ಸುರಪುರ: ದೇಶಕ್ಕೆ ಸ್ವಾತಂತ್ರ್ಯ ದೊರೆಯಲೆಂದು ಮೊದಲು ಹೋರಾಟ ನಡೆಸಿದ ಕಿತ್ತೂರು ಸಂಸ್ಥಾನದ ಸೈನಿಕ ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಅವರು ಆರಂಭಿಸಿದ ಸ್ವಾತಂತ್ರ್ಯ ಹೋರಾಟ ನಂತರದ ಎಲ್ಲಾ ಹೋರಾಟಗಾರರಿಗೆ ಸ್ಪೂರ್ತಿಯಾಗಿದೆ. ಇತಂಹ ಮಹಾನ ವ್ಯಕ್ತಿಯ ಮೂರ್ತಿಯನ್ನು ಬೆಳಗಾವಿಯ ಪೀರನವಾಡಿಯಲ್ಲಿ ತೆರವುಗೊಳಿಸಿರುವುದು ಸರ್ಕಾರ ಅಪಚಾರಮಾಡಿದಂತಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ನಿಂಗಣ್ಣ ಚಿಂಚೋಡಿ ಮಾತನಾಡಿದರು.
ನಗರದ ತಹಸಿಲ್ದಾರ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೊರಾಡಿ ದೇಶಕ್ಕಾಗಿ ತಮ್ಮ ಪ್ರಾಣವನ್ನೆ ತ್ಯಾಗದ ಮಾಡಿದ ಮಹಾನ ಆದರ್ಶವ್ಯಕ್ತಿಗಳ ಸ್ಮಾರಕ ಮತು ಪುತ್ಥಳಿಗಳನ್ನು ಸರ್ಕಾರ ತೆರವುಗೊಳಿಸಿ ಇತಿಹಾಸ ಪುರುಷರಿಗೆ ದ್ರೋಹಮಾಡುತ್ತಿದ್ದೆ ಪೀರನವಾಡಿಯಲ್ಲಿರುವ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ತೆರುವುಗೊಳಿಸಿ ಇಡಿ ಸ್ವಾತಂತ್ರ್ಯ ಹೋರಾಟಗಾರನ್ನು ಅವಮಾನಿಸಿದಂತಾಗಿದೆ ಕೂಡಲೆ ಸರ್ಕಾರ ಎಚ್ಚೆತ್ತುಕೊಂಡು ಪೀರನವಾಡಿಯಲ್ಲಿಯೇ ರಾಯಣ್ಣನ ಪುತ್ಥಳಿಯನ್ನು ಮರುಸ್ಥಾಪಿಸಬೇಕು ಎಂದರು.
ನಂತರ ಸಂಗೊಳ್ಳಿ ರಾಯಣ್ಣ ಯುವಘರ್ಜನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿಚಂದ್ರಾ ಹುದ್ದಾರ ಮಾತನಾಡಿ ರಾಯಣ್ಣನ ಮೂರ್ತಿಯನ್ನು ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ಅವರ ಜನುಮದಿನದಂದೆ ತೆರವುಗೊಳಿಸುವ ಮೂಲಕ ಅವರಿಗೆ ಸರ್ಕಾರ ಅಗೌರವ ತೋರಿದೆ ಇದನ್ನು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಉಗ್ರವಾಗಿ ಖಂಡಿಸುತ್ತದೆ.
ಕೂಡಲೆ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಇಲ್ಲವಾದಲ್ಲಿ ಸಂಘಟನೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ್-೨ ತಹಶೀಲ್ದಾರ್ ಸುಫಿಯಾ ಸುಲ್ತಾನ್ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘದ ತಾಲೂಕು ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಬೊಮ್ಮನಹಳ್ಳಿ , ಕೆಡಿಎಸ್‌ಎಸ್ ಜಿಲ್ಲಾಧ್ಯಕ್ಷ ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ, ಸಂಗನಗೌಡ ಮಾಲಿ ಪಾಟೀಲ,ಕುರಬರ ಸಂಘದ ರಾಜ್ಯ ನಿರ್ದೇಶಕ ಮಲ್ಲೇಶಿ ಪಾಟೀಲ ನಾಗರಾಳ, ಮಲ್ಲಣ್ಣ ದೇವಿಕೆರಾ, ಕೃಷ್ಣಾ ಹಾವಿನ, ಶಂಕರೆಪ್ಪ ದೇವಿಕೆರಾ, ಅರುಣಕುಮಾರ ಗೊಡ್ರಿಹಾಳ, ಮಾನೇಶಗೌಡ ಬೊಮ್ಮನಹಳ್ಳಿ, ಬೀರಣ್ಣ ಉದ್ಧಾರ, ರಾಹುಲ್ ಮಂಗ್ಯಾಳ, ಅಯ್ಯಪ್ಪ ಗೋಶಿ, ವಿಶ್ವನಾಥ ಮಾಲಿ ಪಾಟೀಲ, ಶರಣು ಮಾಲಗತ್ತಿ, ಮಾಳಪ್ಪ ಮಾಚಗುಂಡಾಳ ಸೇರಿದಂತೆ ಇನ್ನಿತರರಿದ್ದರು.