ಕೆಜೆಯು ವತಿಯಿಂದ ಪತ್ರಕರ್ತ ಸೋಮಶೇಖರ ನರಬೋಳಿ ರತ್ನಾಕರ ಭಟ್‌ರಿಗೆ ಶ್ರದ್ಧಾಂಜಲಿ

0
80

ಸುರಪುರ: ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ವತಿಯಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಪತ್ರಕರ್ತ ಸೋಮಶೇಖರ ನರಬೋಳಿ ಹಾಗು ಶಿಕ್ಷಣ ಪ್ರೇಮಿ ರತ್ನಾಕರ ಭಟ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಭೆಯ ಆರಂಭದಲ್ಲಿ ಇಬ್ಬರು ಮಹನಿಯರುಗಳ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮೂಲಕೆ ಗೌರವಿಸಿ ನಂತರ ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

Contact Your\'s Advertisement; 9902492681

ನಂತರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ,ಇತ್ತೀಚಿನ ಅನೇಕ ಜನ ಮಹನಿಯರುಗಳ ಸಾಲು ಸಾಲು ಸಾವುಗಳನ್ನು ನೆನೆದು ನಿಜಕ್ಕೂ ಆಘಾತವಾಗುತ್ತಿದೆ.ಈಗ ಪತ್ರಕರ್ತ ಸೋಮಶೇಖರ ನರಬೋಳಿ ಒಬ್ಬ ಸಮಾಜಮುಖಿ ಚಿಂತನೆಯ ಪತ್ರಕರ್ತರಾಗಿದ್ದರು.ಅಲ್ಲದೆ ಅವರ ನಯವಿನಯತೆ ಎಲ್ಲರಿಗೂ ಇಷ್ಟವಾಗುವಂತಿತ್ತು.ಅವರ ಸಾವು ಪತ್ರಿಕಾ ರಂಗಕ್ಕೆ ದೊಡ್ಡ ನಷ್ಟವಾಗಿದೆ ಎಂದರು.

ನಂತರ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ,ಇಂದು ಪತ್ರಕರ್ತರು ಅನೇಕ ಸಂಕಷ್ಟಗಳನ್ನು ಹೆದರಿಸುವಂತಾಗಿದೆ,ಆದರೆ ಸರಕಾರಗಳು ಪತ್ರಕರ್ತರಿಗೆ ಯಾವುದೇ ಸೌಲಭ್ಯವನ್ನು ನೀಡದಿರುವುದು ಬೇಸರದ ಸಂಗತಿಯಾಗಿದೆ.ಅಲ್ಲದೆ ಮಾದ್ಯಮಗಳು ಕೂಡ ಸಾಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಸುದ್ದಿಗಳ ಮೂಲಕ ಜನರಲ್ಲಿ ಅರಿವು ಮೂಡಿಸಬೇಕಿದೆ.ಆದರೆ ಕೊರೊನಾ ವಿಷಯದಲ್ಲಿ ಸರಕಾರಗಳು ಮತ್ತು ಮಾದ್ಯಮಗಳು ಜನರಲ್ಲಿ ಅರಿವು ಮೂಡಿಸುವಲ್ಲಿ ಸೋತಿವೆ ಎಂದರು.ಸೋಮಶೇಖರ ನರಬೋಳಿ ಮತ್ತು ರತ್ನಾಕರ ಭಟ್ ಅವರ ನಿಧನದಿಂದ ತುಂಬಾ ನೋವುಂಟಾಗಿದೆ,ಅವರ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

ಕೆಜೆಯು ಜಿಲ್ಲಾಧ್ಯಕ್ಷ ಡಿ.ಸಿ.ಪಾಟೀಲ ಮಾತನಾಡಿ,ಸೋಮಶೇಖರ ನರಬೋಳಿಯವರು ಕೊರೊನಾ ವಾರಿಯರ್ಸ್‌ಗಳಾಗಿ ಗ್ರಾಮೀಣ ಭಾಗದ ಜನರ ಸ್ಥಿತಿಗತಿ ಕುರಿತು ನಿರಂತರವಾಗಿ ಸರಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ.ಈಗ ಅವರ ನಿಧನದ ನಂತರ ಕೋವಿಡ್-೧೯ ನಿಯಮದಂತೆ ಅಂತ್ಯಸಂಸ್ಕಾರ ನರವೇರಿಸಿರುವುದು ಗಮನಿಸಿದರೆ ಅವರಿಗೆ ಕೊರೊನಾ ಸೊಂಕು ಇದ್ದ ಬಗ್ಗೆ ಅನುಮಾನ ಮೂಡಿದೆ.ಅವರ ಸಾವು ಕೊರೊನಾದಿಂದ ಆಗಿದ್ದರೆ ಸರಕಾರ ಬೇರೆ ಕೊರೊನಾ ವಾರಿಯರ್ಸ್‌ಗಳಿಗೆ ನೀಡುವಂತೆ ಪರಿಹಾರ ನೀಡಬೇಕೆಂದರು.ಹಾಗು ರತ್ನಾಕರ ಭಟ್ ಅವರು ತಾಲೂಕಿನ ಶಿಕ್ಷಣ ರಂಗದ ಅಭೀವೃಧ್ಧಿಗೆ ಅನೇಕ ಕೊಡುಗೆ ನೀಡಿದ್ದಾರೆ.ಅವರ ನಿಧನದ ಸುದ್ದಿ ತಿಳಿದು ಬೇಸರವಾಯಿತು.ದೇವರು ಈರ್ವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಸೂಗುರೇಶ ವಾರದ ವೆಂಕಟೇಶ ಬೇಟೆಗಾರ ಪತ್ರಕರ್ತ ಧಿರೇಂದ್ರ ಕುಲಕರ್ಣಿ ಪರಶುರಾಮ ಮಲ್ಲಿಬಾವಿ ಕಲೀಂ ಫರೀದಿ ಉಸ್ತಾದ ವಜಾಹತ್ ಹುಸೇನ್ ರಾಘವೇಂದ್ರ ಮಾಸ್ತರ್ ಹಾಗು ಅಧ್ಯಕ್ಷತೆ ವಹಿಸಿ ತಾಲೂಕು ಕೆಜೆಯು ಅಧ್ಯಕ್ಷ ರಾಜು ಕುಂಬಾರ ಮಾತನಾಡಿದರು.ಸಭೆಯ ವೇದಿಕೆಯಲ್ಲಿ ದೇವಿಂದ್ರಪ್ಪ ಪತ್ತಾರ ರಮೇಶ ದೊರೆ ಆಲ್ದಾಳ ರಾಘವೇಂದ್ರ ಬಾಡಿಹಾಳ ಇದ್ದರು.ಪತ್ರಕರ್ತ ನಾಗರಾಜ ದೇಸಾಯಿ ಸಭೆ ನಿರೂಪಿಸಿ ವಂದಿಸಿದರು.

ಸಭೆಯಲ್ಲಿ ಕೆಜೆಯು ಉಪಾಧ್ಯಕ್ಷ ಮಲ್ಲಿಕಾರ್ಜುನ ಗುಳಗಿ ಕಾರ್ಯದರ್ಶಿ ಮಲ್ಲಿಕಾರ್ಜುನ ತಳ್ಳಳ್ಳಿ ಖಜಾಂಚಿ ಮಹಾದೇವಪ್ಪ ಬೊಮ್ಮನಹಳ್ಳಿ ಶ್ರೀಮಂತ ಚಲುವಾದಿ ಶಿವರಾಜಕುಮಾರ ಪಾಣೆಗಾಂವ್ ಎಂ ಪಟೇಲ್ ಖಾಜಾ ಅಜ್ಮೀರ್ ರಾಘವೇಂದ್ರ ಭಕ್ರಿ ನಾಗರಾಜ ನಾಯಕ ಮನಮೋಹನ್ ದೇವಾಪುರ ಪುರುಷೋತ್ತಮ ದೇವತ್ಕಲ್ ಮದನ್ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here