ಸುರಪುರ: ನಗರದ ಅಸರ್ ಮೋಹಲ್ಲಾದಲ್ಲಿ ಭಾನುವಾರ ಸಂಘಟನೆಯ ಅಲ್ಪಸಂಖ್ಯಾತ ವಿಭಾಗದ ನಗರ ಘಟಕವನ್ನು ಉದ್ಘಾಟಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಯಕರ್ನಾಟಕ ತಾಲೂಕು ಅಧ್ಯಕ್ಷ ರವಿಕುಮಾರ ನಾಯಕ ಮಾತನಾಡಿ,ಜಯಕರ್ನಾಟಕ ಸಂಘಟನೆ ರಾಜ್ಯದ ಸರ್ವಾಂಗಿಣ ಅಭೀವೃಧ್ಧಿಗೆ ಅನೇಕ ಹೊರಾಟಗಳನ್ನು ಮಾಡಿಕೊಂಡು ಬರುತ್ತಿದೆ.ನಮ್ಮ ಸಂಘಟನೆ ರಾಜ್ಯದ ಅನೇಕ ಕನ್ನಡ ಪರ ಸಂಘಟನೆಗಳಲ್ಲಿ ಪ್ರಮುಖವಾಗಿದೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರ ನಿಧನ ದೊಡ್ಡ ಆಘಾತವನ್ನುಂಟು ಮಾಡಿದೆ ಆದರೂ ಸಂಘಟನೆ ಅತ್ಯುತ್ತಮವಾಗಿ ಮುಂದುವರಿದಿದೆ’ ಎಂದರು.
ನಂತರ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ ನಗರ ಘಟಕದ ಅಧ್ಯಕ್ಷ ಮಲ್ಲಪ್ಪನಾಯಕ ಮಾತನಾಡಿ, ಜಯಕರ್ನಾಟಕ ಸಂಘಟನೆ ಮಹಿಳಾ, ರೈತ, ಅಲ್ಪಸಂಖ್ಯಾತ, ವಿದ್ಯಾರ್ಥಿ ಹೀಗೆ ವಿವಿಧ ವಿಭಾಗಗಳಲ್ಲಿ ಸಂಘಟಿತವಾಗುತ್ತಿದೆ. ನೂತನ ಪದಾಧಿಕಾರಿಗಳು ಸಂಘಟನೆಯ ಸಿದ್ಧಾಂತಗಳಿಗೆ ಬದ್ಧರಾಗಿರಬೇಕು’ ಎಂದರು.
ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ವೆಂಕಟರೆಡ್ಡಿ ಶಹಾಪುರ, ರಾಜು ದರಬಾರಿ, ನಗರಸಭೆ ಸದಸ್ಯ ಮಹ್ಮದ್ ಇಸ್ಮಾಯಿಲ್, ಭೀಮರಾಯ ಸಿಂಧಗಿರಿ ಮಾತನಾಡಿದರು.
ಶರಣಪ್ಪ ಗೋನಾಲ, ರಾಮಕೃಷ್ಣ ಕಲ್ಲೋಡಿ, ಅನಿಲ ಗುತ್ತೇದಾರ, ಮದನಶಾ, ದೇವುನಾಯಕ ಜಾಲಿಬೆಂಚಿ, ಮೌನೇಶ ದಳಪತಿ ಇದ್ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕೆಜೆಯು ನೀಡಿದ ರಾಜ್ಯ ಮಟ್ಟದ ಭಾಜನರಾಗಿರುವ ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನ ಗುಳಿಗಿ ಮತ್ತು ಕಲೀಂ ಫರೀದಿ ಅವರನ್ನು ಸನ್ಮಾನಿಸಲಾಯಿತು.
ಯಲ್ಲಪ್ಪ ಕಲ್ಲೋಡಿ ಸ್ವಾಗತಿಸಿದರು. ಹಣಮೇಗೌಢ ಶಖಾಪುರ ನಿರೂಪಿಸಿದರು. ರಾಘವೇಂದ್ರ ಗೋಗಿಕರ್ ವಂದಿಸಿದರು.
ಪದಾಧಿಕಾರಿಗಳು: ಮಹಿಬೂಬಶಾ (ಗೌರವಾಧ್ಯಕ್ಷ), ಡಿ.ಕೆ. ನಬಿಶಾ (ಅಧ್ಯಕ್ಷ), ಚಾಂದಶಾ (ಉಪಾಧ್ಯಕ್ಷ), ರಫೀಕಶಾ (ಕಾರ್ಯಾಧ್ಯಕ್ಷ), ಮಹಿಬೂಬಶಾ (ಪ್ರಧಾನ ಕಾರ್ಯದರ್ಶಿ), ಮಹಿಮೂದಶಾ (ಸಹ ಕಾರ್ಯದರ್ಶಿ), ಡಿ.ಎಕ್ಸ್. ನಬಿಶಾ (ಸಂಚಾಲಕ), ದಾವುದಶಾ (ವಕ್ತಾರ), ಆರಿಫಶಾ (ಖಜಾಂಚಿ), ಸೈಯದ್ ಸಮೀರಶಾ (ಸಹ ಖಜಾಂಚಿ). ಶಿವಕುಮಾರ ಕಟ್ಟಿಮನಿ (ಸಲಹೆಗಾರ).