ಕಲಬುರಗಿ; ಶಿಕ್ಷಕರು ವಿದ್ಯಾರ್ಥಿಗಳನ್ನು ರಾಷ್ಟ್ರ ನಿರ್ಮಾಣಕರನ್ನಾಗಿ ರೂಪಿಸುವ ಕಠಿಣ ಜವಬ್ದಾರಿ ಹೊಂದಿದ್ದಾರೆ. ಭಾರತ ದೇಶ ವಿಶ್ವಕ್ಕೆ ಗುರು ಶಿಷ್ಯ ಪರಿಕಲ್ಪನೆಯ ಸಂಪ್ರದಾಯವನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ. ಶಿಕ್ಷಕರು ತಮ್ಮ ಅನುಭವದ ಮೂಲಕ ಈ ಪರಂಪರೆಯನ್ನು ಮತ್ತಷ್ಟು ಉತ್ಕೃಷ್ಟಗೊಳಿಸಿದ್ದಾರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯ ನಿರ್ದೇಶಕರಾದ ಡಾ. ಬಸವರಾಜ ಗಾದಗೆ ಅಭಿಪ್ರಾಯಪಟ್ಟರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಸಮಾವೇಶ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ. ದೇಶದ ಮೊದಲ ರಾಷ್ಟ್ರಪತಿಯಾಗಿದ್ದ ಡಾ. ಎಸ್. ರಾಧಾಕೃಷ್ಣನ್ ಅವರ ಜನ್ಮದಿನವನ್ನು ಪ್ರತಿವರ್ಷ ರಾಷ್ಟ್ರೀಯ ಹಬ್ಬವಾಗಿ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಸರ್ವಪಲ್ಲಿ ರಾಧಾಕೃಷ್ಣನವರು ದೇಶದ ರಾಷ್ಟ್ರಪತಿಯಾಗಿರುವುದಕ್ಕಿಂತ ಮೊದಲು ಶಿಕ್ಷಕರಾಗಿದ್ದರು ಎಂಬ ಗೌರವಭಾವದ ಮೂಲಕ ಇದನ್ನು ಆಚರಿಸಲಾಗುತ್ತಿದೆ ಎಂದರು.
ಕಲಬುರಗಿಯಂತಹ ಹಿಂದುಳಿದ ಪ್ರದೇಶದಲ್ಲಿ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸುವುದು ಸುಲಭದ ಕೆಲಸವಲ್ಲ. ಶಿಕ್ಷಣ ತಜ್ಞ ಪೂಜ್ಯ ಅಪ್ಪಾಜೀಯವರು ದೂರದೃಷ್ಟಿಯುಳ್ಳವರಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಈ ಪ್ರದೇಶವನ್ನು ಶೈಕ್ಷಣಿಕ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ. ಶಿಕ್ಷಣ ಕೇತ್ರಕ್ಕೆ ಅಪಾರ ಕೋಡುಗೆ ನೀಡಿದ್ದಾರೆ ಎಂದರು.
ಇನ್ಸ್ಟಿಟ್ಯೂ?ನ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇ?ನ್ ಎಂಜಿನಿಯರ್ಸ್ (ಐಇಟಿಇ) ಯ ಆಡಳಿತ ಮಂಡಳಿ ಸದಸ್ಯರಾಗಿ ಇತ್ತೀಚೆಗೆ ಆಯ್ಕೆಯಾದ ಡಾ.ಗಾದಗೆ ಭವಿಷ್ಯದಲ್ಲಿ ಈ ವಿಶ್ವವಿದ್ಯಾಲಯವನ್ನು ವಿಶ್ವ ಮಟ್ಟದಲ್ಲಿ ಶ್ರೇಷ್ಠ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಲು ಇನ್ನೂ ಹೆಚ್ಚು ಹೆಚ್ಚು ಪ್ರಯತ್ನಗಳನ್ನು ಮಾಡಬೇಕೆಂದು ವಿಶ್ವವಿದ್ಯಾಲಯದ ಬೋಧನಾ ಸಿಬ್ಬಂದಿಗೆ ಕರೆ ನೀಡಿದರು. ಎಂಜಿನಿಯರಿಂಗ್ ಅಧ್ಯಾಪಕರು ಕಲಿಕೆಯಲ್ಲಿ ಇಂಟರ್ನ್‌ಶಿಪ್‌ದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು ಎಂದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಶಿಕ್ಷಕರನ್ನು ಪೂಜ್ಯ ಡಾ.ಅಪ್ಪಾಜಿ ಅವರು ಗೌರವದಿಂದ ಕಾಣುತ್ತಾರೆ ಮತ್ತು ಗುರು-ಶಿ? ಸಂಪ್ರದಾಯವು ಶರಣಬಸವೇಶ್ವರ ಪೀಠದ ಮುಖ್ಯ ಸ್ತಂಭವಾಗಿದೆ.
೧೯ ನೇ ಶತಮಾನದಲ್ಲಿ ಶ್ರೀ ಶರಣಬಸವೇಶ್ವರರು ಪರಿಚಯಿಸಿದ ಗುರು ಶಿಷ್ಯ ಸಂಪ್ರದಾಯವನ್ನು ಪೀಠಾಧಿಪತಿಗಳು ಮುಂದುವರೆಸುತ್ತಿದ್ದಾರೆ. ಶಿಕ್ಷಕರ ಶ್ರದ್ಧೆ ಮತ್ತು ನಿಷ್ಠೆಯಿಂದ ನಮ್ಮ ಸಂಸ್ಥೆ ಶಿಕ್ಷಣ ದಾಸೋಹಕ್ಕೆ ಹೆಸರಾಗಿದೆ. ಅವರ ಅವಿರತ ಶ್ರಮದಿಂದ ಈ ವಿಶ್ವವಿದ್ಯಾಲಯದ ಹೆಸರನ್ನು ಭವಿಷ್ಯದಲ್ಲಿ ವಿಶ್ವಮಟ್ಟಕ್ಕೆ ಬೆಳಸಬಹುದಾಗಿದೆ ಎಂದರು.
ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ್ ವಿ ನಿಷ್ಠಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಶಿಕ್ಷಣ ಕ್ಷೇತ್ರಕ್ಕೆ ಸಾಕ? ಗಮನ ನೀಡದ ಹೊರತು ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು. ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರವು ಸುಮಾರು ೮ ಬಿಲಿಯನ್ ಡಾಲರ್ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯಿಂದ ಇನ್ನೂ ಎಂಟು ಮಿಲಿಯನ್ ಡಾಲರ್ ಹೂಡಿಕೆ ಮಾಡಿರುವುದು ಶಿಕ್ಷಣ ಕ್ಷೇತ್ರದಲ್ಲಿ ೪೦೦ ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿನ ಹೂಡಿಕೆಯ ನಿಜವಾದ ಬೇಡಿಕೆಯೊಂದಿಗೆ ಹೋಲಿಸಿದರೆ ಏನೂ ಅಲ್ಲ ಎಂದರು.
ಹೊಸ ಶಿಕ್ಷಣ ನೀತಿಯ ಅನು?ನಕ್ಕೆ ಮುಂದುವರಿಯಲು ಕೇಂದ್ರ ಸರ್ಕಾರದ ನಿರ್ಧಾರದೊಂದಿಗೆ ಶಿಕ್ಷಕರ ಪಾತ್ರವು ಹೆಚ್ಚು ಮಹತ್ವದ್ದಾಗಿದೆ. ವಿದ್ಯಾರ್ಥಿಯ ಭವಿ?ವನ್ನು ಗುರುಗಳು ತಮ್ಮ ಪ್ರೇರಣೆಯಿಂದ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಕುತೂಹಲ ಹುಟ್ಟು ಹಾಕಬೇಕು ಎಂದರು.
ವಿವಿ ಕುಲಸಚಿವ ಡಾ. ಅನೀಲಕುಮಾರ ಬಿಡವೆ ಸ್ವಾಗತಿಸಿದರು. ಡಾ. ಶಿವದತ್ತ ಹೊನ್ನಳ್ಳಿ ವಂದಿಸಿದರು. ವಿವಿ ಸಮ ಕುಲಪತಿ ಡಾ. ವಿ.ಡಿ. ಮೈತ್ರಿ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ ಇತರರು ಉಪಸ್ಥಿತರಿದ್ದರು. ಪ್ರೋ. ರೇವಯ್ಯ ವಸ್ತ್ರದಮಠ ಪ್ರಾರ್ಥನೆ ಗೀತೆ ಹಾಡಿದರು. ಆಂಗ್ಲ ವಿಭಾಗದ ಪ್ರಾಧ್ಯಪಕರಾದ ಉಷಾ ನಿರೂಪಿಸಿದರು.