ಭಂಕೂರ ಹಿರೋಡೇಶ್ವರ ರೈತ ಉತ್ಪಾದಕರ ಕಂಪನಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0
35

ಶಹಾಬಾದ: ಭಂಕೂರನ ಹಿರೋಡೇಶ್ವರ ರೈತ ಉತ್ಪಾದಕರ ಕಂಪನಿಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಶನಿವಾರದಂದು ಆಚರಣೆ ಮಾಡಲಾಯಿತು.

ಕಂಪನಿಯ ಅಧ್ಯಕ್ಷ ವೆಂಕಾರೆಡ್ಡಿ ಪಾಟೀಲ್ ಯರಗಲ್ ಧ್ವಜಾರೋಹಣ ನೆರವೇರಿಸಿ  ಮಾತನಾಡಿದ ಅವರು, ಇಂದು ದೇಶವ್ಯಾಪಿ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತಿದೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಾವೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸಬೇಕು. ಸ್ವಾತಂತ್ರ್ಯ ಹೋರಾಟಗಾರು ಬ್ರಿಟೀಷರಿಂದ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ನಡೆಸಿದ ಹೋರಾಟ ಪದಗಳಲ್ಲಿ ವರ್ಣಿಸಲು ಅಸಾಧ್ಯ. ಆದರೆ ಅದನ್ನು ಉಳಿಸಿಕೊಂಡು ಹೋಗಲು ನಮ್ಮಿಂದ ಸಾಧ್ಯ.ಅದಕ್ಕಾಗಿ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಭಗತ್ ಸಿಂಗ್, ರಾಜಗುರು, ಸುಖದೇವ್ ಹಾಗು ಅಶ್ಫಾಕ್ ಉಲ್ಲಾಖಾನ್ ಻ವರು ನಮಗೆ ಆದರ್ಶವಾಗಬೇಕು ಎಂದು ಹೇಳಿದರು.

ಕಂಪನಿಯ ಮುಖ್ಯಕಾರ್ಯನಿರ್ವಾಹಕ ಗುರು.ಪಿ.ಹೆಚ್ ಮಾತನಾಡಿ, ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳಿಸಲು ಗಾಂಧೀಜಿ, ಭಗತ್ಸಿಂಗ್,ಲಾಲಬಹಾದ್ದೂರ ಶಾಸ್ತ್ರಿ, ಚಂದ್ರಶೇಖರ ಆಜಾದ, ಸುಭಾಶ್ಚಂದ್ರಭೋಸರಂತಹ ಅಸಂಖ್ಯ ಮಹನೀಯರು ತಮ್ಮ ವೈಯಕ್ತಿಕ ಬದುಕಿನ ಸಂತೋಷಗಳನ್ನು ತ್ಯಾಗ ಮಾಡಿದರು.ಬ್ರಿಟಿಷರ ವಿರುದ್ಧ ಉಗ್ರ ಹೋರಾಟದ ಮೂಲಕ ಇತಿಹಾಸ ಬರೆದರು.

ನಮಗೆ ದೇಣಿಗೆಯಾಗಿ ಕೊಟ್ಟ ಸ್ವಾತಂತ್ರ್ಯವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ದೇಶವನ್ನು ಅಭಿವೃದ್ಧಿಪಥದತ್ತ ಸಾಗಬೇಕಾಗಿದೆ. ಭಾರತೀಯರಾದ ನಾವು ಯಾವುದೇ ಜಾತಿ,ಮತ,ಪಂಥ, ಧರ್ಮದ ಹೆಸರಿನಲ್ಲಿ ಬೇಧ-ಭಾವ ಮಾಡದೇ ಎಲ್ಲರೂ ಕೂಡಿಕೊಂಡು ಬಾಳುವುದರ ಮೂಲಕ ಭಾರತದ ಭವಿಷ್ಯ ಉಜ್ವಲಗೊಳಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಂಪನಿಯ ಉಪಾದ್ಯಕ್ಷರಾದ ಮಲ್ಲಿಕಾರ್ಜುನ ಇಟಗಿ, ನಿರ್ದೇಶಕರಾದ ಬಸವರಾಜ ರಾಮಗೊಂಡ, ನಾಗೇಂದ್ರ ಕಂಠಿ, ಶರಣಪ್ಪ ಸಣಮೂ, ಹಣಮಂತರಾವ್ ಶಂಕರವಾಡಿ, ನಾಗಣ್ಣ ಮಡಿವಾಳ, ಶ್ರೀದೇವಿ ಮರತೂರ, ರವಿ ಯರಗೋಳ, ಹಾಗು ಸಿಬ್ಬಂದಿಗಳಾದ ಗುರು ಪಿ.ಹೆಚ್. ಕ್ಷೇಮಲಿಂಗ್ ನರೋಣಾ, ಮಹಾದೇವಿ ಹೂಗಾರ, ರೇಷ್ಮಾ,ಮೇನಕಾ,ಪ್ರೇಮಲತಾ ಮುಂತಾದವರು ಉಪಸ್ಥಿತರಿದ್ದರು.

 

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here