ಶಹಾಪುರ: ಅಧಿಕಾರ ಅಂತಸ್ತು ಆಮೇಲೆ ಮೊದಲು ಸ್ನೇಹ,ಪ್ರೀತಿ, ಕರ್ತವ್ಯ ಎಲ್ಲವನ್ನೂ ಮರೆಯಬಾರದು ಎಂದು ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ಹೇಳಿದರು.
ಹತ್ತಿಗೂಡುರು ಗ್ರಾಮದ ಆತ್ಮೀಯ ಸ್ನೇಹಿತ ಹಾಗೂ ಅಂದಿನ ಸರ್ಕಾರಿ ಸೇವೆಯಲ್ಲಿರುವ ಸಹೋದ್ಯೋಗಿ ಗುರಪ್ಪ ಸುರಪುರ ಅವರ ಮನೆಯಲ್ಲಿ ಏರ್ಪಡಿಸಿರುವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗುರಪ್ಪ ಸುರಪುರ ಮಾತನಾಡಿ ಅಂದು ಸಹೋದ್ಯೋಗಿಯಾಗಿದ್ದು ಇಂದು ಜನರ ಸೇವೆ ಮಾಡಿ ರಾಯಚೂರು ಗ್ರಾಮೀಣ ಶಾಸಕರಾಗಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಅಂದಿನ ಸರಳತೆ ಪ್ರೀತಿ ವಿಶ್ವಾಸ ಇಂದಿಗೂ ಹಾಗೇ ಉಳಿಸಿಕೊಂಡಿರುವುದು ನಿಜಕ್ಕೂ ಸಂತೋಷದ ಸಂಗತಿ.
ಈ ಸಂದರ್ಭದಲ್ಲಿ ಊರಿನ ಪ್ರಮುಖ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ತಾವಿಬ್ಬರೂ ಇರುವ ಹಳೆಯ ಭಾವಚಿತ್ರವನ್ನು ನೆನಪಿನ ಕಾಣಿಕೆಯನ್ನಾಗಿ ನೀಡಿ ಗೌರವಿಸಿದರು.