ಕರ್ನಾಟಕ ಉರ್ದು ಅಕಾಡೆಮಿಗೆ ನೂತನ ಸದಸ್ಯತ್ವ ನೇಮಕಕ್ಕೆ ಒತ್ತಾಯಿಸಿ ಪ್ರತಿಭಟನೆ

0
164

ಕಲಬುರಗಿ: ಕರ್ನಾಟಕ ಉರ್ದು ಅಕಾಡೆಮಿಗೆ ನೂತನ ಸದಸ್ಯರ ನೇಮಕ ಮಾಡಬೇಕೆಂದು ಸ್ಥಳೀಯ ಸಾಹಿತಿ ಹಾಗೂ ಕವಿಗಳು ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದರು.

ಹೈದರಾಬಾದ್ ಕರ್ನಾಟಕ ಸೂಶಿಯಲ್ ಜಾಗೃತಿ ಫೋರಮ್ ನೇತೃತ್ವದಲ್ಲಿ ಪ್ರತಿಭಟನೆ ಜರುಗಿದ್ದು, ಕಳೆದ ಒಂದು ವರ್ಷದ ಅವಧಿಯಿಂದ ಅಕಾಡೆಮಿಗೆ ಯಾವುದೇ ಸದಸ್ಯರ ಸಮಿತಿ ರಚನೆ ಮಾಡದೇ ರಾಜ್ಯ ಸರಕಾರ ಉರ್ದು ಅಕಾಡೆಮಿಯನ್ನು ನಿರ್ಲಕ್ಷ್ಯಸುತ್ತಿದೆ ಎಂದು ಫೋರಮ್ ಅಧ್ಯಕ್ಷರಾದ ಸಾಜಿದ್ ಅಲಿ ರಂಜೋಳ್ವಿ ಅಸಮಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ನೂತರ ಸದಸ್ಯ ಸಮಿತಿ ರಚನೆ ಇಲ್ಲಿದೇ ಅಕಾಡೆಮಿಯ ಚಟುವಟಿಕೆಗಳು ನಿಂತು ಹೋಗಿದ್ದು ಕೂಡಲೇ ರಾಜ್ಯ ಸರಕಾರ ಉರ್ದು ಅಕಾಡೆಮಿಗೆ ನೂತನ ಸಮಿತಿ ರಚಿಸಿ ಅಕಾಡೆಮಿಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಉರ್ದು ಶಾಹಿತಿಗಳಾದ ಡಾ. ಫಹಿಮೋದ್ದಿನ್ ಪಿರ್ಜಾದಾ, ಉರ್ದು ಕವಿಗಳಾದ ಡಾ. ವಹಿದ್ ಅಂಜುಮ್, ಅಜುಮನ್ ತರಖಿ-ಎ- ಹಿಂದ್ ಶಾಖೆಯ ಸದಸ್ಯರಾದ ಖಾಜಾ ಪಾಶಾ ಇನಾಮದಾರ್, ರಫೀಕ್ ರಹೇಬರ್,  ಅಫಜಲ್ ಮಹೇಮುದ್, ಶಕೀಲ್ ಸರಡಗಿ, ಮೋದಿನ್ ಪಟೇಲ ಅಣಬಿ, ಸಲೀಮ್ ಚಿತಾಪೂರಿ, ಏಜಾಜ್ ಇನಾಮದಾರ್, ಜಾಕೀರ್ ಚಿಂಚೋಳಿ, ಬಾಬಾ ಫಕರುದ್ದೀನ್, ಸಲೀಮ್ ಅಲ್ತಮಶ್, ಡಾ. ಅಫಸರ್ ಪಾಶಾ, ಕಾರ್ತಿಕ್ ನಾಟೇಕರ್, ಕಲ್ಯಾಣ ರಾವ್, ಡಾ. ರಫೀಕ್ ಕಮಲಾಪೂರಿ, ಖಾಲೀಕ್ ಅಹ್ಮದ್, ಶೇಖ್ ಮಹೇಬೂಬ್, ಜಾವೀದ್ ಹಸನ್, ಮೊಹಮ್ಮದ್ ಸಿರಾಜ್, ಆಸೀಫ್ ಚಿಂಚೋಳಿ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here