ಕಲಬುರಗಿ: ಕೊರೋನಾ ಸೋಂಕಿನಿಂದ ಚಿತ್ತಾಪುರ ತಾಲೂಕಿನ ರಾವೂರಿನ ಗಣೇಶ ನಗರದ 57 ವರ್ಷದ ಪುರುಷ (186092) ನಿಧನರಾಗಿರುವ ಬಗ್ಗೆ ಸೋಮವಾರ ದೃಢವಾಗಿದ್ದು, ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಇದೂವರೆಗೆ ಮೃತರಾದವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಇವರು ಆ.5 ರಂದು ಆಸ್ಪತ್ರೆಗೆ ದಾಖಲಾಗಿ ಆ.9 ರಂದು ನಿಧನ ಹೊಂದಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.