ಜೇವರ್ಗಿ: ವೈದ್ಯ ದೇವೋಭವ ಎನ್ನುವಂತಹ ನಾಣ್ನುಡಿಯನ್ನು ಬದಲಾಯಿಸಿ ವೈದ್ಯ ಸಾಕ್ಷ ಯಮಸ್ವರೂಪಿ ಎನ್ನುವಂತಹ ಹೊಸ ಗಾದೆ ಮಾತೊಂದು ಹುಟ್ಟುಹಾಕುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇದಕ್ಕೆ ಸಾಕ್ಷಿ ಎನ್ನುವಂತೆ ಘಟನೆಯೊಂದು ಇಲ್ಲಿ ಜೇವರ್ಗಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಾದ 45 ವರ್ಷ ವಯಸ್ಸಿನ ಸುಭಾಸ್ ಎನ್ನುವ ವ್ಯಕ್ತಿಯು ಸರಕಾರಿ ಆಸ್ಪತ್ರೆಯ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಲು ಮುಂದಾದಾಗ ವೈದ್ಯರು ಅವನನ್ನು ಮುಟ್ಟದೆ ಕಾಟಾಚಾರಕ್ಕಾಗಿ ಎನ್ನುವಂತೆ ಒಂದೆರಡು ಮಾತ್ರೆಗಳನ್ನು ನೀಡಿ ಸಾಗಹಾಕಿದ್ದಾರೆ.
ಮೊದಲ ಬಾರಿ ರೋಗಿಯ ಕುಟುಂಬಸ್ಥರು ಹಾಗೂ ಇಬ್ಬರೂ ಮೂರು ಜನ ಬಂದು ವ್ಯಕ್ತಿಯ ಆರೋಗ್ಯದ ಬಗ್ಗೆ ಕೇಳಿ ಸರಿಯಾಗಿ ಪರೀಕ್ಷೆ ನಡೆಸಿ ಏನಾದರೂ ಅವಶ್ಯ ತುರ್ತು ಅಥವಾ ಅನಿವಾರ್ಯವಾದರೆ, ಬೇಕಾದರೆ ಗುಲ್ಬರ್ಗ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಕೇಳಿದ್ದಾರೆ. ಆದರೆ ಯಾವುದಕ್ಕೂ ಪ್ರಕ್ರಿಯೆ ನೀಡದ ಇಲ್ಲಿನ ಕರ್ತವ್ಯ ನಿರತ ವೈದ್ಯರು ಅದರ ಅವಶ್ಯಕತೆ ಇಲ್ಲ ಎಂದು ಹೇಳಿ ಸಾಗಹಾಕಿದ್ದರು .
ಎರಡನೇ ಬಾರಿ ಉಸಿರಾಡಲು ತೊಂದರೆ ಇದೆ ಎಂದು ಆಸ್ಪತ್ರೆಗೆ ಬಂದರೆ ಆತನನ್ನು ಸರಿಯಾಗಿ ಪರೀಕ್ಷಿಸದೆ ಬಂದಂತಹ ರೋಗಿಯನ್ನು ಮುಟ್ಟದೆ ದೂರದಿಂದಲೇ ಚಿಕಿತ್ಸೆಯನ್ನು ನೀಡಿ ನಿರ್ಲಕ್ಷ ತೋರಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಎಸ್ಡಿಪಿಐ ಪಕ್ಷದ ಮುಖಂಡರಾದ ಮೋಹಿನುದ್ದಿನ್
ಇನಮ್ದಾರ್ ನೇತೃತ್ವದಲ್ಲಿ ಕುಟುಂಬದ ಸದಸ್ಯರು ಸರಕಾರಿ ಆಸ್ಪತ್ರೆ ಎದುರು ಕುಟುಂಬಸ್ಥರ ಜೊತೆ ಧರಣಿ ಕುಳಿತರು . ನಿರ್ಲಕ್ಷದಿಂದಾಗಿ ವ್ಯಕ್ತಿ ಮೃತಪಟ್ಟಿದ್ದು ಸಂಬಂಧಪಟ್ಟ ತಾಲೂಕು ವೈದ್ಯಾಧಿಕಾರಿಗಳು ಹಾಗೂ ಕರ್ತವ್ಯನಿರತ ಅಧಿಕಾರಿಗಳಿಗೆ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೃತರ ಕುಟುಂಬದ ಸದಸ್ಯರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಈ ಕುರಿತಂತೆ ನಮ್ಮ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ಅನಿರೀಕ್ಷಿತ ಘಟನೆಯಾಗಿದೆ ಎಂದು ಹಾರಿಕೆಯ ಉತ್ತರವನ್ನು ತಾಲೂಕ ವೈದ್ಯಾಧಿಕಾರಿಗಳು ನೀಡುತ್ತಿದ್ದಾರೆ. ಇದರಿಂದಾಗಿ ಮೃತ ಕುಟುಂಬದ ಸದಸ್ಯರು ವೈದ್ಯರ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.
ಇಲ್ಲಿಗೆ ಆಗಮಿಸುವ ಸಾರ್ವಜನಿಕರು ವೈದ್ಯರ ಮೇಲೆ ವಿಶ್ವಾಸವಿಟ್ಟು ಚಿಕಿತ್ಸೆಯನ್ನು ಪಡೆಯಲು ಮುಂದಾಗುತ್ತಾರೆ. ಆದರೆ ವೈದ್ಯರ ನಿರ್ಲಕ್ಷದಿಂದಾಗಿ ಇಂತಹ ಘಟನೆಗಳು ನಡೆದರೆ ಸರಕಾರಿ ಆಸ್ಪತ್ರೆ ಮೇಲಿನ ಸಾರ್ವಜನಿಕರ ವಿಶ್ವಾಸವೇ ಇಲ್ಲದಂತಾಗುತ್ತದೆ ಎಂದು ಕುಟುಂಬಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸರಿ ರಾತ್ರಿ 11:00 ಗಂಟೆಗೆಆಗಮಿಸಿದ ತಾಲೂಕ ದಂಡಾಧಿಕಾರಿಗಳ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಈ ಕುರಿತಂತೆ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿಗಳ ಜೊತೆ ಮಾತನಾಡಿ ಕೂಲಂಕುಶವಾಗಿ ಪರಿಶೀಲಿಸಿ ಶಾಸಕರ ಜೊತೆ ಈ ಕುರಿತಂತೆ ಮಾತನಾಡಿ ಮೃತರ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಹಾಗೂ ಸೌಲಭ್ಯಗಳು ದೊರೆಯುವಂತೆ ಮಾಡುವುದಾಗಿ ಆಶ್ವಾಸನೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದುಕೊಳ್ಳಲಾಯಿತು. ಸರಿರಾತ್ರಿ 12 ಗಂಟೆವರೆಗೂ ಸಾರ್ವಜನಿಕ ಆಸ್ಪತ್ರೆ ಜೇವರ್ಗಿ ಎದುರು ಮೃತರ ಸಂಬಂಧಿಗಳುಹಾಗೂ ಕುಟುಂಬಸ್ಥರ ಜಮಾವಣೆಗೊಂಡು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಇಲ್ಲಿನ ಸರಕಾರಿ ಆಸ್ಪತ್ರೆಯ ರಾಜ್ಯದಲ್ಲಿ ಹೆಸರು ಮಾಡಿಕೊಂಡಿದ್ದರು ಸಹ ಲಭ್ಯಇರುವ ಸಾಧನ-ಸಲಕರಣೆಗಳನ್ನು ಉಪಯೋಗಿಸಿಕೊಂಡು ವೈದ್ಯರು ಚಿಕಿತ್ಸೆ ನೀಡುವಲ್ಲಿ ವಿಫಲರಾಗಿದ್ದಾರೆ ಎನ್ನುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.