ಕಲಬುರಗಿ: ಕರ್ನಾಟಕದ ಹೆಸರಾಂತ ಚಲನಚಿತ್ರ ನಟ ಸುದೀಪ್ ಅವರ ಹುಟ್ಟುಹಬ್ಬದ ನಿಮಿತ್ಯ ,ಸಸಿ ನಡುವ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ ಅಭಿಮಾನಿ ಬಳಗದ ವತಿಯಿಂದ, ಯಲ್ಲಾಲಿಂಗ ಮಹಾರಾಜರ ಸಂಸ್ಥಾನಮಠ ಸುಂಟನೂರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಹರ್ಷಾನಂದ ಗುತ್ತೇದಾರ್ ಜಿಲ್ಲಾ ಪಂಚಾಯತ ಸದಸ್ಯರು ಮಾತನಾಡಿ ಗ್ರಾಮದಲ್ಲಿ ಯುವಕರು ಎಲ್ಲ ಕೆಲಸಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಗ್ರಾಮದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಮಾತನಾಡುತ್ತಾ ಅವರು ಹಳ್ಳಿಗಳು ಅಭಿವೃದ್ಧಿ ಯುವಕರಿಂದ ಸಾಧ್ಯ ಯುವಕರು ಪರಿಸರವನ್ನು ಬೆಳೆಸುವುದರ ಮುಖಾಂತರ ಹಳ್ಳಿಗಳನ್ನು ಹಸಿರಾಗಿಸಬೇಕೆಂದು ಯುವಕರಿಗೆ ಕರೆ ಕೊಟ್ಟರು.
ಕರ್ನಾಟಕ ವಿಜಯ ಸೇನೆ ಜಿಲ್ಲಾ ಅಧ್ಯಕ್ಷರಾದ ರಾಜು ಎಂ ಹಿರೇಮಠ ಅವರು ಮಾತನಾಡಿ ಹಳ್ಳಿ ಹಸಿರಾದರೆ ದಿಲ್ ಮತ್ತು ದಿಲ್ಲಿ ಹಸಿರಾಗುತ್ತದೆ. ಯುವಕರು ಮತ್ತು ನಾಗರಿಕರು ಹುಟ್ಟು ಹಬ್ಬಗಳನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಒಂದೊಂದು ಸಸಿ ನಡುವುದರ ಮುಖಾಂತರ ಹುಟ್ಟುಹಬ್ಬ ಗಳನ್ನು ಹಸಿರ ಹಬ್ಬವನ್ನಾಗಿ ಬದಲಾವಣೆ ಮಾಡಬೇಕೆಂದು ಹೇಳಿದರು.
ಬಾಬು ಝಳಕಿ ಅವರು ಮಾತನಾಡಿ ಯುವಕರೆಲ್ಲರೂ ಸೇರಿ ಸಸಿಗಳನ್ನು ಹಚ್ಚುವದು ಮತ್ತು ಅಗತ್ಯ ಇರುವ ಜನರಿಗೆ ರಕ್ತದಾನವನ್ನು ಮಾಡುವುದರ ಮುಖಾಂತರ ಹುಟ್ಟು ಹಬ್ಬಗಳ ಆಚರಣೆ ಮಾಡಬೇಕೆಂದರು.
ಕಾರ್ಯಕ್ರಮವನ್ನು ಸಸಿ ನಡುವುದರ ಮುಖಾಂತರ ಚಾಲನೆ ನೀಡಲಾಗಿತ್ತು. ಈ ವೇಳೆಯಲ್ಲಿ ವಿನೋದ್ ಪಾಟೀಲ್ ಸ್ವಾಗತಿಸಿದರು,ಭಾಗೇಶ್ ವಿಶ್ವಕರ್ಮ ನಿರೂಪಿಸಿದರು, ಶಿವು ಬಿದರಿ ವಂದಿಸಿದರು,ಗ್ರಾಮದ ಮುಖಂಡರಾದ ಸಂಗಯ್ಯಸ್ವಾಮಿ,ವಿನೋದ್ ಮರಬ,ಬಾಬುರಾವ ಪಟ್ಟಣ ಬಾಬುರಾವ ದಣ್ಣೂರು ,ವಿಠ್ಠಲ್ ತಳವಾರ ಅರ್ಜುನ್ ವಗ್ಗನ್ ,ನಿಲ್ ಕಂಟ್ರೋಲ್ ಪಾಟೀಲ್ ಶಿವಾನಂದ್ ಚೌಲ, ಯುವಕರಾದ ರಾಜು ಪೂಜಾರಿ ಹರೀಶ್, ಪ್ರಭು ಬಿರಾದಾರ, ಮಂಜು ಆಲೂರು, ಶರಣು ಗೌಂಡಿ ,ಮಂಜುನಾಥ್ ಪಟ್ಟಣ ಶಿವರಾಜ್ ಶೀಲವಂತ್,ನಾಗರಾಜ್ ಶೀಲವಂತ, ಮಂಜುನಾಥ, ಶ್ರವಣ ಜಮಾದಾರ್ ಮಲ್ಲಿಕಾರ್ಜುನ, ಶರಣಬಸಪ್ಪ, ಶರಣು, ಚಿತಾನಂದ,ಸಂಜುಕುಮಾರ್ ಸಿದ್ಧಾರೂಡ ಇನ್ನಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.