ಸುರಪುರ: ಧಾರವಾಡ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೇಗೂರ ಗ್ರಾಮದಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ವೀರಶೈವ ಲಿಂಗಾಯತ ಯುವ ವೇದಿಕೆ ಮುಖಂಡರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ, ಧಾರವಾಡ ಜಿಲ್ಲೆಯ ಬೇಗೂರ ಗ್ರಾಮದ ಪೂಜಾ ಎನ್ನುವ ಯುವತಿ ಮೇಲೆ ಪಕ್ಕದ ಗ್ರಾಮ ಸಿಂಗನಹಳ್ಳಿಯ ಬಷೇರ್ ಎಂಬ ಕಾಮುಕ ಅತ್ಯಾಚಾರ ಎಸಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ.
ಅತ್ಯಾಚಾರ ನಡೆಸಿದ ಕಾಮುಕನಿಗೆ ಸರಕಾರ ಮರಣದಂಡನೆಯಂತಹ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.ಅಂದಾಗ ಮುಂದೆ ಇಂತಹ ಘಟನೆಗೆ ಕಡಿವಾಣ ಸಾಧ್ಯ.ಅಲ್ಲದೆ ಅನೇಕ ಇಂತಹ ಅತ್ಯಾಚಾರ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆ ಪ್ರಕಟಗೊಳ್ಳುವುದು ವಿಳಂಬವಾಗುವ ಕಾರಣದಿಂದ ಇಂತಹ ಪ್ರಕರಣಗಳು ಮರುಕಳಿಸುತ್ತಿವೆ.ಆದ್ದರಿಂದ ಸರಕಾರ ಕೂಡಲೆ ಕಾಮುಕ ಬಷೀರ್‍ಗೆ ಮರಣದಂಡನೆಯಾಗುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-2 ತಹಸೀಲ್ದಾರ್ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಯುವ ವೇದಿಕೆ ರಾಜ್ಯ ಉಪಾಧ್ಯಕ್ಷ ಮಂಜುನಾಥ ಜಾಲಹಳ್ಳಿ,ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೂಗುರೇಶ ವಾರದ ವೇದಿಕೆ ಜಿಲ್ಲಾಧ್ಯಕ್ಷ ಪ್ರದೀಪ ಕದರಾಪುರ ಬಸವೇಶ್ವರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಜಗದೀಶ ಪಾಟೀಲ ಶರಣು ಕಳ್ಳಿಮನಿ ವಿರೇಶ ಪಂಚಾಂಗಮಠ ಆನಂದ ಮಡ್ಡಿ ಮಲ್ಲು ಬಾದ್ಯಾಪುರ ಸಿದ್ದನಗೌಡ ಹೆಬ್ಬಾಳ ಡಿ.ಬಿ.ಪಾಟೀಲ ಮಾಲಗತ್ತಿ ಚಂದ್ರು ಮಡಿವಾಳ ವೀರಯ್ಯಸ್ವಾಮಿ ಬೋನಾಳ ಸೂಗುರೇಶ ಮಡ್ಡಿ ಸೂಗು ಸಜ್ಜನ್ ಸಂಪ್ರೀತ್ ಹಯ್ಯಾಳ ಶೇಖರ ಭೂಮಶೆಟ್ಟಿ ಸೇರಿದಂತೆ ಅನೇಕರಿದ್ದರು.