ಕೆಪಿಎಸ್ಸಿ ನೇಮಕಾತಿ ಆದೇಶ ತಡೆಗೆ ಡಾ. ಸರ್ದಾರ ಆಯಪ್ಪ ಆಗ್ರಹ

0
112

ಕಲಬುರಗಿ: ತಳವಾರ, ಪರಿವಾರ ಸಮುದಾಯಗಳಗೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವವರಿಗೆ ರಾಜ್ಯ ಸರಕಾರ ಗ್ರಾಮ ಪಂಚಾಯಿತಿ ಚುನಾವಣೆ, ಕೆಪಿಎಸ್ಸಿ ನೇಮಕಾತಿ, ಹಾಗೂ ಸರಕಾರಿ ನೌಕರರ ಮುಂಬಡ್ತಿಯನ್ನು ತಡೆಹಿಡಿಯಬೇಕು ಮತ್ತು ಈಗಾಗಲೇ ಇದಕ್ಕೆ ಸಂಬಂಧಿಸಿ ಹೊರಡಿಸಿರುವ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷರಾದ ಡಾ. ಸರ್ದಾರ ರಾಯಪ್ಪ ಹೇಳಿದರು.

ತಳವಾರ, ಪರಿವಾರ ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 12ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಮಾತನಾಡಿದವರು, ತಳವಾರ ಪರಿವಾರ ಸಮುದಾಯಗಳಿಗೆ ನೀಡಬೇಕಾಗಿದ್ದ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡದೆ ಗೊಂದಲ ಸೃಷ್ಟಿಸಿ ರಾಜ್ಯ ಸರಕಾರ ಈಗಾಗಲೇ ಅನ್ಯಾಯ ಮಾಡಿದೆ. ಅಷ್ಟೇ ಅಲ್ಲದೆ  ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ನಿಲ್ಲುವ ಅಭ್ಯರ್ಥಿಗಳಿಗೆ, ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಮುಂಬಡ್ತಿ ಪಡೆಯಲಿರುವ ನೌಕರರಿಗೆ ಸಿಗುವ ಮೀಸಲಾತಿಯನ್ನು ಕಿತ್ತುಕೊಳ್ಳುವ  ಉದ್ದೇಶದಿಂದ ಸರಕಾರ ತರಾತುರಿಯಲ್ಲಿ ಆದೇಶಗಳನ್ನು ಹೊರಡಿಸುತ್ತಿದೆ ಎಂದು ಆರೋಪಿಸಿದರು.

Contact Your\'s Advertisement; 9902492681

ತಳವಾರ, ಪರಿವಾರರ ಪರಿಶಿಷ್ಟ ಪಂಗಡ ಕುರಿತು ಜ್ವಲಂತ ಸಮಸ್ಯೆ  ಕಣ್ಣೆದುರಿಗೆ ಇರುವಾಗ ಬಗೆಹರಿಸದೆ, ಈ ಎಲ್ಲಾ  ಆದೇಶಗಳನ್ನು  ಹೊರಡಿಸುವ  ಅಗತ್ಯ ಏನಿತ್ತು. ಸರಕಾರದ ಉದ್ದೇಶವಿಷ್ಟೇ  ಯಾರದೋ ಹಿತ ಕಾಪಾಡಿ, ತಳವಾರ ಪರಿವಾರ  ಸಮುದಾಯಗಳಿಗೆ ಅನ್ಯಾಯ ಮಾಡುವುದು. ಈಗಲಾದರೂ ರಾಜ್ಯ ಸರಕಾರ ಎಚ್ಚೆತ್ತುಕೊಂಡು ನಮಗಾದ ಅನ್ಯಾಯವನ್ನು ಸರಿಪಡಿಸಿ ಆದೇಶಗಳನ್ನು ಹೊರಡಿಸಲಿ ಎಂದು ಆಗ್ರಹಿಸಿದರು.

ಒಂದು ವೇಳೆ ಈ ಸಮಸ್ಯೆಯನ್ನು ಹಾಗೆ ಇಟ್ಟು ಸರಕಾರ ಮುಂದುವರೆದರೆ  ನಾವು  ತಡೆಯಾಜ್ಞೆ ಕೋರಿ  ನ್ಯಾಯಾಲಯದ  ಮೋರೆ ಹೋಗುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದ ಅವರು ಈ ವಿಷಯದಲ್ಲಿ  ಸರಕಾರ ಕಡೆಗಣಿಸಿದರೆ ವಿದ್ಯಾರ್ಥಿಗಳು,  ಗ್ರಾಮ ಪಂಚಾಯಿತಿ ಚುನಾವಣೆಯ ಆಕಾಂಕ್ಷಿ ಅಭ್ಯರ್ಥಿಗಳು, ಉದ್ಯೋಗಕಾಂಕ್ಷಿಗಳು ಮತ್ತು ಸರಕಾರಿ ನೌಕರರು ಸೇರಿಕೊಂಡು ಉಗ್ರವಾದ ಹೋರಾಟ ಮಾಡಲಾಗುವುದೆಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರಾಜೇಂದ್ರ ರಾಜವಾಳ, ಚಂದ್ರಶೇಖರ ಜಮಾದಾರ ವಕೀಲರು , ಸುನಿತಾ ತಳವಾರ್, ದಿಗಂಬರ ಕಾಡಪ್ಪಗೋಳ, ಶರಣು ಕೋಲಿ, ದಿಗಂಬರ ಡಾಂಗೆ, ಚಂದ್ರಕಾಂತ್ ಗಂವ್ಹಾರ ,ಅನಿಲ ಕಾಮಣ್ಣ ವಚ್ಚಾ,   ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here