ಹೈಕೋರ್ಟ್ ಪೀಠಕ್ಕೆ ಸ್ಥಳೀಯ ನ್ಯಾಯವಾದಿಗಳ ನೇಮಕ್ಕೆ ಒತ್ತಾಯ

0
63

ಕಲಬುರಗಿ: ಹೈಕೋರ್ಟ್ ಪೀಠಕ್ಕೆ ಬೆಂಗಳೂರಿನ ವಕೀಲರನ್ನು AAG ಯಾಗಿ ನೇಮಕಗೊಳಿಸಿ ರಾಜ್ಯ ಸರಕಾರ ಈ ಭಾಗದ ನ್ಯಾಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವಕೀಲರ ಸಮೂಹಕ್ಕೆ ಸಿಕ್ಕಿರುವ ಅವಕಾಶವನ್ನು ವಂಚಿಸಿ ಅನ್ಯಾಯ ಮಾಡಿದೆ ಎಂದು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗ್ರತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಜೇ. ವಿನೋದ ಕುಮಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಈ ಕ್ರಮದ ವಿರುದ್ಧ ಈ ಭಾಗದ ನ್ಯಾಯವಾದಿ ಮಿತ್ರರು ಸಂಘಟಿತರಾಗಿ ಹೋರಾಟ ನಡೆಸಿ ಆದೇಶ ರದ್ದತಿಗೆ ಕಲ್ಯಾಣ ಕರ್ನಾಟಕ ನ್ಯಾಯವಾದಿಗಳ ಒಕ್ಕೂಟ  ಕರೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ನಿನ್ನೆ  ಸೆಪ್ಟೆಂಬರ್ 8 ವಿಶ್ವ ಸಾಕ್ಷರತೆ ದಿನ ದಂದು ಈ ಭಾಗದ ನ್ಯಾಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವಕೀಲರ ಸಮೂಹಕ್ಕೆ ಅಪರೂಪಕ್ಕೆ ಸಿಗುವ ಅವಕಾಶದಿಂದ ವಂಚಿತಗೊಳಿಸಿ, ಅನ್ಯಾಯ ಗೊಳಪಡಿಸಿದೆ, ಕಳೆದ ಸರ್ಕಾರ ಮಾಡಿದ ತಪ್ಪನ್ನು ಸರಿಪಡಿಕೊಂಡು ಸರಿ ದಾರಿಯಲ್ಲಿ ಸಾಗದೆ ಮತ್ತೆ ಅದೇ ತಪ್ಪು ನಿರ್ಣಯವನ್ನು ತೆಗೆದುಕೊಂಡು ಅಭಿವೃದ್ಧಿ ಹೊಂದಲು ಪ್ರಯತ್ನಿಸುವ ಕಾಲಕ್ಕೆ ಈ ರೀತಿ ಅನ್ಯಾಯ ಗೊಳಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ತ್ವರಿತವಾಗಿ ಈ ನೇಮಕವನ್ನು ರದ್ದು ಗೊಳಿಸಿ ಸ್ಥಳೀಯರಿಗೆ ನೇಮಕ ಗೋಳಿಸಲು ಒಕ್ಕೂಟದ ಪರವಾಗಿ ಜೇ. ವಿನೋದ ಕುಮಾರ ತಮ್ಮ ಅಭಿಪ್ರಾಯ ಮೂಲಕ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here