ಹರಸೂರಿನಲ್ಲಿ ಕಬ್ಬು ಬೆಳೆಗಾರರ ಸಭೆ

0
110

ಕಲಬುರಗಿ: ಇಲ್ಲಿನ  ಹರಸೂರ ಗ್ರಾಮದ ಪ್ರಗತಿಪರ ರೈತರಾದ ಬಸವರಾಜ ಶೆಟಗಾರ ಹೊಲದಲ್ಲಿ ಇತ್ತೀಚಿಗೆ ಕಬ್ಬು ಬೆಳೆಗಾರರ ಸಭೆ ಜರುಗಿತು.

ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯ ಕಬ್ಬು ವಿಭಾಗದ ಮುಖ್ಯಸ್ಥರಾದ ಅಂಬರೀಶ ಕದಮ ಉದ್ಘಾಟಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಡಿಮೆ ಹೊಲದಲ್ಲಿ ಹೆಚ್ಚಿನ ಕಬ್ಬಿನ ಇಳುವರಿ ಮತ್ತು ಹೊಸ ಕಬ್ಬಿನ ತಳಿಗಳಾದ ಗಿSI 8005, ಅo93v297 ಬಗ್ಗೆ ಮಾಹಿತಿಯನ್ನು ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಸಂಸ್ಥೆಯ ಉಪಾಧ್ಯಕ್ಷರಾದ ರಾಧಾಕೃಷ್ಣ ಅವರು, ಕಳೆದ ಹಂಗಾಮಿನಲ್ಲಿ ನಮ್ಮ ಸಂಸ್ಥೆ ಸರಿಯಾದ ಸಮಯಕ್ಕೆ ಕಬ್ಬು ಕಟಾವು ಮತ್ತು ಹಣವನ್ನು ಮಾಡಲಾಗಿದೆ. ಬರುವ ಹಂಗಾಮಿಗಾಗಿ ಕಬ್ಬು ಸರಬರಾಜು ಮಾಡಲು ನಾವು ಎಲ್ಲಾ ಸಿದ್ದತೆಯನ್ನು ಮಾಡಿಕೊಂಡಿದ್ದೇವೆ. ನಮ್ಮ ಸಂಸ್ಥೆಗೆ ತಾವು ಬೆಳೆದಿರುವ ಕಬ್ಬನ್ನು ಸರಬರಾಜು ಮಾಡುವಂತೆ ಗ್ರಾಮದ ರೈತರಿಗೆ ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ವಿಭಾಗಿಯ ಮುಖ್ಯಸ್ಥರಾದ ಪ್ರಶಾಂತ ಪಾಟೀಲ, ಗುರಲಿಂಗ ಹರಸೂರೆ, ಮಡಿವಾಳಪ್ಪ ಯಲಶೆಟ್ಟಿ, ಶ್ರೀಮಂತ ಮಾಡ್ಯಾಳೆ, ನಾರಾಯಣ ಮೇಲಕೇರಿ, ಅಶೋಕ ಗೋಪಾಳೆ ಸೇರಿದಂತೆ ಕಬ್ಬು ವಿಭಾದ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು..!!

ಈ ಸಂದರ್ಭದಲ್ಲಿ ಹರಸೂರ ಗ್ರಾಮದ ಕಬ್ಬು ಬೆಳೆಗಾರರಾದ ಶಿವಶರಣ ಮುದ್ದಾ, ಶಿವಾನಂದ ಕೆ ಡಂಗಿ, ರಾಜಶೇಖರ ಡಿಗ್ಗಿ, ಜಗದೇವ ಶೇರಿ, ಸರಳಾಬಾಯಿ ಬಿರಾದಾರ ಅವರಿಗೆ ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here