ಆಯುಕ್ತ ಲೋಕಂಡೆ ಸ್ನೇಹಲ್ ಸುಧಾಕರ್ ಗೆ ಸನ್ಮಾನ

0
48

ಕಲಬುರಗಿ: ನೂತನವಾಗಿ ಆಗಮಿಸಿದ ಮಹಾ ನಗರಪಾಲಿಕೆ ಆಯುಕ್ತರಾದ ಸ್ನೇಹಲ ಸುಧಾಕರ್ ಲೋಕಂಡೆ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ವಿವಿಧ ರಾಜಕೀಯ ಮುಖಂಡರ ವತಿಯಿಂದ ಸನ್ಮಾನಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು ಹಾಗೂ ಮಾಜಿ ಮಹಾಪೌರರಾದ ಶರಣ್ ಕುಮಾರ್ ಮೋದಿ ಅವರು ಮಾತನಾಡಿ ನಗರದ ಅಭಿವೃದ್ಧಿಗೆ ಬಗ್ಗೆ ಹೆಚ್ಚು ಒತ್ತುಕೊಡಿ ನಲ್ಲಿ ನೀರು ಕೆಲವೇ ವಾರ್ಡ್ ಗಳಿಗೆ ಸೀಮಿತವಾಗಿದ್ದು 24/7 ಹೆಚ್ಚೆಚ್ಚು ವಾರ್ಡಗಳಿಗೆ ನಗರದಲ್ಲೆಡೆ ತಲುಪುವಂತಾಗಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಕೋರಿದರು ಹಾಗೂ ಪಾಲಿಕೆಯ ಸಹಾಯಕ್ಕಾಗಿ ಮಹಾಸಭೆ ಯಾವಾಗಲೂ ಕೈಜೋಡಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾಜಿ ಉಪ ಮಹಾಪೌರರಾದ ಪ್ರಮೋದ ತಿವಾರಿ, ಮಹಾಸಭೆ ಯುವ ಘಟಕದ ಗೌರವಾಧ್ಯಕ್ಷರಾದ ಎಂ ಎಸ್ ಪಾಟೀಲ್ ನರಿಬೋಳ, ನಗರ ಘಟಕ ಅಧ್ಯಕ್ಷರಾದ ಉದಯ್ ಕುಮಾರ್ ಪಾಟೀಲ್, ಕಾರ್ಯಕಾರಣಿ ಸದಸ್ಯರಾದ ಮಹೇಶ್ ಕೆ ಪಾಟೀಲ್, ಕಾರ್ಯದರ್ಶಿಗಳಾದ ಶೀಲಾ ಮುತ್ತಿನ್ ,ಚಂದನಾ ಹಾರಕೂಡೆ, ಮಲ್ಲಿಕಾರ್ಜುನ್ ಪಾಟೀಲ್ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here