ಶಹಾಬಾದ:ನಗರದ ಆತ್ಮವಿಶ್ವಾಸ ಗೆಳೆಯರ ಬಳಗದ ವತಿಯಿಂದ ಶುಕ್ರವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕೋವಿಡ್-19 ಮಹಾಮಾರಿ ಕರೊನಾ ಸಂದರ್ಭದಲ್ಲಿ ಅವಿರತವಾಗಿ ಶ್ರಮಿಸಿದ ಕೊರೊನಾ ವಾರಿಯರ್ಸಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆತ್ಮವಿಶ್ವಾಸ ಗೆಳೆಯರ ಬಳಗದ ಕುಮಾರ ಚವ್ಹಾಣ ಮಾತನಾಡಿ, ಇಂದು ಕೊರೊನಾ ಹಾವಳಿ ಜಗತ್ತನ್ನು ನಡುಗಿಸಿದೆ.ನಿತ್ಯವೂ ಸಾವಿರಾರು ಜನರು ಸಾಯುತ್ತಿದ್ದಾರೆ.ಲಕ್ಷಾಂತರ ಜನರು ಸೊಂಕಿನಿಂದ ಬಳಲುತ್ತಿದ್ದಾರೆ.ಇಂತಹ ಅಪಾಯದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಹಗಲಿರುಳು ಜನರಿಗಾಗಿ ಸೇವೆ ಮಾಡುತ್ತಿರುವ ಕೊರೊನಾ ವಾರಿಯರ್ಸಳಾದ ವೈದ್ಯರು, ಪೊಲೀಸ್,ಪತ್ರಕರ್ತರ ಸೇವೆ ಅವಿಸ್ಮರಣೀಯವಾದುದು ಎಂದು ಹೇಳಿದರು.
ಸನ್ಮಾನ ಸ್ವೀಕರಿಕೊಂಡು ಮಾತನಾಡಿದ ಡಾ.ಅಹ್ಮದ್ ಪಟೇಲ್, ವಿಶ್ವದಲ್ಲಿಯೇ ಕೊರೊನಾ ಮಹಾಮಾರಿ ರೋಗ ಬೆಚ್ಚಿ ಬೀಳಿಸಿದೆ.ವೈದ್ಯರನ್ನು ಎರಡನೇ ದೇವರೆಂದು ಕರೆಯುವುದುಂಟು. ಸಂದಿಗ್ಧ ಸಂದರ್ಭದಲ್ಲಿ ಸಾರ್ವಜನಿಕರ ನೆರವಿಗೆ ವೈದ್ಯರೇ ಬರದೇ ಹೋದರೆ ಹೇಗೆ? ಸಾರ್ವಜನಿಕರ ಸೇವೆಯೇ ದೊಡ್ಡ ಭಾಗ್ಯ.ಮುಂಬರುವ ದಿನಗಳಲ್ಲಿ ಗೆಳೆಯರ ಬಳಗದೊಂದಿಗೆ ಬಡ ವಿದ್ಯಾರ್ಥಿಗಳ ನೆರವಿಗೆ ಬರುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ. ಡಾ.ಅಹ್ಮದ್ ಪಟೇಲ್, ಪೊಲೀಸ್ ಹುಸೇನ್ ಪಾಷಾ ಹಾಗೂ ಮಲ್ಲಿನಾಥ ಪಾಟೀಲ ಅವರನ್ನು ಸನ್ಮಾನಿಸಲಾಯಿತು.ಅಲ್ಲದೇ ಡಾ.ಅಹ್ಮದ್ ಪಟೇಲ್ ಅವರಿಗೆ ಬಿ.ಪಿ ಉಪಕರಣವನ್ನು ನೀಡಿದರು.
ಅಪ್ಸರ್ ಸೇಠ, ಮಿರಾಜ ಸಾಹೇಬ, ಮಹಮ್ಮದ್ ನದೀಮ್, ಶಕೀಲ್ ಇಂಗಳಗಿ,ಮಹಮ್ಮದ್ ಜಾವೀದ್, ನಿಂಗಣ್ಣ ಸಂಗಾವಿಕರ್, ಬಾಬಾ, ಸಯ್ಯದ್ ಜಹೀರ್, ಮುನ್ನಾ ಪಟೇಲ್, ದಿಲೀಪ ನಾಯಕ, ಬಾಬಾ ಟೇಲರ್, ಕರೀಮ, ಸಾಬಿರ ಬಾರಿ,ಮೆಹಬೂಬ,ಗೋಲ್ಡನ್ ಬಾಬಾ, ಇಬ್ರಾಹಿಂ, ಅಂಜು ಸಮೀರ್ ಸೇರಿದಂತೆ ಇತರರು ಇದ್ದರು.