ಸಂಗೋಳ್ಳಿ ರಾಯಣ್ಣನಂತೆ ಮಕ್ಕಳನ್ನು ಹೋರಾಟಗಾರರಾಗಿ ಬೆಳಸಿ: ರಾಜು ಎಮ್ ಹಿರೇಮಠ

0
89

ಕಲಬುರಗಿ: ೧೫ ಅಗಸ್ಟ ೧೭೯೮ ರಂದು ಜನಸಿದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟಗಾರರಲೊಬ್ಬರಾಗಿದ್ದು, ಕಿತ್ತೂರ ರಾಣಿ ಚೆನ್ನಮ್ಮಳ ಬಲಗೈ ಬಂಟರಾಗಿದ್ದು ಕಿತ್ತೂರ ಸಂಸ್ಥಾತನವನ್ನು ಪರಕೀಯರ ಆಕ್ರಮಣದಿಂದ ರಕ್ಷಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟು ದೇಶದ ಸ್ವತಂತ್ರ್ಯಕ್ಕಾಗಿ ಹಗಲು ಇರಲು ತನ್ನ ಜೀವವನ್ನು ಲೆಕ್ಕಿಸದೆ ದೇಶಕ್ಕಾಗಿ ತಾಯಿ ನಾಡಿಗಾಗಿ, ತನ್ನ ನಂಬಿದ ಪ್ರಜೇಗಳ ರಕ್ಷಣೆಗಾಗಿ ಹೋರಾಡಿದ ಕೀರ್ತಿ ದೇಶಭಕ್ತ ಸಂಗೋಳ್ಳಿ ರಾಯಣ ಅವರು ಸಲ್ಲುತ್ತೇ ಎಂದು ಕರ್ನಾಟಕ ವಿಜಯ ಸೇನೆಯ ಜಿಲ್ಲಾಧ್ಯಕ್ಷರಾದ ರಾಜು ಎಮ್ ಹಿರೇಮಠ ಹೇಳಿದರು.

ಅವರು ಆಳಂದ ತಾಲೂಕಿನ ಗುಂಜಬಬಲಾದ ಗ್ರಾಮದಲ್ಲಿ ನಡೆದ ಸಂಗೋಳ್ಳಿ ರಾಯಣ್ಣನ ಜನ್ಮದಿನೋತ್ಸದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡುತ್ತಿದ್ದರು. ಆಧುನಿಕ ಜಗತ್ತಿನಲ್ಲಿ ಜನರು ಇಂದು ದೇಶಭಕ್ತರನ್ನು ಮರೆತು ಬರಿ ಜೀವನ, ಜೀವಕ್ಕಾಗಿ ಬದುಕುತ್ತಿದ್ದು, ಈ ಪದ್ದತಿ ಹೀಗೆ ಮುಂದುವರೆದರೆ ದೇಶವನ್ನು ಸಂಗೋಳ್ಳಿ ರಾಯಣ್ಣನಂತೆ ರಕ್ಷಣೆ ಮಾಡುವವರು ಯಾರು ಎಂಬ ಆತಂಕ ಮೂಡುತ್ತಿದೆ, ಜನರಲ್ಲಿ ದೇಶಭಕ್ತಿ ತುಂಬಲು ಸಂಗೋಳ್ಳಿ ರಾಯಣ್ಣನ ಆದರ್ಶ ಸ್ಪೂರ್ತಿಯಾಗಬೇಕು, ಎಲ್ಲರಲ್ಲಿಯೂ ಬರಬೇಕು, ಶಿಕ್ಷಣದ ಜೋತೆಗೆ ಪ್ರತಿಯೋಂದು ಮನೆಯಲ್ಲಿ ತಂದೆ ತಾಯಿಯವರು ತಮ್ಮ ತಮ್ಮ ಮಕ್ಕಳನ್ನು ದೇಶಾಭೀಮಾನದ ಕುರಿತು, ಸಂಗೋಳ್ಳಿ ರಾಯಣ್ಣ ಬದುಕಿ ಬಾಳಿದ ದಿನಗಳು ರಾಯಣ್ಣ ಮಾಡಿದಂತಹ ತ್ಯಾಗ ತಾಯಿ ಭಾರತೀಗಾಗಿ ರಾಯಣ್ಣ ಕೊಟ್ಟಂತಹ ಕೋಡುಗೆಯನ್ನು ತಮ್ಮ ತಮ್ಮ ಮಕ್ಕಳಿಗೆ ಪ್ರತಿಯೊಬ್ಬರು ದೇಶಾಭಿಮಾನದ ಕುರಿತು ಸಣ್ಣ ಸಣ್ಣ ಕಥೆಯ ರೂಪದಲ್ಲಿ ತಿಳಿಸಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನಂತೆ ಬೆಳಸಿ ಎಂದು ಹಿರೇಮಠ ಕರೆಕೊಟ್ಟರು.

Contact Your\'s Advertisement; 9902492681

ಅಂಬ್ರೇಶ ಪುಜಾರಿಯವರು ಮಾತನಾಡಿ ಸಂಗೋಳ್ಳಿ ರಾಯಣ್ಣನವರು ಅಪ್ಪಟ್ಟ ದೇಶಪ್ರೇಮಿಯಾಗಿದ್ದರು ಅವರು ಇಂದಿಗೂ ನಮ್ಮ ಹೃದಯದಲ್ಲಿ ಅಮರವಾಗಿ ಉಳಿದಿದ್ದಾರೆ ಎಂದು ಹೇಳಿದರು. ಪ್ರಾರಂಭದಲ್ಲಿ ಸಂಗೋಳ್ಳಿ ರಾಯಣ್ಣ ಕ್ರಾಂತಿ ಸಂಘಟನೆಯ ಪಧಾದೀಕಾರಿಗಳು ಹಾಗೂ ಕರ್ನಾಟಕ ವಿಜಯ ಸೇನೆಯ ಪಧಾದೀಕಾರಿಗಳು, ಮುಖ್ಯ ಅಥಿತಿಗಳು ಸೇರಿ ರಾಯಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಅಂಬ್ರೇಶ ಪೂಜಾರಿ ಸ್ವಾಗತಿಸಿದರು, ರಮೇಶ ಗಣಜಲಖೇಡ ನಿರೂಪಿಸಿದರು. ಕುಮಾರ ಪೂಜಾರಿ ವಂದಿಸಿದರು. ಲಕ್ಷ್ಮಿಕಾಂತ ಜಮಾದರ, ಚನ್ನವೀರಯ್ಯಾ ಹಿರೇಮಠ ಶಿವರಾಜ ಗಣಜಲಖೇಡ, ಲೋಕೇಶ ಪೂಜಾರಿ. ಶರಣು ಗಣಜಲಖೇಡ, ಲಕ್ಷ್ಮಿಪುತ್ರ ಕೌಂಟೆ, ನಾಗರಾಜ ಪೂಜಾರಿ,ಚಂದ್ರು ಮಾಲಕರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here