ಶಹಾಪುರ: ಮೊನ್ನೆ ಬೆಂಗಳೂರಿನ ಪುಲಿಕೇಶಿ ನಗರ ವ್ಯಾಪ್ತಿಯ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದಿರುವ ದುಷ್ಕೃತ್ಯದ ದಾಳಿ ನಿಜಕ್ಕೂ ಎಲ್ಲರಿಗೂ ನೋವನ್ನುಂಟು ಮಾಡಿದೆ,ಇದನ್ನು ನಾವು ಖಂಡಿಸುತ್ತೇವೆ ಎಂದು ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ರಾದ ಶ್ರೀಕಾಂತಗೌಡ ಸುಬೇದಾರ ತಿಳಿಸಿದ್ದಾರೆ.
ಕೋರನಾ ವೈರಸ್ ಮಹಾಮಾರಿಯಿಂದ ದೇಶ ಹಾಗೂ ರಾಜ್ಯಾದ್ಯಂತ ಜನರು ಅಕ್ಷರಶಹ ತತ್ತರಿಸಿ ಹೋಗಿದ್ದಾರೆ ಅಂತ ಸಮಯದಲ್ಲಿ ಕೆಲವು ಕಿಡಿಗೇಡಿಗಳು ನಾಡಿನ ಶಾಂತಿ, ಸೌಹಾರ್ದತೆಗೆ ದಕ್ಕೆ ತಂದು ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡಿದ್ದಾರೆ.ಯಾರೇ ಆಗಲಿ ಎಂತಹ ಕೆಟ್ಟ ಮನಸ್ಥಿತಿ ಇದ್ದರೂ ಕೂಡ ಇಂತಹ ಕೃತ್ಯಗಳು ಎಸಗಬಾರದು.ಈ ಕೃತ್ಯವೆಸಗಿದ ಎಷ್ಟೇ ಪ್ರಭಾ ವ್ಯಕ್ತಿಯಾದರೂ ಕೂಡ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಅವರಿಂದಲೇ ಹಾನಿಯಾಗಿರುವ ಆಸ್ತಿಯ ಖರ್ಚು ವೆಚ್ಚಗಳು ಭರಿಸುವಂತೆ ಸರ್ಕಾರ ನಿರ್ದೇಶನ ನೀಡಬೇಕು ಎಂದರು.
ಆಗಾಗ ಪ್ರಚೋದನಕಾರಿ ಹೇಳಿಕೆಗಳು ನೀಡಿ ದೇಶದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಸಂಘಟನೆಗಳು ಕರ್ನಾಟಕದಲ್ಲಿ ಇರಬಾರದು ಅವುಗಳನ್ನು ಸರ್ಕಾರ ಕೂಡಲೇ ನಿಷೇಧಿಸಬೇಕೆಂದು ಈ ಮೂಲಕ ಒತ್ತಾಯಿಸಲಾಯಿತು.ಇಡೀ ಬೆಂಗಳೂರಿಗೆ ಬೆಂಕಿ ಹತ್ತಿ ಉರಿಯುತ್ತಿರುವಾಗ ಕಾಂಗ್ರೆಸ್ ಪಕ್ಷದ ನಾಯಕರು ಯಾರೊಬ್ಬರೂ ತುಟಿ ಬಿಚ್ಚುತ್ತಿಲ್ಲ ಎಂಬುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ಇಂಥ ಕೃತ್ಯಗಳು ರಾಜ್ಯದಲ್ಲಿ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿದೆ ಎಂದು ತಿಳಿಸಿದರು.