ಸ್ವಾತಂತ್ರ್ಯದ ಈ ದಿನ ನಿಮ್ಮೊಂದಿಗೆ ಕೆಲ ಹೊತ್ತು

2
160

ಮಾನವ ಸಮಾಜ ಜೀವಿ. ಅವನು ಯಾವತ್ತೂ ಸಂಘವನ್ನು ಬಯಸುತ್ತಾನೆ. ಆತ ಒಂಟಿಯಾಗಿ ಬಾಳಲಾರ. ಬದುಕಲಾರ. ಯಾವಾಗಲೂ ಜನರೊಂದಿಗೆ ಸಮಾಜದೊಂದಿಗೆ ಮನುಷ್ಯ ಗುರುತಿಸಲು ಪ್ರಯತ್ನ ಪಡುತ್ತಾನೆ. ಇಂತಹ ಸಮಾಜ ಜೀವಿಯಾಗಿರುವ ಮನುಷ್ಯನನ್ನು ಮನುಷ್ಯರಾದ ನಾವುಗಳು ನಮ್ಮ ಸ್ವಾರ್ಥಕ್ಕಾಗಿ ಬಂದಿಯಾಗಿರುವಂತಹ ಅವನ ತನು ಮನ ಭಾವವನ್ನು ಬಂಧಿಯಲ್ಲಿಡುವಂತದ್ದು. ಇದಕ್ಕೆ ಗುಲಾಮ ಎಂದು ಕರೆಯುತ್ತಾರೆ.

ಇದನ್ನು ಕೆಲವು ಭಾಗದಲ್ಲಿ ಜೀತ ಕರೆಯುತ್ತಾರೆ. ಇನ್ನು ಕೆಲವು ಕಡೆ ಶೋಷಿತರು, ದಾಸ್ಯ ಎಂದು ಗುರುತಿಸಲಾಗುತ್ತದೆ. ಜನರನ್ನು ಇಂತಹ ಶೋಷಣೆಯಿಂದ ಮತ್ತು ಗುಲಾಮಗಿರಿಯಿಂದ ವಿಕಾಸದೆಡೆಗೆ ಹೊರ ತರುವುದೇ ಸ್ವಾತಂತ್ರ್ಯ ಎಂದು ಕರೆಯಬಹುದು. ಅದು ವ್ಯಕ್ತಿ ಸ್ವಾತಂತ್ರ್ಯವಾಗಿರಬಹುದು. ಪೂರ್ಣ ಸ್ವಾತಂತ್ರ್ಯ ವಾಗಿರಬಹುದು. ದೇಶದ ಸ್ವಾತಂತ್ರ್ಯವಾಗಿರಬಹುದು ಅಥವಾ ಜಗತ್ತಿನ ಸ್ವಾತಂತ್ರ್ಯವಾಗಿರಬಹುದು. ಹೀಗೆ ಮನುಷ್ಯ ಮಾನಸಿಕವಾಗಿ ದೈಹಿಕವಾಗಿ ಭಾವಂತಿಕವಾಗಿ ಅವನ ಆಲೋಚನೆಗೆ ಮುಕ್ತವಾಗಿ ಬದುಕಲಿಕ್ಕೆ ಸ್ವಾತಂತ್ರ್ಯ ವೆಂದು ಕರೆಯುತ್ತಾರೆ.

Contact Your\'s Advertisement; 9902492681

ಇಂತಹ ಮುಕ್ತವಾದ ಸ್ವಾತಂತ್ರ್ಯ ಪಡೆಯಲಿಕ್ಕಾಗಿ ಜಗತ್ತಿನಾದ್ಯಂತ ಯುದ್ದವಾಗಿದೆ. ಸಾವು-ನೋವುಗಳು ಸಂಭವಿಸಿವೆ. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಗಳೆಂದರೆ ಧಾರ್ಮಿಕ ಸ್ವಾತಂತ್ರ್ಯವುಳ್ಳದ್ದೇ ನಿಜವಾದ ಸ್ವಾತಂತ್ರ್ಯ ವಲ್ಲ. ನಾವು ಜೀವನ ಮಾಡಲಿಕ್ಕೆ ಸ್ವಾತಂತ್ರ್ಯ ಸಿಕ್ಕಿರಬಹುದು. ಓದಲಿಲ್ಲೆ ಬರಿಯಲಿಕ್ಕೆ ಸ್ವಾತಂತ್ರ್ಯ ಸಿಕ್ಕಿರಬಹುದು. ಆದರೆ ತನ್ನದೆಯಾದ ಸ್ವಾಭಿಮಾನ. ಮನಸು ವಿಕಾಸಗೊಳ್ಳಲಿಕ್ಕೆ ಬೇಕಾಗಿರತಕ್ಕಂಥ ಸ್ವಾತಂತ್ರ್ಯವಿಲ್ಲದಿದ್ದರೆ ಅದು ನಿಜವಾದ ಸ್ವಾತಂತ್ರ್ಯವಲ್ಲ.

ಇಂತಹ ಮಾನಸಿಕ ಸ್ವಾತಂತ್ರ್ಯ ಈ ಜಗತ್ತಿನಲ್ಲಿ ಮೊಟ್ಟ ಮೊದಲು ಕೊಟ್ಟವರು ೧೨ನೇ ಶತಮಾನದ ಬಸವಣ್ಣ ನವರು. ಆ ದೃಷ್ಟಿಯಲ್ಲಿ ಬಸವಣ್ಣನ್ನನವರನ್ನು ನಾವು “ಸ್ವಾಭಿಮಾನದ ಸ್ವತಂತ್ರ ಪಿತಾಮಹಾ” ಎಂದು ಕರೆಯಬಹುದು. ಏಕೆಂದರೆ ೧೨ನೇ ಶತಮಾನ ರಜಸತ್ತೆಯ ಶತಮಾನ. ರಾಜರೆ ಪ್ರಭುಗಳು. ರಾಜರೆ ಸಾಕ್ಷಾತ್ ಜಗದೀಶ ಎಂದು ನಂಬಿರತಕ್ಕಂಥ ವ್ಯವಸ್ಥೆಯ. ಸರ್ವಾಧಿಕಾರಿಯಾಗಿ ರಾಜ್ಯಭಾರ ಮಾಡುವಂತಹ ರಾಜ, ಮಹಾರಾಜರ ಕಾಲದಲ್ಲಿಯೂ ಸಹ ಮಹಿಳೆಯರಿಗೆ ಎಲ್ಲಾ ರೀತಿಯ ಶೋಷಣೆ ನಡೆಯುತ್ತಿತ್ತು ಸಾಮಾಜಿಕ ವಾಗಿರುವಂತಹ ಸ್ವಾಭಿಮಾನದ ಸ್ವಾತಂತ್ರ್ಯ ಕೊಟ್ಟವರು ಬಸವಣ್ಣನವರು. ಹಾಗಾಗಿ ಸ್ವಾತಂತ್ರ್ಯ ಎನ್ನುವಂಥ ಶಬ್ದಕ್ಕೆ ಅರ್ಥವಾಗಿ ಬದುಕಿರತಕ್ಕಂಥ ಕಾಲ ಅದು ೧೨ನೇ ಶತಮಾನ.

ಬಸವಣ್ಣ ಕೊಟ್ಟಂತಹ ಸ್ವರಿಗೂ ಸ್ವಾತಂತ್ರ್ಯ ದಿಂದ. ಈ ರೀತಿಯಾಗಿ ರತಕಂತ ಸ್ವತಂತ್ರವನ್ನು ನಾವು ಇಗಿನಕಾಲಮಾನದಲ್ಲಿ ಅನುಭವಿಸುತ್ತಿದ್ದೇವೆ ಎಂದರು ಬಹುಶ ತಪ್ಪಾಗಲಕ್ಕಿಲ್ಲ.
ನಮ್ಮ ದೇಶದ ಭೌಗೋಳಿಕ ವ್ಯವಸ್ಥೆಯನ್ನು ಈಸ್ಟ್ ಇಂಡಿಯಾ ಕಂಪನಿಯ ಮೂಲಕವಾಗಿ ಬ್ರಿಟಿಷ್‌ರು ನಮ್ಮನ್ನು ಆಳುತ್ತಿದ್ದರು. ನಮಗೆ ನಿಜವಾಗಿ ಇರತಕ್ಕಂತದ್ದು ಸಾಮಾಜಿಕವಾದ ಮತ್ತು ರಾಜಕೀಯವಾದಂತ ಸ್ವತಂತ್ರವನ್ನು ಕಳೆದುಕೊಂಡು ಬ್ರಿಟಿಷ್‌ರ ಆಳ್ವಿಕೆಯಲ್ಲಿ ನಾವೆಲ್ಲ ಪರಾಧೀನರಾಗಿದ್ದೇವೆ. ಇದರಿಂದಾಗಿ ನಮ್ಮನ್ನು ಮುಕ್ತಗೊಳಿಸಲಿಕ್ಕೆ ಲಕ್ಷಾಂತರ ಜನರು ತ್ಯಾಗ ಬಲಿದಾನ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಹೋರಾಟಗಾರ ರು ತಮ್ಮ ಬದುಕನ್ನ ಮುಡಿಪಾಗಿಟ್ಟಿದ್ದಾರೆ. ಇಂಥವರಲ್ಲಿ ಭಗತ್‌ಸಿಂಗ್, ಮಹಾತ್ಮಗಾಂಧಿ, ಸುಭಾಷಚಂದ್ರ ಭೊಸ್, ಚಂದ್ರಶೆಖರ ಆಜಾದ ಇಂಥವರೆಲ್ಲ ಉದಾಹರಣೆಗೆ ಕಾಣಲಿಕ್ಕೆ ಸಾದ್ಯವಿದೆ.

ಬ್ರಿಟಿಷ್‌ರು ಬರುವುದಕ್ಕಿಂತ ಮುಂಚಿತವಾಗಿ ನಮ್ಮ ದೇಶದ ರಾಜರು ಸಹ ಬೇರೆ ಬೇರೆ ವ್ಯವಸ್ಥೆಗಳ ರೂಪದಲ್ಲಿ ಆಳುತ್ತ ಬಂದಿದ್ದರು. ನಂತರ ಬಿಟಿಷ್‌ರ ವಿರುದ್ದವಾಗಿ ಸಹ ನಮ್ಮ ನಾಡಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಹೆಣಗಾಡಬೇಕಾಯಿತು. ಉದಾ: ಕಿತ್ತೂರು ಸಂಸ್ಥಾನ ಸ್ವಾತಂತ್ರ್ಯದ ಹೊರಾಟ, ಮೈಸೂರು ಸ್ವಾತಂತ್ರ್ಯ ಹೊರಾಟ ಇಂತಹ ಅನೇಕ ಹೋರಾಟಗಳನ್ನು ನಮ್ಮ ದೇಶದಲ್ಲಿ ಗಾಂಧೀಜಿಯವರು ಬರುವ ಮುಂಚೆ ರಾಜಶಾಹಿಗಳ ಹಲವಾರು ಉದಾಹರಣೆಗಳು ಇವೆ.

ಆದರೆ ಗಾಂಧೀಜಿಯವರು ಹರಿದು ಹಂಚಿಹೋಗಿದ್ದ ಹೋರಾಟಗಾರರನ್ನು ಒಗ್ಗೂಡಿಸಿ ಅವರನ್ನು ಒಂದೇ ವೇದಿಕೆಗೆ ತಂದು ಎಲ್ಲ ವರ್ಗ ಎಲ್ಲಾ ಭಾಷೆ ಎಲ್ಲಾ ಮುಖಂಡರನ್ನು ಒಂದೆ ವೇದಿಕೆಯಲ್ಲಿ ತಂದು ಬ್ರಿಟಿಷ್‌ರನ್ನು ಈ ದೇಶ ಬಿಟ್ಟು ಹೋಗುವಂತೆ ಅಹಿಂಸಾತ್ಮಕ ಹೋರಾಟ ನಡೆಸುತ್ತಾರೆ. ಆ ಮಹನೀಯರೆಲ್ಲರ ಹೋರಾಟದ ಪರಿಣಾಮವಾಗಿ ಇಂದು ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅದು ನಮಗೆ ಯಾವ ತ್ಯಾಗ ಬಲಿದಾನಗಳನ್ನು ಅರ್ಪಣೆ ಮಾಡಿ ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ಆದರೆ ಆ ಸ್ವತಂತ್ರದ ಆಸೆ ಇನ್ಮು ಸಹ ಸಂಪೂರ್ಣವಾಗಿ ಈಡೇರಲಿಲ್ಲ. ನಮಗೆ ಬದುಕುವ ಸ್ವತಂತ್ರ ಸಿಕ್ಕಿದೆ ಬರಿಯುವ ಸ್ವತಂತ್ರ ಸಿಕ್ಕಿದೆ ಮತವನ್ನು ಹಾಕುವ ಸ್ವತಂತ್ರ ಸಿಕ್ಕಿದೆ. ಅಧಿಕಾರ ವಹಿಸುವ ಸ್ವತಂತ್ರ ಸಿಕ್ಕಿದೆ. ಆದರೆ ಬಡವನಿಗೆ, ನೊಂದ ಮಹಿಳೆಗೆ ಇನ್ನೂ ಸಹ ಮುಕ್ತ ವಾಗಿ ಬದುಕುವ ಸ್ವತಂತ್ರ ಸಿಕ್ಕಿಲ್ಲದಿರುವುದು ದುರ್ದೈವದ ಸಂಗತಿ.

ಅದಕ್ಕಾಗಿ ಕವಿ ಸಿದ್ಧಲಿಂಗಯ್ಯನವರು, “ಯಾರಿಗೆ ಬಂತು ಎಲ್ಲಿಗೆ ಬಂತು ೪೭ರ ಸ್ವತಂತ್ರ್ಯ ಯಾಕಾರ ಬಂತು ಬಡವರ ತಿನ್ನುವ ಅನ್ನಕ್ಕೆ ಬಂತು ಸ್ವತಂತ್ರ್ಯ ಬಡವರ ಗುಡಿಸಿಲಗೆ ಬರಲೆ ಇಲ್ಲ ಸ್ವತಂತ್ರ್ಯ” ಹಿಗಾಗಿ ಶ್ರೀಮಂತ ರು ಶ್ರೀಮಂತರಾಗಿಯೆ ಬೆಳೆಯುತಿದ್ದಾರೆ. ಬಡವರು ಬಡವಾಗಿಯೇ ಉಳಿಯುತಿದ್ದಾರೆ. ಈ ಅಸಮಾನತೆ ಹೊಗಿ ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ಸಮಾನತೆ ಬಡವರಿಗೆ ಸಹ ಸ್ವಾತಂತ್ರ್ಯವನ್ನು ಅನಭವಿಸಲು ಅಸಾಧ್ಯವಾಗುತ್ತಿದೆ.

ಅನೇಕರ ತ್ಯಾಗ, ಬಲಿದಾನದಿಂದ ಸ್ವತಂತ್ರಗೊಂಡ ಈ ಭಾರತದಲ್ಲಿ ನಾವು ನಮ್ಮವರ ಕೈಯಲ್ಲಿಯೇ ಗುಲಾಮರಾಗಿ ಬಳುತ್ತಿದ್ದೇವೆ. ಬ್ರಿಟೀಷರ ಕಪಿಮುಷ್ಠಿಯಲ್ಲಿದ್ದ ಭಾರತವೇನೋ ಸ್ವತಂತ್ರ್ಯವಾಗಿದೆ. ಆದರೆ ನಾವಿನ್ನೂ ಪರತಂತ್ರದಲ್ಲೇ ಬಾಳುತ್ತಿದ್ದೇವೆ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ನಮ್ಮನ್ನು ಆಳುವವರು ಹೇಗೆ ಕಾರಣರೋ ನಾವು ಕೂಡ ಕಾರಣರಗಿದ್ದೇವೆ. ಭಾರತ ಮಾತೆಯ ಜನ್ಮದಿನವೆಂದು ಬಗೆದು ಎಲ್ಲರೂ ಸೇರಿ ಅತ್ಯಂತ ಅಭಿಮಾನ, ಸಡಗರ-ಸಂಭ್ರಮದಿಂದ ಸ್ವಾತಂತ್ರೋತ್ಸವವನ್ನು ಆಚರಿಸೋಣ. .ಭ್ರಷ್ಟಾಚಾರಮುಕ್ತ, ಸ್ವಚ್ಛ ಭಾರತದ ಜೊತೆಗೆ ಕರೊನಾಮುಕ್ತ ಸ್ವತಂತ್ರ ಭಾರತದ ಸಂಕಲ್ಪ ತೊಡುವುದು ಕೂಡ ಇಂದಿನ ನಮ್ಮೆಲ್ಲರ ಅಗತ್ಯವಾಗಿದೆ.

-ವಿಜಯಲಕ್ಷ್ಮೀ ಕೌಟಗೆ, ಬೀದರ

2 ಕಾಮೆಂಟ್ಗಳನ್ನು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here