ತಂಬಾಕು ಮನುಷ್ಯನನ್ನು ಕೊಲ್ಲುವ ವಿಷವಿದ್ದಂತೆ: ಆರ್.ವಿ.ನಾಯಕ

0
27

ಸುರಪುರ: ತಂಬಾಕು ಅಥವಾ ಧೂಮಪಾನ ಎಂಬುದು ಮನುಷ್ಯನಿಗೆ ಮಾರಕವಾದ ವಿಷವಿದ್ದಂತೆ,ತಂಬಾಕು ಸೇವಿಸುವ ವ್ಯಕ್ತಿಗೆ ಕ್ಯಾನ್ಸರ್,ಕ್ಷಯದಂತ ಅನೇಕ ರೋಗಗಳು ಹರಡಿ ನಿತ್ಯವನ್ನು ಕ್ರಷಗೊಳಿಸಿ ಸಾವಿನೆಡೆಗೆ ಕೊಂಡೊಯ್ಯುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಮಾತನಾಡಿದರು.

ತಾಲ್ಲುಕು ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಸ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ,ಇಂದು ಅನೇಕ ಜನ ವೃಧ್ಧರು ಹೊಗೆ ಸೊಪ್ಪು,ತಂಬಾಕು ಜಗಿಯುವುದು ಮಾಡುತ್ತಾರೆ.ಅಲ್ಲದೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಗುಟ್ಕಾ,ಮಾವದಂತಹ ತಂಬಾಕಿನ ಪದಾರ್ಥಗಳನ್ನ ಸೇವಿಸುವ ಮೂಲಕ ಅನೇಕ ರೋಗಗಳಿಗೆ ತುತ್ತಾಗುತ್ತಾರೆ.ಇದರ ಬಗ್ಗೆ ಪ್ರತಿಯೊಬ್ಬರು ಜಾಗೃತರಾಅಗಬೇಕಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೋರ್ವ ವೈದ್ಯ ಹರ್ಷವರ್ಧನ ರಫಗಾರ ಮಾತನಾಡಿ,ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಅಥವಾಅ ಧೂಮಪಾನ ನಿಷೇಧವಿದೆ. ಆದರೆ ಕಾನೂನು ಕಟ್ಟು ನಿಟ್ಟಾಗಿ ಪಾಲನೆಯಾಗಬೇಕಿದೆ,ಇದರಿಂದ ವಾತವರಣ ಕಲುಚಿತಗೊಳ್ಳುವುದನ್ನು ತಡೆಯಬಹುದಾಗಿದೆ. ಅಲ್ಲದೆ ಕುಟುಂಬದಲ್ಲಿನ ಜನರು ಮಕ್ಕಳುಗಳ ಮುಂದೆ ತಂಬಾಕು ಸೇವನೆಯನ್ನು ಬಿಡಬೇಕು,ಇದರಿಂದ ಮಕ್ಕಳನ್ನು ತಂಬಾಕು ಸೇವನೆಯಿಂದ ದೂರವಿಟ್ಟಂತಾಗಲಿದೆ.

ಅನೇಕ ಜನರು ತಂಬಾಕು ಸೇವನೆಯಿಂದ ಹಲ್ಲು,ದವಡೆ ಕ್ಯಾನ್ಸರ್, ಉದರ ಕ್ಯಾನ್ಸರ್‌ನಂತಹ ಮಾರಕ ರೋಗದಿಂದ ಬಳಲಿದ್ದನ್ನು ಕಾಣುತ್ತೆವೆ. ಸಾರ್ವಜನಿಕರು ಇಂತಹ ಸಂಗತಿಯ ಬಗ್ಗೆ ಅರಿವು ಮೂಡಿಸುವ ಮೂಲಕ ಸಾಮಾಜಿಕ ಕಾಳಜಿ ತೋರಬೇಕು. ಇದನ್ನು ಕುರಿತು ನಾವುಗಳು ಜಾಗೃತಿ ಮೂಡಿಸುವ ಸಂಕಲ್ಪ ಮಡೋಣ ಎಂದರು. ಕಾರ್ಯಕ್ರಮದಲ್ಲಿ ಅನೇಕ ಜನ ವೈದ್ಯರು ಮತ್ತು ಆರೋಗ್ಯ ಸಹಯಕಿಯರು ಹಾಗು ಸಾರ್ವಜನಿಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here