ಶಹಾಬಾದ:ನಗರದಲ್ಲಿ ಮಳೆ ಬಂದರೆ ಸಾಕು. ಶಹಾಬಾದನ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ಕಳಪೆ ಕಾಮಗಾರಿಯಿಂದ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿ ನೀರು ತುಂಬಿ ಕೆರೆಯಂತಾಗುತ್ತದೆ. ಇದರಿಂದ ವಾಹನ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಶಹಾಬಾದ -ನಿಜಾಮ ಬಜಾರ ರಸ್ತೆ ಪ್ರಯಾಣ ಎಂದರೆ ಎದೆ ಜಲ್ಲ್ ಎನ್ನುವ ಮಟ್ಟಿಗೆ ರಸ್ತೆ ತಗ್ಗು-ದಿನ್ನೆಗಳಿಂದ, ಧೂಳಿನಿಂದ ಹಾಗೂ ಮಳೆ ಬಂದರೆ ಕೆಸರು ಗದ್ದೆಯಾಗಿ ಆವರಿಸಿಕೊಳ್ಳುತ್ತದೆ. ಇಲ್ಲಿ ಸಂಚರಿಸುವ ಜನರು ನಿತ್ಯ ಗಟ್ಟಿ ಧೈರ್ಯ ಮಾಡಿ ಹೊರಡುತ್ತಾರೆ. ರಸ್ತೆಯ ಮಧ್ಯೆ ಆಳುದ್ದ ತೆಗ್ಗುಗಳು ನಿರ್ಮಾಣವಾದರೂ ಇಲ್ಲಿಯವರೆಗೆ ಯಾವ ಅಧಿಕಾರಿಗಳು ಗಮನಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಈಗಾಗಲೇ ನಗರೋತ್ಥಾನ ಯೋಜನೆಯಲ್ಲಿ ಸುಮಾರು ಕೋಟಿಗಟ್ಟಲೇ ಅನುದಾನದಲ್ಲಿ ರಸ್ತೆ ಅಗಲೀಕರಣಕ್ಕಾಗಿ ನೀಡಲಾಗಿತ್ತು.ಆದರೆ ಗುತ್ತಿಗೆದಾರ ಬಸವೇಶ್ವರ ವೃತ್ತದಿಂದ ಜೇವಗರ್ಿ ವೃತ್ತದವರೆಗಿನ ರಸ್ತೆ ನಿರ್ಮಾಣ ಕಳಪೆ ಮಟ್ಟದಿಂದ ಮಾಡಿದ್ದರಿಂದ ಇನ್ನೂ ಪೂರ್ಣಗೊಳ್ಳುವ ಹಂತದಲ್ಲೇ ಅನೇಕ ತಗ್ಗುಗಳು ಉಂಟಾಗಿವೆ.ಅಲ್ಲದೇ ಉತ್ತಮು ಗುಣಮಟ್ಟದಿಂದ ಕೂಡಿದ ಮೊದಲಿನ ರಸ್ತೆ ಅಗಲೀಕರಣ ಮಾಡಲು ಹೋಗಿ ಸಂಪೂರ್ಣ ರಸ್ತೆಯೇ ಹಾಳು ಮಾಡಿದ್ದಾರೆ. ಅನೇಕ ಕಡೆಗಳಲ್ಲಿ ಬಿರುಕು ಮೂಡಿ, ರಸ್ತೆ ಕಿತ್ತು ಹೋಗಿದೆ.ನಂತರ ಸುಮಾರು ಒಂದು ವರ್ಷ ಗುತ್ತಿಗೆದಾರ ನಾಪತ್ತೆಯಾಗಿದ್ದಾನೆ.ಅಲ್ಲಿಂದ ಇಲ್ಲಿಯವರೆಗ ಮೇಲ್ಮಟ್ಟ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ. ಇತ್ತಿಚ್ಚಿಗೆ ಟೂಥ್ ಪಾಲಿಷ್ ಮಾಡಿದ್ದಾರೆ.ಆದರೆ ಅದು ಕೂಡ ಕಳಚಿ ಹೋಗಿ, ಸಾರ್ವಜನಿಕರಿಗೆ ಕುತ್ತಾಗಿ ಪರಿಣಮಿಸಿದೆ.
ಕೇವಲ ಒಂದು ಕಿಮೀ ರಸ್ತೆಯ ಮಧ್ಯೆ ನೂರಾರು ಹೊಂಡ ನಿರ್ಮಾಣವಾಗಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಹಾಗೂ ಸಾರ್ವಜನಿಕರಿಗೆ ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ಬಂದಿದೆ.ರಸ್ತೆಯ ತುಂಬೆಲ್ಲಾ ನೀರು ತುಂಬಿಕೊಂಡಿದ್ದರಿಂದ ತೆಗ್ಗು ಕಾಣದೇ ಬಿದ್ದ ಘಟನೆಗಳು ನಡೆದಿವೆ. ಆದರೆ ಇತ್ತಿಚ್ಚಿಗೆ ಸುರಿದ ಮಳೆಯಿಂದ ನಿತ್ಯ ಸಂಚಾರ ಮಾಡುವ ಲಘು ವಾಹನ ಹಾಗೂ ಭಾರಿ ವಾಹನಗಳಿಂದ ಚಿಕ್ಕ ಪುಟ್ಟ ಹೊಂಡಗಳು ಭಾರಿ ಗಾತ್ರದ ಹೊಂಡಗಳಾಗಿ ಪರಿವರ್ತನೆಯಾಗಿವೆ. ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ಇಲ್ಲಿನ ಜನ ಮಳೆ ಬಂದರೂ ಮಳೆ ಬಾರದಿದ್ದರೂ ಹೊಂಡಗಳಿಂದ ಧೂಳಿನಿಂದ ಸಮಸ್ಯೆಯನ್ನು ಎದುರಿಸುತ್ತಾ ಬಂದಿದ್ದಾರೆ.
ಹೀಗಾಗಿ ರಸ್ತೆಯ ಮೇಲೆ ಸಂಚರಿಸುವ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಿದೆ. ಈ ಬಗ್ಗೆ ಎಲ್ಲಾ ಮಾಹಿತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ರಸ್ತೆಯಲ್ಲಿ ಯಾವುದೇ ಸಮಯದಲ್ಲಿ ವಾಹನಗಳು ಬಿದ್ದು ಅಪಾಯವಾಗುವ ಮುನ್ಸೂಚನೆ ನೀಡುತ್ತಿದೆ. ಕೂಡಲೇ ಈ ರಸ್ತೆಯನ್ನು ಹೊಸದಾಗಿ ನಿರ್ಮಾಣ ಮಾಡಲು ಮುಂದಾಗಬೇಕು. ಗುತ್ತಿಗೆದಾರನಿಗೆ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಳಪೆ ಮಟ್ಟದ ರಸ್ತೆ ಹಾಗೂ ಡಿವೈಡರ್ ಕಾಮಗಾರಿ ಮಾಡಿದ್ದರಿಂದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಾಜ್ಯ ಹೆದ್ದಾರಿ ಸಂಪೂರ್ಣ ನಾಶವಾಗಿದೆ.ಇದರಿಂದ ಬಸ್ ನಿಲ್ದಾಣದಿಂದ ಹರಡುವ ಬಸ್ಗಳು ರಿಂಗ್ ರೋಡ್ ಮೂಲಕ ಹಾದು ಹೋಗದೇ ಮುಖ್ಯ ಬಜಾರಿನ ಮೂಲಕ ಸಾಗುತ್ತಿವೆ.ಇದರಿಂದ ಹೊನಗುಂಟಾ ವೃತ್ತ, ಅಶೋಕ ನಗರ,ಶರಣ ನಗರ ಸೇರಿದಂತೆ ಜೇವರ್ಗಿ ಹೋಗುವ ಜನರಿಗೆ ಬಸ್ ಸಿಗದೇ ಎಲ್ಲಿಲ್ಲದ ತೊಂದರೆ ಉಂಟಾಗುತ್ತಿದೆ.ಕೂಡಲೇ ಶಾಸಕರು ಕ್ರಮಕೈಗೊಳ್ಳಬೇಕು- ಮಹ್ಮದ್ ಇರ್ಫಾನ್ ನಗರದ ನಿವಾಸಿ.
ಈಗಾಗಲೇ ರಸ್ತೆ ನಿಮರ್ಾಣಕ್ಕೆ ಕೋಟಿಗಟ್ಟಲೇ ಹಣ ನೀಡಲಾಗಿದೆ.ಆದರೆ ಗುತ್ತಿಗೆದಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ರಸ್ತೆ ನಿರ್ಮಾಣವಾಗದೇ ಹಾಳಾಗಿದೆ. ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಮುಂದಾಗುತ್ತಿಲ್ಲ. ಅಲ್ಲದೇ ಈಗ ಹೊನಗುಂಟಾ ರಸ್ತೆಯ ಮಧ್ಯೆ ಬೀದಿ ದೀಪಗಳು ಅಳವಡಿಕೆಗೆ ಅನುದಾನ ಕಾಯ್ದಿರಿಸಲಾಗಿತ್ತು.ಅದನ್ನು ರದ್ದುಗೊಳಿಸಿ,ಆ ಅನುದಾನವನ್ನು ಮತ್ತೆ ಅದೇ ರಸ್ತೆಯ ಅಗಲೀಕರಣಕ್ಕಾಗಿ ವಿನಿಯೋಗಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.ಹೀಗಾದರೇ ಅಧಿಕಾರಿ ವರ್ಗದವರು ಸರಕಾರಕ್ಕೆ ವಂಚನೆ ಮಾಡಿದಂತಾಗುತ್ತದೆ.ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೆವೆ- ರಾಜಮಹ್ಮದ್ ರಾಜಾ ಅಧ್ಯಕ್ಷರು ಜೆಡಿಎಸ್ ನಗರ ಘಟಕ.