ಕಲಬುರಗಿಯಲ್ಲಿ ಬೆಳ್ಳಂಬೆಳಿಗ್ಗೆ ಮತ್ತೆ ಶೂಟ್ ಔಟ್

0
302

ಕಲಬುರಗಿ: ರಿಕವರಿಗೆ ತೆರಳಿದ ಪೊಲೀಸ್ ರ ಮೇಲೆ ಶೂಟ್ ಔಟ್ ನಡೆದಿರುವ ಘಟನೆ ಇಂದು ಬೆಳ್ಳಂಬೆಳಿಗ್ಗೆ ಕಲಬುರಗಿ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಶನ್ ಬಜಾರ್ ಪೊಲೀಸ್ ನೇತೃತ್ವದ ತಂಡ ಆರೋಪಿಯಿಂದ ವೆಪನ್ ರಿಕವರಿಗೆ ತೆರಳಿದ ವೇಳೆ ಆರೋಪಿ ಅದೇ ಗನ್ನಿಂದ ಪೊಲೀಸರ ಮೇಲೆ ಶೂಟ್ ಮಾಡುತ್ತಿದ್ದ. ಈ ವೇಳೆಯಲ್ಲಿ ಪ್ರತ್ಯುತ್ತರವಾಗಿ ಆರೋಪಿಯ ಕಾಲ ಮೇಲೆ ಶೂಟ್ ಮಾಡಲಾಗಿದೆ.

Contact Your\'s Advertisement; 9902492681

ವಿದ್ಯಾ ನಗರ ನಿವಾಸಿ ಹಾಗೂ ಬಡಾವಣೆಯ ಪಾಲಿಕೆಯ ಸದಸ್ಯ ಸಂಬಂಧಿಯಾದ ರೌಡಿ ಶೀಟರ್ ಮಿರ್ಜಾ ಫಹಿಮ್ ಬೇಗ್ ಆರೋಪಿ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಇನ್ಸ್​ಪೆಕ್ಟರ್​​ ಲಾಲಸಾಬ ಗೌಂಡಿ ಗುಂಡು ಹಾರಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಹೆಡ್ ಕಾನ್ಸ್​​​​ಸ್ಟೇಬಲ್​​​​​ ಅಂಬಾದಾಸ ಮತ್ತು ಕಾನ್ಸ್​ಟೇಬಲ್​ ರಫೀಕ್​ಗೆ ಗಾಯಗಳಾಗಿದ್ದು, ಅವರನ್ನು ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಫಯೀಂನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಘಟನಾ ಸ್ಥಳದಲ್ಲಿ ಒಂದು ಲಾಂಗ್ ಮಚ್ಚು ಮತ್ತು ಗುಂಡುಗಳು ಸ್ಥಳದಲ್ಲಿ ಲಭ್ಯವಾಗಿದೆ.

ಈ ಕುರಿತು ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here