ಶಹಾಬಾದ:ಕೇಂದ್ರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಶನಿವಾರ ಭಾರತ ಕಮ್ಯುನಿಸ್ಟ ಪಕ್ಷ (ಮಾರ್ಕ್ಸವಾದಿ) ತಾಲೂಕಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ ಮಾತನಾಡಿ, ಕೇಂದ್ರ ಸರಕಾರ ರಾಷ್ಟ್ರೀಯ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಹೊರಟಿದೆ.ಬ್ರಿಟಿಷರಿಂದ ಹೋರಾಟ ಮಾಡಿ ಪಡೆದಂತಹ ಕಾಯ್ದೆಗಳನ್ನು ನಮ್ಮನ್ನು ಆಳುತ್ತಿರುವ ಕೇಂದ್ರ ಸರಕಾರ ಕಳೆಯುತ್ತಿದೆ.ರೈತ ಕಾರ್ಮಿಕರ ಹಾಗೂ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ.ರೈತರನ್ನು, ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದ್ದಾರೆ.ಕಾರ್ಮಿಕರ ಹಕ್ಕುಗಳನ್ನು ಕೇಳಿದರೆ ದೇಶ ವಿರೋಧಿ ಪಟ್ಟ ಕಟ್ಟುತ್ತಿದ್ದು, ಇದನ್ನು ಎಲ್ಲರೂ ವಿರೋಧಿಸಬೇಕೆಂದು ಎಂದರು.
ಬಂಡವಾಳಶಾಹಿ ಪರವಾಗಿ ಮಾಡಿರುವ ಕಾಯ್ದೆ ತಿದ್ದುಪಡಿ, ರೇಲ್ವೆ, ವಿದ್ಯುತ್ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ಕಾಮರ್ಿಕ ಕಾಯ್ದೆ, ಭೂಸುಧಾರಣಾ ಕಾಯ್ದೆ,ಎಪಿಎಂಸಿ ಕಾಯ್ದೆ, ಭೂ ಕಂದಾಯ ಕಾಯ್ದೆ ತಿದ್ದುಪಡಿ ಕಾಯ್ದೆಗಳನ್ನು ಕೈಬಿಡಬೇಕೆಂದು ಆಗ್ರಹಿಸಿದಲ್ಲದೇ, ಅತಿವೃಷ್ಟಿಯಿಂದ ಹಾನಿಯಾದ ಹೆಸರು,ಉದ್ದು ಹಾಗೂ ತೊಗರಿ ಬೆಳೆಗಳಿಗೆ ಪರಿಹಾರ ನೀಡಬೇಕು, ಹೆಸರು ಖರೀದಿ ಕೇಂದ್ರ ತೆರೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ರಾಯಪ್ಪ ಹುರಮುಂಜಿ, ಸಂಪತ್ತಕುಮಾರಿ ರಾಯಚೂರಕರ್,ಸುನೀತಾ ಕೋರೆ,ಶಭಾನಾ ಬೇಗಂ, ಶಿವಲೀಲಾ ನರಬೋಳಿ, ಭೀಮಶಾ ಗೋಳಾ ಇತರರು ಇದ್ದರು.