ಕಲಬುರಗಿ: ಹಾಡಗಲೇ ಪುಡಿ ರೌಡಿಗಳ ಅಟ್ಟಹಾಸಕ್ಕೆ ಹಾಡಹಗಲಲ್ಲೇ ಯುವಕ ಓರ್ವ ಕೊಲೆಯಾಗಿರುವ ಘಟನೆ ನಗರದ ಸಾರ್ವಜನಿಕ ಉದನ್ಯಾನವನದ ಬಳಿ ಇಂದು ನಡೆದಿದೆ.
ರಾಣೇಶ್ ಪೀರ್ (ರುಕ್ಮೋದ್ದೀನ್ ತೊಲಾ) ದರ್ಗಾ ಪ್ರದೇಶದ ನಿವಾಸಿ ವೀರೇಶ್ ಕಡಗಂಚಿ (21) ಕೊಲೆಯಾದ ಯುವಕ. ಎಸ್.ಬಿ.ಆರ್. ಕಾಲೇಜಿನ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಮೂವರು ದುಷ್ಕರ್ಮಿ ಪುಡಿ ರೌಡಿಗಳು ಸಾರ್ವಜನಿಕ ಉದನ್ಯಾನವನದ ಬಳಿ, ಬೈಕ್ ನಲ್ಲಿ ಬಂದು ಚಾಕುವಿನಿಂದ ವಿರೇಶ್ ನ ತೊಡೆಗೆ ಇರಿದು ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಯುವಕ ವಿರೇಶ್ ಆಸ್ಪತ್ರೆಗೆ ದಾಖಲಿಸಿದರೂ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ತುಂತುರು ಮಳೆಯ ನಡುವೆಯೇ ಜನನಿಬಿಡ ಪ್ರದೇಶದಲ್ಲಿ ಘಟನೆ ಪೊಲೀಸ್ ಮತ್ತು ಸಾರ್ವಜನಿಕರಿಗೆ ಬೆಚ್ಚಿ ಬೀಳಿಸಿದೆ.
ಸ್ಥಳಕ್ಕೆ ಬ್ರಹ್ಮಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.