ಕುಂಬಾರಪೇಟೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣ

0
75

ಸುರಪುರ: ಸುರಪುರ ಸಂಸ್ಥಾನಕ್ಕೂ ಕಿತ್ತೂರು ಸಂಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ, ಕಿತ್ತೂರು ಅರಸರು ಆಂಗ್ಲರ ವಿರುದ್ಧ ಹೋರಾಟ ಮಾಡಲು ಅಂದು ಮುಂದಾಳತ್ವ ವಹಿಸಿದ್ದ ಸಂಗೊಳ್ಳಿ ರಾಯಣ್ಣ ಸುರಪುರ ಸಂಸ್ಥಾನದ ಅರಸರ ಬಳಿ ಬಂದು ಸೈನ್ಯದ ಬೆಂಬಲ ಕೋರಿ ಎರಡು ನೂರು ಜನ ಸೈನಿಕರ ಬೆಂಬಲ ಪಡೆದ ಇತಿಹಾಸವಿದೆ.ಇಂತಹ ರಾಯಣ್ಣನ ಮೂರ್ತಿ ಸುರಪುರ ಸಂಸ್ಥಾನದ ಹೆಬ್ಬಾಗಿಲಾಗಿದ್ದ ಕುಂಬಾರಪೇಟೆಯಲ್ಲಿ ಪ್ರತಿಷ್ಠಾಪಿಸಿರುವುದು ಸಂತೋಷದ ಸಂಗತಿಯಾಗಿದೆ ಎಂದು ತಿಂಥಣಿ ಬ್ರೀಡ್ಜ್‌ನ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮೀಜಿ ಮಾತನಾಡಿದರು.

ನಗರದ ಕುಂಬಾರಪೇಟ ಬಡಾವಣೆಯಲ್ಲಿ ಶನಿವಾರ ನಡೆದ ಸಂಗೋಳ್ಳಿ ರಾಯಣ್ಣನ ಪುತ್ಥಳಿ ಅನಾವರ್ಣಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿ ಮಾತನಾಡಿದ ಅವರು ,ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ರಾಷ್ಟ್ರ ಪೇಮಿಗಳು ತಮ್ಮ ಜೀವವನ್ನು ಭಾರತಮಾತೆಗೆ ಅರ್ಪಿಸಿದ್ದಾರೆ ಅಂಥವರಲ್ಲಿ ಅಗ್ರಸ್ಥಾನದಲ್ಲಿ ಬರುವ ಸುರಪುರ ಸಂಸ್ಥಾನದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಮತ್ತು ಸಂಗೊಳ್ಳಿ ರಾಯಣ್ಣರು ಇತಂಹ ಇತಿಹಾಸ ಪುರುಷರನ್ನು ಗೌರವಿಸಿ ಅವರ ಮಾರ್ಗದಲ್ಲಿ ನಡೆಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ತಿಂಥಣಿ ಬ್ರೀಡ್ಜನ ಕನಕಗುರು ಪೀಠದ ಶ್ರೀ ಸಿದ್ದರಾಮಾನಂದ ಪುರಿ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಆರಂಭದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಯಣ್ಣ ಪುತ್ಥಳಿಯ ಮುಂದೆ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು.

ಈ ಸಂದರ್ಭದಲ್ಲಿ ರೇವಣಸಿದ್ದೇಶ್ವರರ ಶಿರೂರ ಶಾಖಾಮಠ ಅಗತೀರ್ಥ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಸಾನಿಧ್ಯವಹಿಸಿದ್ದರು, ಕಕ್ಕೇರಿ ಸೋಮನಾಥ ದೇವಸ್ಥಾನದ ನಂದಣ್ಣ ಪೂಜಾರಿ, ಅರಸು ಮನೆತನದ ರಾಜಾ ಲಕ್ಷ್ಮೀನಾರಾಯಣ ನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಮುಖಂಡರಾದ ನಿಂಗಣ್ಣ ಚಿಂಚೋಡಿ, ನಿಂಗರಾಜ ಬಾಚಿಮಟ್ಟಿ, ಉಪೇಂದ್ರ ನಾಯಕ ಸುಬೇದಾರ, ಜುಮ್ಮಣ್ಣ ಏಳುರೊಟ್ಟಿ, ಅಯ್ಯಪ್ಪ, ಮಲ್ಲು ದಂಡಿನ್, ಹಯ್ಯಾಳಪ್ಪ ಕೆಂಗುರಿ, ಮಲ್ಲಣ್ಣ ಹುಬ್ಬಳ್ಳಿ, ಮಲ್ಲೇಶಿ ಪಾಟೀಲ, ಸೇರಿದಂತೆ ಇನ್ನಿತರರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here