ಗಣೇಶೋತ್ಸವ: ಜಿಲ್ಲೆಯಾದ್ಯಂತ ಮದ್ಯ, ಮಾಂಸ ಮಾರಾಟ ನಿಷೇಧ

0
56

ಕಲಬುರಗಿ: ಗಣೇಶ ಚತುರ್ಥಿ ಹಬ್ಬವನ್ನು 2020ರ ಆಗಸ್ಟ್ 22 ರಂದು ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ನಿಟ್ಟನಲ್ಲಿ ಈ ಕೆಳಕಂಡ ದಿನಾಂಕಗಳಂದು ಕಲಬುರಗಿ ಜಿಲ್ಲೆಯಾದ್ಯಂತ ಎಲ್ಲಾ ತರಹದ ಮಾದಕ ವಸ್ತುಗಳ ಮಾರಾಟವನ್ನು ನಿಷೇಧಿಸಲಾಗಿದ್ದು, ಮದ್ಯದ ಅಂಗಡಿಗಳನ್ನು ಮುಚ್ಚಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಶರತ್ ಬಿ. ಅವರು ಆದೇಶ ಹೊರಡಿಸಿದ್ದಾರೆ.

ಆಗಸ್ಟ್ 26 ರಂದು 5 ದಿನದ ಗಣೇಶ ವಿಗ್ರಹಗಳ ವಿಸರ್ಜನೆ, ಆಗಸ್ಟ್ 30 ರಂದು 9 ದಿನಗಳ ಗಣೇಶ ವಿಗ್ರಹ ಹಾಗೂ ಸೆಪ್ಟೆಂಬರ್ 1 ರಂದು 11 ದಿವಸಗಳ ಗಣೇಶ ವಿಗ್ರಹಗಳ ವಿಸರ್ಜನೆ ನಡೆಯಲಿದೆ. ಇದರ ಹಿನ್ನೆಲೆಯಲ್ಲಿ 2020ರ ಆಗಸ್ಟ್ 22ರ ಬೆಳಗಿನ 6 ರಿಂದ ಆಗಸ್ಟ್ 23ರ ಬೆಳಗಿನ 6 ಗಂಟೆಯವರೆಗೆ, ಆಗಸ್ಟ್ 26ರ ಬೆಳಗಿನ 6 ರಿಂದ ಆಗಸ್ಟ್ 27ರ ಬೆಳಗಿನ 6 ಗಂಟೆಯವರೆಗೆ, ಆಗಸ್ಟ್ 30 ರಂದು ಬೆಳಗಿನ 6 ರಿಂದ ಆಗಸ್ಟ್ 31 ರ ಬೆಳಗಿನ 6 ಗಂಟೆಯವರೆಗೆ ಹಾಗೂ ಸೆಪ್ಟೆಂಬರ್ 1ರ ಬೆಳಗಿನ 6 ರಿಂದ ಸೆಪ್ಟೆಂಬರ್ 2ರ ಬೆಳಗಿನ 6 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಗಣೇಶ ಚತುರ್ಥಿ ಪ್ರಯುಕ್ತ ಮಾಂಸ ಮಾರಾಟ ನಿಷೇಧ

ಕಲಬುರಗಿ ನಗರದಾದ್ಯಂತ 2020ರ ಆಗಸ್ಟ್ 22 ರಂದು ಗಣೇಶ ಚತುರ್ಥಿ ಹಬ್ಬ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಅಂದು ನಗರದಾದ್ಯಂತ ಯಾವುದೇ ರೀತಿಯ ಪ್ರಾಣಿ ವಧೆ ಮಾಡುವುದನ್ನು ಅಥವಾ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ಮಹಾನಗರ ಪಾಲಿಕೆ ಆಯುಕ್ತರಾದ ರಾಹುಲ್ ಪಾಂಡ್ವೆ ಅವರು ಆದೇಶ ಹೊರಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here