ಬರಹಗಾರರ ಬಳಗದ ವತಿಯಿಂದ: ಡಾ. ಈಶ್ವರಯ್ಯ ಮಠ ರವರ ನುಡಿನಮನ

0
146

ಕಲಬುರಗಿ: ಭಾಗದ ಹಿರಿಯ ಸಾಹಿತಿ, ಉತ್ತಮ ವಾಗ್ಮಿ, ಸಂಶೋಧಕ, ಶಿಕ್ಷಕ ಡಾ. ಈಶ್ವರಯ್ಯ ಮಠ ರವರ ಅಕಾಲಿಕ ಮರಣ ಈ ಭಾಗದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ ಎಂದು ಉದಯೋನ್ಮುಖ ಬರಹಗಾರರ ಬಳಗದ ಅಧ್ಯಕ್ಷರಾದ ಡಾ. ಪ್ರೇಮಚಂದ ಚವ್ಹಾಣ ನುಡಿದರು.

ನಗರದ ಕನ್ನಡ ಭವನದಲ್ಲಿ ಗುರುವಾರ ಬರಹಗಾರರ ಬಳಗ ಹಮ್ಮಿಕೊಂಡ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

Contact Your\'s Advertisement; 9902492681

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ. ಎಸ್. ಇರಾಣಿ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ ಡಾ. ಈಶ್ವರಯ್ಯ ಅವರು ಒಂದು ಬೃಹದಾಕಾರದ ಗೆಳೆಯರ ಬಳಗವನ್ನು ಕಟ್ಟಿಕೊಂಡವರು. ಅವರ ಅಕಾಲಿಕ ನಿಧನ ಈ ಭಾಗವನೆ ಅಲ್ಲ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.

ಬಳಗದ ಗೌರವಾಧ್ಯಕ್ಷ ಡಾ.ಸೂರ್ಯಕಾಂತ ಪಾಟೀಲ್ ಮಾತನಾಡಿ ಈಶ್ವರಯ್ಯ ಮಠ ಅವರು ಡಾ. ಶಿವಶರಣ ಪಾಟೀಲ ಜಾವಳಿಯವರಂತೆ ನೇರನಡೆ ವ್ಯಕ್ತಿತ್ವ ಹೊಂದಿದ ಪ್ರತಿಭಾನ್ವಿತ ವಾಗ್ಮಿ ಇವರಾಗಿದ್ದರು. ಅವರು ಅಗಲಿಕೆ ಕಲ್ಯಾಣ ಕರ್ನಾಟಕಕ್ಕೆ ತುಂಬಲಾಗದ ನಷ್ಟವಾಗಿದೆ ಎಂದರು.
ಈ ನುಡಿ ನಮನ ಕಾರ್ಯಕ್ರಮದಲ್ಲಿ ಬಳಗದ ಕಾರ್ಯದರ್ಶಿಗಳಾದ ಮಡಿವಾಳಪ್ಪ ನಾಗರಹಳ್ಳಿ, ಡಾ.ಮಹೇಶ ಗಂವಾರ, ಪ್ರಭುಲಿಂಗ ನೀಲೂರೆ ಮಾತನಾಡಿದರು.

ರಮೇಶ್ ಕಡಾಳೆ, ದೌಲತರಾಯ ಮಾಲಿಪಾಟೀಲ್ ಡಾ.ಮೋಹನರಾಜ್ ಪತ್ತಾರ್, ಉದಯಕುಮಾರ್ ಪಡಶೆಟ್ಟ, ಆನಂದ ನಂದೂರಕರ್, ಡಾ.ನೀಲಕಂಠ ವಾಲಿ, ಬಳಗದ ಸದಸ್ಯರು ಮತ್ತು ಅಭಿಮಾನಿಗಳು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here