವ ಬಿಜೆಪಿ ಸರಕಾರವು ಆಡಳಿತ ನಡೆಸುವ ಯೋಗ್ಯತೆ ಹೊಂದಿಲ್ಲ. ಆದ್ದರಿಂದಲೇ ಕಾರ್ಪೊರೇಟ್ ಕ್ವಿಟ್ ಇಂಡಿಯಾ ಎಂದು ಹೇಳಲೇಬೇಕಿದೆ’ ಸಿಪಿಐ(ಎಂ) ಪಕ್ಷದ ಶಾಖಾ ಕಾರ್ಯದರ್ಶಿ ಮೊಹ್ಮದ್ ಮುಖದುಮ್ ಹೇಳಿದರು.

ಸಿಪಿಐ(ಎಂ) ಜಿಲ್ಲಾ ಸಮಿತಿಯ ಕಾರ್ಯದರ್ಶಿ ಗಳಾದ ಕಾ.ಶರಣಬಸವ ಮಮಶೆಟ್ಟಿ ಮಾತನಾಡಿ ’ದೇಶ ಮಾರಲು ಬಿಡುವುದಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಆರ್ ಎಸ್ ಎಸ್ ಮಾತಿನಂತೆ ಬಿಜೆಪಿ ದೇಶ ನಡೆಸುತಿದೆ. ಸಂವಿಧಾನವನ್ನು ಅಪ್ರಸ್ತುತಗೊಳಿಸುವ ಷಡ್ಯಂತ್ರ ಮಾಡುತಿದೆ ಬಿಜೆಪಿ. ಆದರೆ ಎಡಪಕ್ಷಗಳು  ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿವೆ. ಮತ್ತು ಈಗ ದೇಶ ಉಳಿಸಲೂ ರಾಜಿರಹಿತ ಹೋರಾಟ ಮಾಡುತ್ತಿವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕಾ.ಅಲ್ತಾಫ್ ಇನಾಮದಾರ್, ಶ್ರೀಮಂತ ಬಿರಾದಾರ, ಗುರು, ಅಶೋಕ, ಸಿದ್ದು, ಚಂದಮ್ಮ ಗೋಳಾ, ಇಂದುಮತಿ, ಮಜಾಂತೇಶ ಕಲಬುರಗಿ ಮುಂತಾದವರು ಭಾಗವಹಿಸಿರುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here