ಕಲಬುರಗಿ: ಯುವ ಉತ್ಸಾಹಿ, ಸಂಘಟನಾ ಚತುರ ರಾಜು ಎಸ್. ಕಟ್ಟಿಮನಿ ಅವರನ್ನು ಡಾ. ಬಾಬು ಜಗಜೀನವರಾಂ ಅಭಿವೃದ್ಧಿ ಮತ್ತು ಹೋರಾಟ ಸಮಿತಿಯ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ಭೀಮಣ್ಣಾ ಟಿ. ಬಿಲ್ಲವ್ ಅವರು ಅವರು ಆದೇಶ ಪತ್ರ ಹೊರಡಿಸಿದ್ದಾರೆ.
ಹಸಿರು ಕ್ರಾಂತಿಯ ಹರಿಕಾರ ದಲಿತ ಉದ್ಧಾರಕ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರು ಕುರಿತು ಸುಮಾರು ೧೦ ವರ್ಷಗಳಿಂದ ಸತತವಾಗಿ ಅವರ ಸಿದ್ದಾಂತ ಮತ್ತು ಅವರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಮಾದಿಗ ಸಮುದಾಯದ ಪರವಾಗಿಕ ಎಲ್ಲಾ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದ ರಾಜು ಎಸ್. ಕಟ್ಟಿಮನಿ ಅವರು ಸೇವೆಯನ್ನು ಗುರುತಿಸಿ ಸರ್ವಾನುಮತದಿಂದ ಅವರನ್ನು ಆಯ್ಕೆ ಮಾಡಲಾಗಿದೆ.
ನೂತನವಾಗಿ ನೇಮಕಗೊಂಡಿರುವ ರಾಜು ಎಸ್. ಕಟ್ಟಿಮನಿ ಅವರು ಈ ತಕ್ಷಣ ನಗರದಾದ್ಯಂತ ಸಂಚರಿಸಿ ದಲಿತ ಸಮುದಾಯದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮಾಣಿಕವಾಗಿ ಶ್ರಮಿಸಿ, ಸಂಘಟನೆಯನ್ನು ಗ್ರಾಮೀಣ ಮಟ್ಟದದಿಂದ ರಾಜ್ಯ ಮಟ್ಟದವರೆಗೆ ಬಲಿಷ್ಠಗೊಳಿಸಬೇಕು ಎಂದು ಆದೇಶ ಪತ್ರದಲ್ಲಿ ತಿಳಿಸಿರುತ್ತಾರೆ.