ಶಂಕರಾಚಾರ್ಯರ ಪುತ್ಥಳಿ ಮೇಲೆ ಹಸಿರು ಶಾಲು ಪ್ರಕರಣ: ಆರೋಪಿ ಹಿಂದು ಯುವಕನಾದ್ದರಿಂದ ತಣ್ಣಗಾದ ಘಟನೆ

0
48

ಶೃಂಗೇರಿ: ಶಂಕರಾಚಾರ್ಯರ ಪುತ್ಥಳಿಯ ಮೇಲೆ‌ ಹಸಿರು ಬಣ್ಣದ ಬ್ಯಾನರ್ ನ್ನು ಎಸೆದ ಪ್ರಕರಣದಿಂದ ಉದ್ವಿಗ್ನಗೊಂಡಿದ್ದ ಪ್ರದೇಶದ ವಾತಾವರಣ ಆರೋಪಿ ಮಿಲಿಂದ್ ಎಂಬ ಯುವಕನನ್ನು ಬಂಧಿಸುತ್ತಿದ್ದಂತೆ ತಣ್ಣಗಾಗಿದೆ.

ಶಂಕರಾಚಾರ್ಯರ ಪುತ್ಥಳಿಯ ಮೇಲೆ ಹಸಿರು ಬಟ್ಟೆ ಇರುವುದನ್ನು ನೋಡುತ್ತಿದ್ದಂತೆ ಬಿಜೆಪಿ ಪಕ್ಷದ ಮಾಜಿ ಸಚಿವ ಜೀವರಾಜ್ ಹಾಗೂ ಆರೆಸ್ಸೆಸ್ ಸಂಘಟನೆಯ ಸದಸ್ಯರು ಎಸ್‌ಡಿಪಿಐ ಮೇಲೆ ಆರೋಪಿಸಿ, ಆ ಸಂಘಟನೆ ಕಾರ್ಯಕರ್ತರನ್ನು ಬಂಧಿಸುವಂತೆ ಪೊಲೀಸರಿಗೆ ಪಟ್ಟು ಹಿಡಿದರು.

Contact Your\'s Advertisement; 9902492681

ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರೂ ಆರೆಸ್ಸೆಸ್ ಕಾರ್ಯಕರ್ತರು ಎಸ್ ಡಿಪಿಐ ಕಾರ್ಯಕರ್ತರನ್ನು ಬಂಧಿಸದಿದ್ದರೆ ಪರಿಣಾಮ ನೆಟ್ಟಗಿರಲ್ಲವೆಂದು ಎಚ್ಚರಿಕೆ ನೀಡಿರುವ ದೃಶ್ಯಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.

ಪ್ರಕರಣದ ಗಂಭೀರತೆ ಅರಿತ ಪೊಲೀಸರು ಘಟನೆ ನಡೆದ ಪ್ರದೇಶದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾವನ್ಜು ಪರಿಶೀಲಿಸಿ ಮನೋಹರ ಎಂಬುವವನ ಮಗ ಆರೋಪಿ ಮಿಲಿಂದ್ ಎಂಬ ಯುವಕನನ್ನು ಬಂಧಿಸಲಾಗಿದೆ. ಆ ನಂತರ ಪ್ರದೇಶದಲ್ಲಿದ ಬಿಗುವಿನ ವಾತಾವರಣ ತಿಳಿಯಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here