ಕಲಬುರಗಿ: ವಿವಿಧ ಇಲಖೆಗಳಲ್ಲಿ ಜೆಓಸಿ ವಿಲೀನಗೊಂಡ ವೃತ್ತಿ ಶಿಕ್ಷಣ ಸಿಬ್ಬಂದಿಯವರು ೨೦-೩೦ ವರ್ಷಗಳ ದೀರ್ಘಕಾಲ ಅರೆಕಾಲಿಕೆ ಸಿಬ್ಬಂದಿಗಳಿಗಾಗಿ ಅಲ್ಪ ಮೊತ್ತದ ಸಂಭಾವನೆ ಪಡೆದು ೨೦೧೨-೧೩ ರಲ್ಲಿ ಖಾಯಂ ಆಗಿದ್ದು, ಸೇವೆಗೆ ಸೇರಿದ ಸೇವಾ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ವೃತ್ತಿ ಶಿಕ್ಷಣ ನೌಕರರ ಸಂಘದ ವತಿಯಿಂದ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಭೇಟಿ ನೀಡಿ ಒತ್ತಾಯಿಸಿದ್ದರು.
ಪಿಂಚಣಿಯು ಇಲ್ಲ ಮತ್ತು ಅನುಕಂಪ ಆಧಾರದ ಮೇಲೆ ನೇಮಕಾತಿ ಮಾಡುವಂತಿಲ್ಲ ಈ ಸಿಬ್ಬಂದಿ ವರ್ಗದವರಿಗೆ ಖಾಯಂ ಆದಾಗಿನಿಂದ ಕೆಲವರಿಗೆ ಅನಾರೋಗ್ಯದಿಂದ ಕೆಲವರು ಕೋವಿಡ್-೧೯ ನಿಂದ ಮರಣ ಹೊಂದಿದ್ದು, ಇನ್ನು ಕೆಲವರು ತೀರಾ ಅನಾರೋಗ್ಯ ಬಳಲುತ್ತಿದ್ದಾರೆ ಇದಕ್ಕೆ ಮೂಲ ಕಾರಣ ಕುಟುಂಬದವರು ಇತರೆ ಸರ್ಕಾರಿ ನೌಕರರಿಗಿರುವಂತೆ ತಮಗೂ ಸವಲತ್ತುಗಳು ಬೇಕೆಂದು ಕಾಡುವ ಮಾನಸಿಕ ಒತ್ತಡ ಕರ್ತವ್ಯದಲ್ಲಿ ನಾವು ಖಾಯಂ ಆದ ಕಾರಣ ಅಧಿಕಾರಿಗಳಿಂದಲೂ ಬೇರೆಯವರಂತೆ ಸವಲತ್ತು ಇದೆ ಎಂದು ಭಾವಿಸಿ ಕೆಲಸದ ಒತ್ತಡ ವಿನಾಕಾರಣ ಹಾಕುತ್ತಿದ್ದಾರೆ ಎಂದು ಕಲ್ಯಾಣ ಕರ್ನಾಟಕ ವೃತ್ತಿ ಶಿಕ್ಷಣ ಇಲಾಖೆಯಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ನೌಕರರ ಸಂಘದ ಅಧ್ಯಕ್ಷ ಮಲ್ಲಿನಾಥ ಪಿ. ಕಳಸ್ಕರ್ ನೇತೃತ್ವದಲ್ಲಿ ಇತ್ತಿಚೇಗೆ ನಗರಕ್ಕೆ ಆಗಮಿಸಿದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ನಿವೃತ್ತಿ ಆಗಿರುವ ಹಾಗೂ ನಿವೃತ್ತಿ ಆಗುತ್ತಿರುವವರು ಇದ್ದಾರೆ, ಇವರಿಗೆ ಮುಂದಿನ ದಿನಗಳಲ್ಲಿ ಆಗುವ ಘನಘೊರ ಆರ್ಥಿಕ ಸಂಕಷ್ಠಗಳ ತೊಂದರೆ, ಸರ್ಕಾರದ ಅಧಿಕಾರಿಗಳಿಗಾಗಲಿ, ಆಡಳಿತ ಮಂಡಳಿಯವರಿಗಾಗಲಿ ಇಲ್ಲ, ಮರಣ ಹೊಂದಿದ ಕುಟುಂಬದವರಿಗೆ ಮತ್ತು ಅಲ್ಪ ಸ್ವಲ್ಪ ಸೇವೆ ಮಾಡಿ ನಿವೃತ್ತಿ ಆದ ಸಿಬ್ಬಂದಿಯವರಿಗೆ ಮಾತ್ರ ತೊಂದರೆಯಾಗುತ್ತಿದೆ ಆದ್ದರಿಂದ ಮನವಿಗೆ ಸ್ಪಂಧಿಸಬೇಕೆಂದರು.
ಮುಂದಿನ ದಿನಗಳಲ್ಲಿ ನಡೆಯುವ ಅಧಿವೇಶವನ್ನು ಜೆಓಸಿ ಸಿಬ್ಬಂದಿ ವರ್ಗದವರಿಗೆ ಸೇವೆಗೆ ಸೇರಿದ ದಿನದಿಂದ ಸೇವಾಭದ್ರತೆಯನ್ನು ನೀಡುವಂತೆಆದೇಶವನ್ನು ಹೊರಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.