ಮಹಿಳೆಯರ ಸಬಲೀಕರಣದಿಂದಲೇ ಕುಟುಂಬದ ಅಭಿವೃದ್ಧಿ: ಸೂಗೂರು

0
111

ಜೇವರ್ಗಿ:  ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆಗಳನ್ನು ಮಾಡುತ್ತಿದ್ದು ಪ್ರತಿಯೊಂದು ಮನೆಯಲ್ಲಿ ಸಹ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಗೊಳ್ಳುವ ಮೂಲಕ ಕಾನೂನುಬದ್ಧವಾಗಿ ಹಕ್ಕುಗಳನ್ನು ಪಡೆದುಕೊಂಡು ಮುಂದೆ ಬರಲು ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು ಸ್ವಸಹಾಯ ಸಂಘಗಳನ್ನು ಕಟ್ಟಿಕೊಂಡು ಕುಟುಂಬದ ಅಭಿವೃದ್ಧಿಗೆ ಶ್ರಮಿಸುವುದು ಈಗ ಸುಲಭವಾಗಿದೆ ಎಂದು ವಕೀಲರಾದ ಮಲ್ಲಿಕಾರ್ಜುನ ಸೂಗೂರ್ ಹೇಳಿದರು.

ತಾಲೂಕಿನ ಗಂವಾರ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಜೇವರ್ಗಿ ವತಿಯಿಂದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ದಾನಮ್ಮ ಗಂಡ ಗದಿಗೆಪ್ಪ ಸೇರಿದಂತೆ ಉಪಾಧ್ಯಕ್ಷರಾದ ಹಕಿಂ ಪಟೇಲ್ ಹಾಗೂ ಅಂಗನವಾಡಿ ಕಾರ್ಯಕರ್ತರ ತಹರ ಬೇಗಂ, ಈಜೇರಿ ವಲಯ ಮೇಲ್ವಿಚಾರಕರಾದ ಜಯಶ್ರೀ ಪಾಟೀಲ್ ಸೇವಾ ಪ್ರತಿನಿಧಿಯಾದ ಬಸ್ಸಮ್ಮ ಹಾಗೂ 5 ತಂಡದ ಸದಸ್ಯರು ಹಾಜರಿದ್ದರು. ಕಾರ್ಯಕ್ರಮವನ್ನು ತಾಲೂಕು ಸಮನ್ವಯ ಅಧಿಕಾರಿಗಳಾದ ಶಂಕ್ರು ಬಾಯಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here