ಕಲಬುರಗಿ; ನಗರದ ಶರಣಬಸವೇಶ್ವರ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ೭೪ ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ದ್ವಜಾರೋಹಣ ನೆರವೇರಿಸಿದರು.
ಪ್ರತಿವರ್ಷಕಿಂತ ಈ ವರ್ಷ ಬಿನ್ನವಾಗಿ, ಸರಳವಾಗಿ ಆಚರಿಸಲಾಯಿತು. ಶರಣಬಸವ ವಿಶ್ವವಿದ್ಯಾಲಯದ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಇನ್ನಿತರ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಡ್ರೀಲ್ ಮತ್ತು ವಿವಿಧ ವಿಶಿಷ್ಟ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಕೋವಿಡ್-೧೯ ಕಾರಣ ಇವೆಲ್ಲ ಚಟುವಟಿಕೆಗಳನ್ನು ಈ ವರ್ಷ ನಿಶೇಧಿಸಲಾಗಿತ್ತು. ಸರ್ಕಾರದ ನಿಯಮಗಳನುಸಾರ ಸರಳವಾಗಿ ಆಚರಿಸಲಾಯಿತು.
ವಿಶಾಲವಾದ ಮೈದಾನದಲ್ಲಿ ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ಬೋಧನಾ ಸಿಬ್ಬಂದಿಗಳ ಸಮ್ಮುಖದಲ್ಲಿ ಬಸವರಾಜ ದೇಶಮುಖ ಅವರು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು. ಕೋವಿಡ್ -೧೯ ಕಾರಣದಿಂದಾಗಿ ೨೦೨೦ ವರ್ಷ ಭಾರತ ಸೇರಿದಂತೆ ಇಡೀ ಜಗತ್ತಿಗೆ ಕೆಟ್ಟ ವರ್ಷವಾಗಿದೆ. ಇದರಿಂದ ದೇಶದ ಪ್ರಗತಿ ನಿಧಾನಗತಿಯಲ್ಲಿ ಸಾಗಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಕುಂದುಂಟಾಗಿದೆ. ಆರ್ಥಿಕ ತೊಂದರೆಯಿಂದಾಗಿ ಶಿಕ್ಷಣ ಕ್ಷೇತ್ರದ ಮೇಲೆ ಗಂಭೀರವಾಗಿ ಪರಿಣಾಮ ಬೀರಿದೆ. ಶಾಲಾ ಕಾಲೂಜುಗಳ ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಸಾಧ್ಯವಾಗುತ್ತಿಲ್ಲ. ವಿದ್ಯಾವರ್ಧಕ ಸಂಘದ ಹಾಗೂ ವಿಶ್ವವಿದ್ಯಾಲಯದ ಶಾಲಾ ಕಾಲೇಜುಗಳು ಆನ್‌ಲೈನ್ ತರಗತಿಯನ್ನು ಕೈಗೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಆ ತೊಂದರೆಯನ್ನು ನಿವಾರಿಸುವಲ್ಲಿ ಶಿಕ್ಷಕರು ನಿರತರಾಗಬೇಕು ಎಂದು ಹೇಳಿದರು.
ಈ ವ? ಬಳ್ಳಾರಿ ಸಮೂಹದ ಅಡಿಯಲ್ಲಿ ಬರುವ ೮ ಜಿಲ್ಲೆಗಳ ಎನ್‌ಸಿಸಿ ಕೆಡೆಟ್‌ಗಳಿಗಾಗಿ ನಡೆಸಲಾದ ಸಿ ಪ್ರಮಾಣಪತ್ರ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಎನ್‌ಸಿಸಿ ಕೆಡೆಟ್ ಶ್ರೀನಿವಾಸ್ ಕುಲಕರ್ಣಿಯನ್ನು ಬಸವರಾಜ ದೇಶಮುಖ ಸನ್ಮಾನಿಸಿದರು.
ಇದಕ್ಕೂ ಮೊದಲು ಶರಣಬಸವ ವಿಶ್ವವಿದ್ಯಾಲಯದ ಸಮ ಕುಲಪತಿ ಡಾ.ವಿ.ಡಿ.ಮೈತ್ರಿ, ವಿವಿಕುಲಸಚಿವ ಡಾ.ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ್ ಶಾಸ್ತ್ರಿ, ಡೀನ್ ಡಾ.ಲಕ್ಷ್ಮಿ ಪಾಟೀಲ್, ಡೀನ್ ಡಾ.ಬಸವರಾಜ್ ಮಠಪತಿ ಮತ್ತು ವಿವಿಯ ಇತರ ಅಧಿಕಾರಿಗಳು ವಿವಿಯ ಇತರ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.