ಭಕ್ತರ ಸಮುಖದಲ್ಲಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಪಲ್ಲಕ್ಕಿ ಉತ್ಸವ

0
170

ಆಳಂದ: ಶ್ರಾವಣ ಮಾಸದ ನಡುವಿನ ಸೋಮವಾರ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದ ಸುಪ್ರಸಿದ್ಧ ಐತಿಹಾಸಿಕ ಶ್ರೀ ಶರಣಬಸವೇಶ್ವರ ದೇವಾಲಯದಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು.

ಪ್ರತಿ ವರ್ಷ ವಿಜೃಂಭಣೆಯಿಂದ ಡೊಳ್ಳು ಕುಣಿತ, ಭಜನೆ,ಕೋಲಾಟ,ಸಂಗೀತ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಜರಗುತ್ತಿದ್ದ ಪಲ್ಲಕ್ಕಿ ಉತ್ಸವ, ಈ ಭಾರಿ #Covid-19 ದಿಂದಾಗಿ ದೇವಸ್ಥಾನದ ಆವರಣದಲ್ಲಿಯೇ ಸರಳವಾಗಿ ನೆರವೇರಿಸಲಾಯಿತು. ಶ್ರೀ ಶರಣಬಸವೇಶ್ವರರ ಗದ್ದುಗೆಗೆ ವಿಶೇಷ ಪೂಜೆ,ರುದ್ರಾಭಿಷೇಕ ನಡೆಸಲಾಯಿತು.

Contact Your\'s Advertisement; 9902492681

ರವಿಕುಮಾರ್ ಸಲಗರ ಪ್ರಸಾದದ ಸೇವೆ ವಹಿಸಿಕೊಡಿದ್ದು, ಸಾಕಷ್ಟು ಜನ ಮುತೈದೆಯರು ಭಾಗವಹಿಸಿ ತಮ್ಮ ಹರಕೆಗಳನ್ನು ತೀರಿಸಿದರು.

ಈ ಸಂದರ್ಭದಲ್ಲಿ ಶ್ರೀ ಶರಣಬಸವೇಶ್ವರ ನವ ತರುಣ ಸಂಘದ ಅಧ್ಯಕ್ಷ ಬಸವರಾಜ ಯಳಸಂಗಿ, ಅನ್ನಾರಾವ ದುಗೊಂಡ,ವಿಶ್ವನಾಥ ಮಾ.ಪಾಟೀಲ್,ಗುರು ಹೊಸಮನಿ,ಸುಭಾಷ್ ಹಳಿಮನಿ, ದಿಗಂಬರ ಕುಲಕರ್ಣಿ, ಈರಣ್ಣ ಜುಂಜಪ್ಪಗೋಳ್, ಶ್ರೀಶೈಲ ಮಾ.ಪಾಟೀಲ್, ಮಹಾದೇವ ಮಿಟೆಕಾರ, ಸಿದ್ದಾರಾಮ ಬಣಗಾರ, ಕ್ಷೇಮಲಿಂಗ ಕಂಭಾರ, ಪ್ರವೀಣ್ ಮಿಟೆಕಾರ, ಅನಿಲ್ ನಾಗುರ, ಮಡಿವಾಳಪ್ಪ ಮಡಿವಾಳ, ಅವಿನಾಶ್ ಮಾ.ಪಾಟೀಲ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here