ಶಹಾಬಾದ:ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ವಿರೋಧಿಸಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯಿಂದ ನಗರದಲ್ಲಿ ರವಿವಾರ ಆನ್ಲೈನ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಶೀವಕುಮಾರ ಕುಸಾಳೆ ಮಾತನಾಡಿ, ಖಾಸಗೀಕರಣ ಮತ್ತು ವ್ಯಾಪರೀಕರಣ ಎಂಬುದು ಪ್ರಾಥಮಿಕ ಹಂತದಿಂದ ಕಾಡುತ್ತಿದೆ.ಶಿಕ್ಷಣ ವ್ಯವಸ್ಥೆಯ ವಿರುದ್ಧ ಇದು ದೊಡ್ಡ ಸವಾಲನ್ನೇ ಹುಟ್ಟು ಹಾಕಿದೆ.ಶಿಕ್ಷಣದ ಗುಣಮಟ್ಟ ಕುಸಿತ, ಮೂಲಭೂತ ಸೌಕರ್ಯ, ಬಜೆಟ್ ಕಡಿತ, ಆಡಳಿತ ವ್ಯವಹಾರಗಳಲ್ಲಿ ಸರಕಾರದ ಹಸ್ತಕ್ಷೇಪ, ಪಠ್ಯಪುಸ್ತಕಗಳಲ್ಲಿ ಪಕ್ಷದ ಸಿದ್ಧಾಂತ ಅಳವಡಿಸುವುದು ಇದು ಶಿಕ್ಷಣದ ವ್ಯವಸ್ಥೆಯನ್ನೇ ಅಣಕಿಸುವಂತಾಗಿದೆ.ಕೂಡಲೇ ಈ ಶಿಕ್ಷಣ ನೀತಿಯನ್ನು ಕೈಬಿಡಬೇಕೆಂದು ಆಗ್ರಹಿಸಿದರು. ಅತಿಥಿ ಉಪನ್ಯಾಸರಾದ ರಾಮಣ್ಣಾ ಇಬ್ರಾಹಿಂಪೂರ ,ಬಸವರಾಜ ಮದಿಕರ್ಿ,ಆಕಾಶ, ಮಮತಾ, ಕಸ್ತೂರಿ ಕುಸಾಳೆ ಇತರರು ಇದ್ದರು.