ಕಲಬುರಗಿ: ನಿನ್ನೆ ಸುರಿದ ಭಾರಿ ಮಳೆಯಲ್ಲಿ ದಕ್ಷಿಣ ಮತಕ್ಷೇತ್ರ ಭೀಮಳ್ಳಿ ಗ್ರಾಮದಲ್ಲಿ ಹಳ್ಳದಲ್ಲಿ ಓರ್ವ 12 ವರ್ಷದ ಬಾಲಕ ಕೊಚ್ಚಿ ಹೋಗಿದ ಘಟನೆ ನಿನ್ನೆ ನಡೆದಿದೆ. ಬಾಲಕನ ಪತ್ತೆಗೆ ಶೋಧ ಕಾರ್ಯ ನಡೆದಿದೆ.
ಜಿಲ್ಲಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಬಿ ತುಳುಕುತ್ತಿರುವ ಬೋಸಗಾ ಕೆರೆ ವೀಕ್ಷಿಸಲು ಹೋಗಿದ್ದ ಡಬರಾಬಾದ್ ಗ್ರಾಮದ ವಿಶ್ವಾರಾಧ್ಯ 22 ಮತ್ತು ಮಲ್ಲಿಕಾರ್ಜುನ 12 ವರ್ಷದ ಬಾಲಕರು ಬೈಕ್ ಮೇಲೆ ವಾಪಸ್ ಮರಳುತ್ತಿದ್ದರು. ಮಳೆಗೆ ಭೀಮಳ್ಳಿ ಬಳಿಯ ಹಳ್ಳದ ಸೇತುವೆ ತುಂಬಿ ಹರಿಯುತ್ತಿದರು, ಹಳ್ಳ ದಾಟಲು ಹೋದಾಗ ನೀರಿನ ರಭಸಕ್ಕೆ ಸವಾರರು ಕೊಚ್ಚಿ ಹೋಗಿದ್ದಾರು ಎನ್ನಲಾಗಿದೆ.
22 ವರ್ಷದ ವಿಶ್ವಾರಾಧ್ಯರನ್ನು ಸ್ಥಳೀಯರ ಸಹಾಯದೊಂದಿಗೆ ಈಜಿ ದಡ ಸೇರಿ ಬಚಾವ್ ಆಗಿದ್ದಾನೆ ಎಂದು ತಿಳಿದುಬಂದಿದ್ದು,12 ವರ್ಷದ ಬಾಲಕ ಮಲ್ಲಿಕಾರ್ಜುನ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದ್ದು, ಬಾಲಕನ ಪತ್ತೆಗೆ ಸ್ಥಳದಲ್ಲಿ NDRF ತಂಡ, ತಹಶೀಲ್ದಾರ್ ಹಾಗೂ ಅಧಿಕಾರಿಗಳು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಗ್ರಾಮೀಣ ಠಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗಣ್ಯರ ಭೇಟಿ: ಈ ವೇಳೆಯಲ್ಲಿ ಘಟನಾಸ್ಥಳಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸಂತೋಷ್ ಪಾಟೀಲ್, ದಣ್ಣೂರ್, ಗ್ರಾಮಪಂಚಾಯಿತಿ ಅಧ್ಯಕ್ಷರಾದ ನೀಲಕಂಠರಾವ್, ಮಹಾಂತೇಶ್ ಪಾಟೀಲ್, ಸೋಮ ವಿ ಸೋಮ , ಇಸ್ಮೈಲ್ ಪುಂಡಲೀಕ ಪೂಜಾರಿ , ಪೀರಪ್ಪ ಜಮಾದಾರ್ ಹಾಗೂ ಗ್ರಾಮದ ಮುಖಂಡರು ಇದ್ದರು.