ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಆಗ್ರಹಿಸಿ DYFI SFI ಪ್ರತಿಭಟನೆ

0
117

ಕವಿತಾಳ: ಪಟ್ಟಣದ 2, 3, 5, 6,& 7 ನೇ ವಾರ್ಡ್ ಗಳಲ್ಲಿ ಉಂಟಾಗಿರುವ ವಿವಿಧ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಇಂದು ಪಟ್ಟಣದ ಪಂಚಾಯಿತಿ ಎದುರು SFI &DYFI ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಗಿತು.

ಪಟ್ಟಣದ ಪಂಚಾಯಿತಿ SFI &DYFI ಹಾಗೂ ವಾರ್ಡಿನ ನಾಗರೀಕರು ಪಂಚಾಯಿತಿ ಮುತ್ತಿಗೆ ಹಾಕಿ ವಾರ್ಡಿಗೆ 15 ದಿನಗಳಿಂದ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಅನೇಕ ಬಾರಿ ಮುಖ್ಯಾಧಿಕಾರಿ ಹಾಗೂ ವಾರ್ಡಿನ ಸದಸ್ಯರ ಗಮನಕ್ಕೆ ತಂದರೂ ಸಹ ಈವರೆಗೂ ನೀರಿನ ಸಮಸ್ಯೆ ಬಗೆಹರಿಸಲು ಮೀನಾಮೇಷ ಏಣಿಸುತ್ತಿರುವುದು ಖಂಡನೀಯವಾಗಿದೆ ಎಂದು SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಹೇಳಿದರು.

Contact Your\'s Advertisement; 9902492681

ಮುಖ್ಯಾಧಿಕಾರಿಗಳಿಗೆ SFI &DYFI ಅನೇಕ ಬಾರಿ ಮನವಿ ಸಲ್ಲಿಸಿದೆ. ಸಹಾಯಕ ಆಯುಕ್ತರು ಸಹ ಮುಖ್ಯಾಧಿಕಾರಿಗಳಿಗೆ ಪಟ್ಟಣದ ಎಲ್ಲಾ ವಾರ್ಡಿನ ನೀರಿನ ಸಮಸ್ಯೆ ಬಗೆಹರಿಸಲು ಅಧಿಕೃತ ಪತ್ರದ ಮೂಲಕ ಸೂಚಿಸಿದರೂ ಸಹಾಯಕ ಆಯುಕ್ತರ ಮಾತಿಗೆ ಬೆಲೆ ಇಲ್ಲದಂತಾಗಿದೆ. 5 & 6 ನೇ ವಾರ್ಡ್ ನಲ್ಲಿ ಇರುವ ಸಾರ್ವಜನಿಕ ಶೌಚಾಲಯಗಳ ಜನರ ಬಳಕೆಗೆ ಅವಕಾಶ ಮಾಡಿಕೊಡಬೇಕು. ವಿದ್ಯುತ್ ದೀಪ, ಚರಂಡಿ ಸ್ವಚ್ಚತೆ, ಸೇರಿದಂತೆ ಅನೇಕ ಮೂಲಸೌಕರ್ಯ ಗಳಿಂದ ವಂಚಿತವಾಗಿದೆ.

ವಾರ್ಡ್ ಗೆ ನೀರಿನ ಸಮಸ್ಯೆಯನ್ನು ಬಗೆಹರಿಸಿ ನಿತ್ಯ ವು ಒಂದು ಬಾರಿ ನೀರು ಬಿಡುವಂತೆ ಮಾಡಬೇಕು. ಕರ್ತವ್ಯ ಲೋಪ ಎಸೆಗುವ ವಾಟರ್ ಮ್ಯಾನ್ ಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಪಟ್ಟಣದ ಎಲ್ಲಾ ವಾರ್ಡ್ ಗಳ ರಸ್ತೆ, ಚರಂಡಿ ಸ್ವಚ್ಛತೆ, ವಿದ್ಯುತ್ ದೀಪ ಅಳವಡಿಕೆ (ರಿಪೇರಿ) ಸೇರಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಸಿದರು

ಈ ಸಂದರ್ಭದಲ್ಲಿ SFI ನಗರ ಘಟಕ ಅಧ್ಯಕ್ಷರಾದ ಮೌನೇಶ ಬುಳ್ಳಾಪುರ, ಕಾರ್ಯದರ್ಶಿ ವೆಂಕಟೇಶ್ DYFI ಮುಖಂಡ ಮಹಾದೇವ SFI &DYFI ಮುಖಂಡರಾದ ನಾಗಮೋಹನ್ ಸಿಂಗ್, ದೇವರಾಜ್, ಶರಣಬಸವ, ಮಲ್ಲಿಕಾರ್ಜುನ, ಕುಪ್ಪಣ್ಣ, ವಾರ್ಡಿನ ನಿವಾಸಿಗಳಾದ ಚೌಡಮ್ಮ, ಹನುಮಂತಿ, ಚೌರಮ್ಮ, ಗಂಗಮ್ಮ, ಯಲ್ಲಮ್ಮ,ಸಾಬಮ್ಮ,ಲಕ್ಷ್ಮಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here