ಜೇವರ್ಗಿ: ರಾಜ್ಯ ವ್ಯಾಪ್ತಿ ಯಾಗಿ ದುಡಿಯುವ ಕಾರ್ಮಿಕರು ಹಾಗೂ ಕಾರ್ಮಿಕರ ಸಂಘಟನೆಗಳ ಒಕ್ಕೂಟ ಸೇರಿಕೊಂಡು ರಚಿಸಿಕೊಂಡಿರುವ ಸಂಘಟನೆಯ ಸಂಯುಕ್ತ ಕಾರ್ಮಿಕರ ಟ್ರೇಡ್ ಯೂನಿಯನ್ ನ ಪರವಾಗಿ ರಾಜ್ಯ ವ್ಯಾಪಕವಾಗಿ ಕರೆನೀಡಿದ್ದ ಹೋರಾಟದ ಹಿನ್ನೆಲೆಯಲ್ಲಿ ಜೇವರ್ಗಿ ಪಟ್ಟಣದ ತಸಿಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಅಸಂಘಟಿತ ವಲಯದ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಒದಗಿಸಬೇಕು ಹಾಗೂ ದುಡಿಯುವ ಕಾರ್ಮಿಕರಿಗೆ ಹಾಗೂ ಅಸಂಘಟಿತ ವಲಯದ ಶ್ರಮಿಕರಿಗೆ ಮಾರಕವಾಗಿರುವ ನೂತನ ಕಾರ್ಮಿಕರ ನೀತಿಗಳನ್ನು ಕೂಡಲೇ ರದ್ದುಪಡಿಸಬೇಕು. ಉದ್ಯೋಗ ಕಡಿತ ಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕೊಡಲೆಂದು ಹಿಂದೆ ಪಡೆಯಬೇಕು ಪಡೆಯಬೇಕು.
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ಕಾಯ್ದೆ ಅಡಿಯಲ್ಲಿ ಭದ್ರತಾ ಯೋಜನೆಯನ್ನು ಪ್ರಸ್ಥಾನ ಗೊಳಿಸಲು 10 ಸಾವಿರ ಕೋಟಿ ರೂಪಾಯಿಗಳ ನಿಧಿಯನ್ನು ಸ್ಥಾಪಿಸಬೇಕು.
ನೂತನ ಶಿಕ್ಷಣ ನೀತಿ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ನಿರುದ್ಯೋಗಿ ಜನರಿಗೆ ಬತ್ಯೆ ನೀಡುವ ಬಗ್ಗೆ ಹಾಗೂ ವಿಶೇಷ ಅನುದಾನವನ್ನು ಪ್ರಕಟಿಸಲು ಅಧಿವೇಶನ ನಡೆಸಬೇಕು, ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಸುಭಾಷ್ ಹೊಸಮನಿ ನೇತೃತ್ವದಲ್ಲಿ, ಅಂಗನವಾಡಿ ಕಾರ್ಯಕರ್ತರ ಮುಖಂಡರಾದ ಗಜರಾಬಾಯಿ ಹಾಲ ಘತ್ತರಗಿ, ಅಕ್ಷರ ದಾಸೋಹ ಯೋಜನೆ ನೌಕರರ ಮುಖಂಡರಾದ ನಾಗಮ್ಮ ನರಿಬೋಳ, ಗ್ರಾಮ್ ಪಂಚಾಯತ್ ಸಿಬ್ಬಂದಿಗಳ ಒಕ್ಕೂಟದ ಸಿದ್ದಣ್ಣ ಗೌಡ ಕೂಡಿ, ರೈತ ಸಂಘಟನೆಯ ಪರಶುರಾಮ್ ಬಡಿಗೇರ್, ಕಟ್ಟಡ ಕಾರ್ಮಿಕರ ಸಂಘಟನೆಯ ಕಾಂತಪ್ಪ ಸೇರಿದಂತೆ ವೆಂಕೋಬರಾವ್ ವಾಗಣಗೇರ ,ಸಿದ್ದರಾಮ ಹರವಾಳ ಸೇರಿದಂತೆ ಜಂಟಿ ಕಾರ್ಮಿಕ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.