ಕಲಬುರಗಿ: ನಗರದ ಫಿರದೋಸ್ ನಗರ ವೇಲ್ಫರ್ ಸೂಸೈಟಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಕೊರೊನಾ ವಾರಿಯರ್ಸ್ ಹಾಗೂ ಕೋವಿಡ್-19 ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ವೈದ್ಯರಿಗೆ, ಪಾಲಿಕೆಯ ಅಧಿಕಾರಿ ಹಾಗೂ ಪೌರ ಕಾರ್ಮಿಕರಿಗೆ ಶಾಲು ಹೋದಿಸುವ ಮೂಲಕ ವಿಶೇಷ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ರೀಜ್ವಾನ್ ಅಲಿ ಪಾಲಿಕೆಯ ಅಧಿಕಾರಿಗಳಾದ ದೀಪ, ವಿಜಯ ಕುಮಾರ, ಹಾಗೂ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪ್ರಭಾಕರ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಮನ್ ನಗರ ವೇಲ್ಫರ್ ಸೂಸೈಟಿಯ ಅಧ್ಯಕ್ಷರಾದ ಅಮನೂಲ್ಲಾಹ ಖಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ಅವಹಿಸಿದರು. ಯೂನೈಟಿ ಫೋರಮ್ ಅಧ್ಯಕ್ಷರಾದ ಹೈದರ್ ಅಲಿ ಇನಾಮದಾರ್ ಮುಖ್ಯ ಅತಿಥಿಗಳಾಗಿ ಆಗಿಮಿಸಿದರು.
ಸಾದೀಕ್ ಅಲಿ ಫಾತೇಖಾನಿ, ಅಬ್ದುಲ್ ರಜಾಕ್ ಸಾಬ್, ನಿವೃತ ನೌಕರರಾದ ಚಾಂದ್ ಸಾಬ, ಶೌಕತ್ ಅಲಿ ಖಾನ್, ಅಬ್ದುಲ್ ಮಜೀದ್ ವಕೀಲ್, ಜೀಲಾನಿ ಅಹ್ಮದ್, ಮಹ್ಮದ್ ಸರಫರಾಜ್, ಜಕಿ ಅಹ್ಮದ್, ಮಝರ್ ಅಹ್ಮದ್, ಹಸನ್ ಅಲಿ ಸುಲ್ತಾನ ಪುರಿ, ಗೌಸ್ ವೇದಿಕೆ ಮೇಲೆ ಇದ್ದರು.
ಇದಕ್ಕೂ ಮುನ್ನ ಸೂಸೈಟಿ ವಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ, ನಂತರ ಸೂಸೈಟಿಯ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್ ಅವರ ನೇತೃತ್ವದಲ್ಲಿ ಕೊರೊನಾ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ಜರುಗಿತ್ತು. ಮಹ್ಮದ್ ಅಜರ್ ಕಾರ್ಯಮ ನಿರೂಪಿಸಿದರು.