ಕಲಬುರಗಿ: ತಾವರಗೇರಾ ಕ್ರಾಸ್ ಹತ್ತಿರ ಬೈಕ್ ಮೇಲೆ ಹೋಗುತ್ತಿದ್ದ ದಂಪತಿಗಳನ್ನು ತಡೆದು ಚಾಕು ತೊರಿಸಿ 80 ಸಾವಿರ ಚಿನ್ನದ ಲಾಕೆಟ್ ಮತ್ತು ಸುತ್ತರನ್ನು ದೋಚಿಕೊಂಡು ಪರಾರಿಯಾಗಿರುವ ಆರೋಪಿಯನ್ನು ಗ್ರಾಮೀಣ ಪೊಲೀಸರು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಂಜೀವ ನಗರ ಕಾಲೋನಿಯ ನಿವಾಸಿಯಾದ ಆರೋಪಿ ಶ್ರೀನಿವಾಸ ಗೋಪಾಲ ವಾಲಿಕರ(22) ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಸೋಮಲಿಂಗ ಕಿರೆದಳ್ಳಿ ಸಿಬ್ಬಂದಿ ಅಂಬಾಜಿ ಧನೆಕರ, ಮಲ್ಲಿಕಾರ್ಜುನ, ಶಿವಶರಣಪ್ಪಾ ಮಂಗಲಗಿ, ಪ್ರಕಾಶ ಬಾಗೆವಾಡಿ , ನಾಗೆಂದ್ರ ಸಗರ , ಅನೀಲ್ ರಾಠೋಡ. ಬಂಡೆಪ್ಪಾ , ಶ್ರೀನಾಥ , ಚನ್ನಬಸಯ್ಯಾ ಮಠಪತಿ, ಶರಣು ನರಗಾ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ್ದಾರೆ.