ಕಲಬುರಗಿ: ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಆರ್ಜಿಎಸ್ ಹೆಲ್ತ್ಕ್ಲಬ್ನಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ಅವರ ಜನ್ಮದಿನದ ನಿಮಿತ್ತ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಧರ್ಮರಾಜ ಬಿ.ಹೆರೂರ ಗೆಳೆಯರ ಬಳಗದ ವತಿಯಿಂದ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಮಾಸ್ಕ್ ಹಾಗೂ ಹಣ್ಣುಹಂಪಲ ವಿತರಿಸಲಾಯಿತು.
ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್, ಕುರುಬ ಸಂಘದ ಅಧ್ಯಕ್ಷ ತಿಪ್ಪಣ್ಣ ಬಳಬಟ್ಟಿ, ಕೆಪಿಸಿಸಿ ಕಾರ್ಯದರ್ಶಿ ದೇವೆಂದ್ರಪ್ಪ ಮರತೂರ, ಜಿ.ಪಂ.ಸದಸ್ಯರಾದ ದಿಲೀಪ ಆರ್.ಪಾಟೀಲ್, ಭೀರಣ್ಣ ಕಲ್ಲೂರ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ಅಧ್ಯಕ್ಷ ಧರ್ಮರಾಜ ಬಿ.ಹೆರೂರ, ಮಲ್ಲಿಕಾರ್ಜುನ ಬಂಕೂರ, ಅಫ್ಜಲ್ ಅಲಿ, ಕಾಂತ ಬಬಲಾದ, ವಿಠಲ ಪೂಜಾರಿ, ಕಾಶಿನಾಥ ಮರತೂರ, ಕುಪೇಂದ್ರ ಬರಗಾಲಿ, ನಾಗೇಂದ್ರಪ್ಪ ಪೂಜಾರಿ, ಜಗನ್ನಾಥ ನಾಗೂರ, ಶಿವಾಜಿ ಪೂಜಾರಿ, ಶಿವಲಿಂಗಪ್ಪ ವಗ್ಗಿ, ಭೀಮರಾಯ ಪೂಜಾರಿ, ವಿ.ಕೆ.ಪೂಜಾರಿ ಇದ್ದರು.