ಕಲಬುರಗಿ: ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯದೆ ದಂಧೆಕೋರರು ಕಲಬುರಗಿ ನಗರ ಸೇರಿದಂತೆ ಹಲವೆಡೆ ಮಣ್ಣು ದಂಧೆ ನಡೆಸುತ್ತಿರೋದು ಬೆಳಕಿಗೆ ಬಂದಿದೆ.
ಜೆಸಿಬಿ, ಟಿಪ್ಪರ್ ಬಳಸಿ ಖಟಕು ಮಣ್ಣು ಹಾಗೂ ಫಲವತ್ತಾದ ಮಣ್ಣಿಗೆ ಕನ್ನ ಹಾಕುತ್ತಿರುವ ಕದೀಮರು ಮಿತಿಮೀರಿ ಭೂಮಿಯನ್ನು ಅಗೆಯುತ್ತಿದ್ದಾರೆ.
ಐತಿಹಾಸಿಕ ಸ್ಮಾರಕಗಳ ಸುತ್ತಲೂ ಮಣ್ಣುಗಾರಿಕೆ ನಡೆಯುತ್ತಿದ್ದು, ಇದರಿಂದ ಸ್ಮಾರಕಗಳಿಗೆ ಧಕ್ಕೆ ಉಂಟಾಗುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಸೈಲೆಂಟ್ ಆಗಿದ್ದಾರೆ ಎಂದು ಆರೋಪಿಸಲಾಗಿದೆ.