ಕಲಬುರಗಿ: ನಗರದ ಜಾತ್ಯತೀತ ಜನತಾ ದಳ ಕಚೇರಿಯಲ್ಲಿ ಜೆಡಿಎಸ್ ಮಹಿಳಾ ಘಟಕದ ವತಿಯಿಂದ ಮಹಿಳಾ ಸಂಘಟನೆ ಮತ್ತು ಎಲ್ಲಾ ತಾಲ್ಲೂಕುಗಳ ಪ್ರವಾಸದ ಬಗ್ಗೆ ಚರ್ಚೆಯನ್ನು ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಿ ಪುರಾಣಿಕ್ ಅವರ ನೇತೃತ್ವದಲ್ಲಿ ಮಹಿಳಾ ವಿಭಾಗದಿಂದ ಸುಮಾರು ೨೫ ರಿಂದ ೩೦ ಸಾವಿರ ಮಹಿಳಾ ಸದಸ್ಯತ್ವ ನೊಂದಣೆಯನ್ನು ಮಾಡಿಕೊಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಮಹಿಳಾ ಮಹಾ ಪ್ರಧಾನ ಕಾರ್ಯದರ್ಶಿ ಸುನೀತಾ ಎಂ. ತಳವಾರ, ಗಂಗುಬಾಯಿ ಬಿ ವಳಕೇರಿ, ಶಾಂತಾ ಹಿರೇಮಠ, ಶಕುಂತಲಾ ಹಿರೇಮಠ, ಮಹಾದೇವಿ, ಪಾರ್ವತಿ ಲೋಂಡೆ, ಲಲಿತಾ, ರೇಖಾ, ಜಗದೇವಿ ಇದ್ದರು.