ಕಸಾಪ ಚುನಾವಣೆ: ಶೇಖರಗೌಡ ಮಾಲಿಪಾಟೀಲರಿಗೆ ಓಟು ಯಾಕೆ ಹಾಕಬೇಕು?

0
197

ಕಲಬುರಗಿ: ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಈ ಬಾರಿ ಸ್ಪರ್ಧೆ ಬಯಸಿದ್ಧು, ಕಸಾಪ ಸದಸ್ಯ ಮತದಾರರು ಈ ಬಾರಿ ನನಗೆ ಆಶೀರ್ವದಿಸಬೇಕು ಎಂದು ಕೊಪ್ಪಳ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ. ಶೇಖರಗೌಡ ಮಾಲಿಪಾಟೀಲ ಮನವಿ ಮಾಡಿದರು.

ಈ ಹಿನ್ನೆಲೆಯಲ್ಲಿ ಬುಧವಾರ ನಗರಕ್ಕೆ ಆಗಮಿಸಿದ ಅವರು ಇ-ಮೀಡಿಯಾ ಲೈನ್ ಜೊತೆ ಮಾತನಾಡಿದರು. ಅದರ ವಿವರ ಈ ಕೆಳಗಿನಂತಿದೆ.

Contact Your\'s Advertisement; 9902492681

ಪ್ರ: ತಮಗೆ ಯಾಕೆ ಓಟು ಹಾಕಬೇಕು?

ಉ: ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವ ನಾನು, ಈ ಹಿಂದೆ 2011ರಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಸೇವೆ ಸಲ್ಲಿಸಿದ್ದು, ಕರ್ನಾಟಕ ರಾಜ್ಯ ಸಹಕಾರ ಮಂಡಳದ ಅಧ್ಯಕ್ಷನಾಗಿ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ.

ಪ್ರ: ಕಸಾಪ ರಾಜ್ಯ ಘಟಕಕ್ಕೆ ಚುನಾವಣೆ ಯಾವಾಗ?

ಉ: ಕಾರ್ಯಕಾರಿ ಸಮಿತಿ ನಿರ್ಣಯದ ಆಧಾರದಲ್ಲಿ ತಿದ್ದುಪಡಿಯಾದ ಬೈಲಾ ಪ್ರಕಾರ ಮಾರ್ಚ್ ತಿಂಗಳಿಗೆ ಐದು ವರ್ಷದ ಅವಧಿ ಮುಗಿಯುತ್ತದೆ. 6 ತಿಂಗಳು ಮುಂದೆ ಹೋದರೂ ಮುಂದಿನ ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಬಹುದು.

ಪ್ರ: ಈ ಬಾರಿಯ ಚುನಾವಣೆಯ ಪ್ರಮುಖ ಅಭ್ತರ್ಥಿಗಳಾರು?

ಉ: ಶೇಖರಗೌಡ ಮಾಲಿಪಾಟೀಲ, ಶಿ. ಸೋಮಶೇಖರ, ಮಹೇಶ ಜೋಶಿ, ವ.ಚ. ಚನ್ನೇಗೌಡ,, ಸಿ.ಕೆ. ರಾಮೇಗೌಡ, ಲಕ್ಷ್ಮೀನಾರಾಯಣ ಮುಂತಾದವರ ಹೆಸರು ಕೇಳಿ ಬರುತ್ತಿವೆ.

ಪ್ರ: ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನ ಅಲಂಕರಿಸಿದ ಈ ಭಾಗದ (ಕಲ್ಯಾಣ ಕರ್ನಾಟಕ-ಉತ್ತರ ಕರ್ನಾಟಕ) ಅಭ್ಯರ್ಥಿಗಳು ಯಾರು?

ಉ: ಪ್ರೊ. ಚಂಪಾ ಹಾಗೂ ಡಾ. ಮನು ಬಳಿಗಾರ ಬಿಟ್ಟರೆ ಈವರೆಗೆ ಈ ಭಾಗದವರು ಯಾರೂ ಆಗಿಲ್ಲ. ಅದರಲ್ಲೂ ಕಲ್ಯಾಣ ಕರ್ನಾಟಕದವರಂತೂ ಯಾರೂ ಆಗಿಲ್ಲ. ಚಂಪಾ, ಬಳಿಗಾರ ಅವರು ಸಹ ಈಗ ಬೆಂಗಳೂರಿಗರೇ ಆಗಿದ್ದಾರೆ.

ಪ್ರ: ಕಸಾಪ ಸದಸ್ಯರ ಸಂಖ್ಯೆ ಎಷ್ಟು?

ಉ: ಅಂದಾಜು ಮೂರು ಲಕ್ಷ ಮೂವತ್ತು ಸಾವಿರದಷ್ಟಿರಬಹುದು. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಸೇರಿ ಶೇ. 50 ರಷ್ಟು ಮತದಾರ ಬಾಂಧವರಿದ್ದಾರೆ.

ಪ್ರ: ಈ ಹಿಂದೆ ತಾವು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾಗ ಪಡೆದ ಮತಗಳೆಷ್ಟು?

ಉ: ಆಗಿನ ಸಂದರ್ಭವೇ ಬೇರೆ ಇತ್ತು. ಆಗ ಪುಂಡಲೀಕ ಹಾಲಂಬಿ ವಿಜಯ ಸಾಧಿಸಿದರು. ನನಗೆ 6,700 ಮತಗಳು ಬಂದಿದ್ದವು.

ಪ್ರ: ಈಗ ನಿಮ್ಮ ಗೆಲುವು ಹೇಗೆ ಸಾಧ್ಯ?

ಉ: ಸಾಹಿತ್ಯ, ಸಾಮಾಜಿಕ, ಶೈಕ್ಷಣಿಕ ಸೇವೆ ಸಲ್ಲಿಸಿರುವ ನಾನು ಕಳೆದ 30 ವರ್ಷಗಳಿಂದ ಮತದಾರ ಬಾಂಧವರ ಜೊತೆ ಆಗಿನಿಂದಲೂ ನಿಕಟ ಸಂಪರ್ಕವಿಟ್ಟುಕೊಂಡಿದ್ದೇನೆ. ನಾಡಿನ ಹಿರಿಯ ಸಾಹಿತಿಗಳಾದ ಎಸ್.ಜಿ. ಸಿದ್ಧರಾಮಯ್ಯ, ಎಲ್. ಹನುಂತಯ್ಯ, ಹಂಸಲೇಖ, ಸುಕನ್ಯಾ ಮಾರುತಿ, ವಸುಂಧರಾ ಭೂಪತಿ, ಬಿ.ಟಿ. ಲಲಿತಾನಾಯಕ, ಆರ್.ಜಿ. ಹಳ್ಳಿ ನಾಗರಾಜ, ರಾಘವೇಂದ್ರ ಮತ್ತಿತರರನ್ನು ಭೇಟಿಯಾಗಿದ್ದು, ಅವರೆಲ್ಲರೂ ಭರವಸೆ ನೀಡಿದ್ದಾರೆ ಎಂದರು.

105 ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ ಅನ್ನು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನಾಗಿ ಬೆಳೆಸಲು, ಕನ್ನಡ ಭಾಷೆ, ಕನ್ನಡ ವಿಶ್ವ ಕನ್ನಟ ಮೊದಲಾದ ಸಮಸ್ತ ಕನ್ನಡಿಗರ ಆಶಯಗಳನ್ನು ನನಾಗಿಸಲು, ಕೇಂದ್ರ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಚುನಾವಣೆಯಲ್ಲಿ ನನಗೆ ನಿಮ್ಮ ಬೆಂಬಲ ಮತ್ತು ಆಶೀರ್ವಾದ ನೀಡಬೇಕು ಎಂದು ಮತದಾರ ಬಾಂಧವರಲ್ಲಿ ಪ್ರಾರ್ಥಿಸಿದರು.

ಜಿಲ್ಲಾ ಕಸಾಪ ಅದ್ಯಕ್ಷ ವೀರಭದ್ರ ಸಿಂಪಿ, ಪ್ರಧಾನ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಕೋಶಾಧ್ಯಕ್ಷ ದೌಲತರಾಯ ಮಾಲಿ ಪಾಟೀಲ, ಸಿ.ಎಸ್ ಮಾಲಿಪಾಟೀಲ,ಡಾ. ಸೂರ್ಯಕಾಂತ ಪಾಟೀಲ, ಪ. ಮಾನು ಸಗರ, ಶಿವಾನಂದ ಕಶೆಟ್ಟಿ, ಕೆ.ಎಸ್. ಬಂಧು ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here