ಸೆ.4ರಂದು ಕೋವಿಡ್-19 ಜನ ಜಾಗೃತಿ ಕವಿಗೋಷ್ಠಿ 

0
37

ಆಳಂದ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಿರಂತರವಾಗಿ ಸಾಹಿತ್ಯ ಜಾಗೃತಿ ಕಾರ್ಯಕ್ರಮಗಳ ಕೈಗೊಳ್ಳಲಾಗುವುದು ಎಂದು ಕಸಾಪ ತಾಲೂಕು ಅಧ್ಯಕ್ಷ ವಿಶ್ವನಾಥ ಭಕರೆ ಅವರು ಇಂದಿಲ್ಲಿ ಪ್ರಕಟಿಸಿದರು.

ಪಟ್ಟಣದ ಮಹಾಂತೇಶ್ವರ್ ಸಂಸ್ಥಾನ ಹಿರೇಮಠದಲ್ಲಿ ಮಂಗಳವಾರ ಕೋವಿಡ್-19 ಮುಂಜಾಗೃತವಾಗಿ ಸಾಮಾಜಿಕ ಅಂತರತದೊಂದಿಗೆ ಆಯೋಜಿಸಿದ್ದ ಸಂವಾದ ಘೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Contact Your\'s Advertisement; 9902492681

ಕಸಾಪ ಅಧ್ಯಕ್ಷರ ಅಧಿಕಾರ ಮೂರು ಅವಧಿಯಲ್ಲಿ 9 ತಾಲೂಕು ಮಟ್ಟದ ಹಾಗೂ ಒಂದು ಜಿಲ್ಲಾ ಮಟ್ಟದ ಮಕ್ಕಳÀ ಸಾಹಿತ್ಯ ಸಮ್ಮೇಳನ ಕೈಗೊಂಡು ಗಡಿನಾಡಿನಲ್ಲಿ ಕನ್ನಡದ ವಾತಾವರಣ ಮೂಡಿಸಿದ ಸಂತಸವಿದೆ. ಆದರೆ ತಾಲೂಕು ಕೇಂದ್ರ ಆಳಂದ ಪಟ್ಟಣದಲ್ಲಿ ಕನ್ನಡಿಗರ ಬಹುದಿನಗಳ ಬೇಡಿಕೆಯಾದ ಕನ್ನಡ ಭವನದ ಕನಸು ನನಸಾಗಿಲ್ಲ. ಇದಕ್ಕಾಗಿ ಸಂಬಂಧಿತ ಅಧಿಕಾರಿಗಳಿಗೆ ಮತ್ತು ಜನ ಪ್ರತಿನಿಧಿಗಳಿಗೆ ಪತ್ರ ಬರೆದರು ಸ್ಪಂದನೆ ದೊರೆತ್ತಿಲ್ಲ ಎಂದು ಖೇದವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಮಹಾದೇವ ವಡಗಾಂವ, ಕನ್ನಡ ಭವನ ಕೊರತೆ ಅಧ್ಯಕ್ಷರ ಮಾತಿಗೆ ಪ್ರತಿಕ್ರಿಯೆಸಿದ ಅವರು, ಪಟ್ಟಣದಲ್ಲಿ ಸೂಕ್ತವಾದ ನಿವೇಶನ ಕೊರತೆಯಿಂದ ಕನ್ನಡ ಭವನ ನಿರ್ಮಾಣ ಕಾರ್ಯ ಹಿನ್ನೆಡೆಯಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಸದ್ಯ ಸೂಕ್ತ ನಿವೇಶನ ಬೇಕಿದ್ದರೆ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ| ತೋಂಟದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪ ನಿವೇಶನದಲ್ಲಿ ಭವನಕ್ಕಾಗಿ ಪ್ರಯತ್ನಿಸಿದರೆ ಫಲಸಿಗಬಹುದು ಎಂದರು.

ಈ ಕಾರ್ಯಕ್ಕೆ ಪೀಠದ ಹಾಲಿ ಜಗದ್ಗುರು ತೋಂಟದ ಡಾ| ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ಪೂಜ್ಯರ ಹಾಗೂ ಸ್ಥಳೀಯ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮಿಗಳ ಮುಂದೆ ಇಲ್ಲಿನ ಶಾಸಕರು ಮತ್ತು ಅಧಿಕಾರಿಗಳು ಕನ್ನಡಾಸಕ್ತರು ಸೇರಿ ಬೇಡಿಕೆಗೆ ಪ್ರಸ್ತಾಪಿಸಿದರೆ ಖಂಡಿತವಾಗಿ ಭವನ ನಿರ್ಮಾಣಕ್ಕೆ ಬೆಲೆ ಬಾಳುವ ಸೀಮಿತ ನಿವೇಶನ ದೊರೆಯಬಹುದು.

ನಿವೇಶನದಲ್ಲಿ ಸದ್ಯ ನೀರು, ವಿದ್ಯುತ್ ಸೇರಿ ಮೂಲಸೌಕಯಗಳಿದ್ದು, ಕನ್ನಡಕ್ಕಾಗಿ ಇದರ ಲಾಭವನ್ನು ಬಯಸುವುದಾದರೆ ಕನ್ನಡಾಸಕ್ತರ ಮತ್ತು ಶಾಸಕರು ಅಧಿಕಾರಿಗಳು ಒಪ್ಪಿಬಂದರೆ ಬೆಲೆಬಾಳುವ ಸೀಮಿತ ನಿವೇಶನ ಒದಗಿಸುವ ಕುರಿತು ಚರ್ಚಿಸಲಾಗುವುದು ಎಂದರು.

ಕನ್ನಡಕ್ಕಾಗಿ ದೇಶದಲ್ಲೇ ಅತಿ ಹೆಚ್ಚು ಶ್ರಮಿಸಿದ ತೋಂಟದ ಜ| ಲಿಂ| ಡಾ| ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಕನ್ನಡ ಸಾರಸತ್ವಲೋಕಕ್ಕೆ ಶ್ರೀಮಠದಿಂದ ಸರ್ಕಾರ ಮಾಡದಷ್ಟು ಕನ್ನಡ ಸಾಹಿತ್ಯದ ಕೃತಿಗಳನ್ನು ಪ್ರಕಟಿಸಿ ನಾಡಿಗೆ ಅಪಾರ ಕೊಡುಗೆ ನೀಡಿದ್ದು ಅಲ್ಲದೆ, ಅವರನ್ನು ಕನ್ನಡ ಜಗದ್ಗುರು ಎಂದು ರಾಜ್ಯ ಸರ್ಕಾರವೇ ಪುರಸ್ಕರಿಸಿದೆ. ಇಂಥ ಮಹಾನ ಶ್ರೀಗಳ ಪಾದವನ್ನಿಟ್ಟ ನೆಲ್ಲದಲ್ಲಿ ಕನ್ನಡ ಭವನ ನಿರ್ಮಿಸುವ ಮೂಲಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕನ್ನಡ ಭವನಕ್ಕಾಗಿ ಮುಂದೆ ಬಂದರೆ ಅಗಲಿದ ಪೂಜ್ಯರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.

ಕನ್ನಡ ಜಾನಪದ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಅಪ್ಪಸಾಬ ತೀರ್ಥೆ, ಶಿವಶಣಪ್ಪ ಧೂಳಪ್ಪಗೊಳ ಮತ್ತಿತರು ಉಪಸ್ಥಿತರಿದ್ದರು.

ಸೆ.4ರಂದು ಸಾಹಿತ್ಯದ ಮೂಲಕ ಕೋವಿಡ್-19 ಜಾಗೃತಿ ಮೂಡಿಸುವ ಸಲುವಾಗಿ ಅನುಭವಿ ಕವಿಗಳನ್ನು ಆಮಂತ್ರಿಸಿ ಪಟ್ಟಣದ ಗುರುಭವನದಲ್ಲಿ ಅಂದು ಮಧ್ಯಾಹ್ನ 3:00 ಗಂಟೆಗೆಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕವಿಗೋಷ್ಠಿಯಲ್ಲಿ ಕವಿಗಳು ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. -ವಿಶ್ವನಾಥ ಭಕರೆ, ಕಸಾಪ ಅಧ್ಯಕ್ಷರು ಆಳಂದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here