ಬೂದಿಹಾಳದಲ್ಲಿ ಯುವಕನ ಹತ್ಯೆ ಖಂಡಿಸಿ ಮಾದಿಗ ಸಂಘಟನೆಗಳ ವೇದಿಕೆ ಪ್ರತಿಭಟನೆ

0
56

ಸುರಪುರ; ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದ ದಲಿತ ಯುವಕನ ಹತ್ಯೆಯನ್ನು ಖಂಡಿಸಿ ಸುರಪುರ ತಾಲೂಕು ಮಾದಿಗ ಸಮುದಾಯದ ಸಾಮೂಹಿಕ ಸಂಘಟನೆಗಳ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ಬೆಳಿಗ್ಗೆ 10 ಗಂಟೆಗೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸೇರಿದ ವಿವಿಧ ಸಂಘಟನೆಗಳ ನೂರಾರು ಸಂಖ್ಯೆಯ ಪ್ರತಿಭಟನಾಕಾರರು ತಹಸೀಲ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಯುವಕನ ಹತ್ಯೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.

Contact Your\'s Advertisement; 9902492681

ನಂತರ ತಹಸೀಲ್ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಬಣ) ಜಿಲ್ಲಾಧ್ಯಕ್ಷ ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ ಮಾತನಾಡಿ,ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿನ ಅನಿಲ್ ಇಂಗಳಗಿ ಎಂಬ ಯುವಕ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತನೆಂದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಹಾಗೆಯೇ ಸಿಂಧನೂರು ತಾಲೂಕಿನ ಎಲೆಕೂಡ್ಲಿಗಿ ಗ್ರಾಮದಲ್ಲಿನ ಯುವತಿ ಮೇಲೆ ಹಲ್ಲೆ ಮಾಡಿ ಸಾಮಾಜಿಕ ಬಹಿಷ್ಕಾರ ಹಾಕಿದ್ದನ್ನು ಉಗ್ರವಾಗಿ ಖಂಡಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.ದಲಿತ ಯುವಕನ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಅನಿಲ್ ಇಂಗಳಗಿ ಕುಟುಂಬಕ್ಕೆ 10 ಎಕರೆ ಜಮೀನು ನೀಡಬೇಕು ಮತ್ತು ಈ ಎರಡು ಘಟನೆಗೆ ಕಾರಣರಾದವನ್ನು ಬಂಧಿಸಿ ಉಗ್ರ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿದರು.

ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ಗ್ರೇಡ-2 ತಹಸೀಲ್ದಾರ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಭೀಮಾಶಂಕರ ಬಿಲ್ಲವ,ಮರೆಪ್ಪ ಬಸಂತಪುರ,ಯಲ್ಲಪ್ಪ ಹುಲಕಲ್ ಮಾನಪ್ಪ ಹುಲಕಲ್ ದಾನಪ್ಪ ಕಡಿಮನಿ ನಾಗರಾಜ ಓಕಳಿ ಮಲ್ಲಿಕಾರ್ಜುನ ಸೂಗುರು ಭೀಮರಾಯ ಕಡಿಮನಿ ದುರಗಪ್ಪ ನಾಗರಾಳ ಮಲ್ಲಿಕಾರ್ಜುನ ಮಂದಾಲೆ ಬಸವರಾಜ ಮುಷ್ಠಳ್ಳಿ ಮಲ್ಲು ಬಿಲ್ಲವ್ ರಾಜು ದಿವಳಗುಡ್ಡ ಚಂದ್ರು ದಿವಳಗುಡ್ಡ ಭೀಮಣ್ಣ ದಿವಳಗುಡ್ಡ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here