ಸುರಪುರ: ತಾಲೂಕಿನ ವಿಪ್ರ ಸಮಾಜದ ಹಿರಿಯ ಜೀವಿ ಹಾಗೂ ಶಿಕ್ಷಣ ಪ್ರೇಮಿ ರತ್ನಾಕರ ಭಟ್ ಜೋಶಿ ಇಂದು ನಿಧನರಾದರು.
ರತ್ನಾಕರ ಭಟ್ ಜೋಶಿಯವರು ಅನೇಕ ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು.
ತಾಲೂಕಿನ ದೇವರಗೋನಾಲದ ಸರ್ಕಾರಿ ಪ್ರೌಢಶಾಲೆಯಲ್ಲಿ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದರು ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ದ್ವಿತೀಯ ಬಾರಿ ಶಾಸಕರಾಗಿದ್ದಾಗ ಆಪ್ತ ಸಹಾಯಕರಾಗಿಯೂ ಸೇವೆ ಸಲ್ಲಿಸಿದ್ದರು.
62 ವರ್ಷ ವಯಸ್ಸಿನ ಅವರು ಕಳೆದ 2018ರ ಜುಲೈ 30 ರಂದು ಸೇವೆಯಿಂದ ನಿವೃತ್ತರಾಗಿದ್ದರು.
ಮೃತರಿಗೆ ಇಬ್ಬರು ಗಂಡು ಮತ್ತು ಒಬ್ಬರು ಹೆಣ್ಣು ಮಗಳಿದ್ದು, ಹಿರಿಯ ಮಗ ಶ್ರೀಕರ ಭಟ್ ಜೋಶಿ ರಾಜ್ಯದ ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ರಾತ್ರಿ 9:30 ಸುಮಾರಿಗೆ ತೀವ್ರ ಹೃದಯಾಘಾತಕ್ಕೊಳಗಾದ ರತ್ನಾಕರ ಭಟ್ ಜೋಶಿಯವರು ಸ್ವಗೃಹದಲ್ಲಿಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.